Chitradurga: ಕಾಂಗ್ರೆಸ್ ಟಿಕೆಟ್ ಗಾಗಿ ಜಿಲ್ಲೆಯ 6 ಕ್ಷೇತ್ರದ ಆಕಾಂಕ್ಷಿಗಳ ಮೆಗಾ ಫೈಟ್

By Gowthami KFirst Published Dec 30, 2022, 8:07 PM IST
Highlights

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೈ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಭೇಟಿ  ವೇಳೆ ಆಯಾ ಕ್ಷೇತ್ರದ ಆಕಾಂಕ್ಷಿಗಳು  ಅಭಿಮಾನಿಗಳೊಂದಿಗೆ ಕಚೇರಿಗೆ ಬಂದು ತಮ್ಮ ಶಕ್ತಿ ಪ್ರದರ್ಶನ ತೋರಿದರು.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಡಿ.30): ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೈ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಭೇಟಿ ಮತ್ತು ಪರಿಶೀಲನೆ ವೇಳೆ ಆಯಾ ಕ್ಷೇತ್ರದ ಆಕಾಂಕ್ಷಿಗಳು ತಮ್ಮ ಅಭಿಮಾನಿಗಳೊಂದಿಗೆ ಕಚೇರಿಗೆ ಆಗಮಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ತೋರಿದರು. ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಗ್ಗೆ 10ಗಂಟೆ ಸುಮಾರಿಗೆ ಅಗಮಿಸಿದ ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್ ಹಾಗೂ ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಆಗಿರುವ ಮಯೂರ್ ಜಯಕುಮಾರ್ ಕಚೇರಿಯಲ್ಲಿ ಕುಳಿತು ಮಾರ್ನಿಂಗ್ ಸೆಷನ್ ನಲ್ಲಿ ಹಿರಿಯೂರು, ಚಿತ್ರದುರ್ಗ ಹಾಗೂ ಹೊಸದುರ್ಗ ಭಾಗದ ಕಾಂಗ್ರೆಸ್ ಆಕಾಂಕ್ಷಿಗಳನ್ನು ಮಾತ್ರ ಒಳಗಡೆ ಬಿಡಲು ಹೇಳು ಒಳಗೆ ತೆರಳಿದರು.

ಇನ್ನೂ ಆಯಾ ಕ್ಷೇತ್ರದ ಸಮಯದ ಆಗಮಿಸುತ್ತಿದ್ದಂತೆ ಮೊದಲಿಗೆ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ಕೈ ಆಕಾಂಕ್ಷಿಗಳ ಸಭೆಯಲ್ಲಿ ಮಾಜಿ MLC ಬಿ.ಸೋಮಶೇಖರ್ ಹಾಗೂ ಮಾಜಿ ಸಚಿವ ಡಿ.ಸುಧಾಕರ್ ಸೇರಿದಂತೆ  5 ಕ್ಕೂ ಅಧಿಕ ಆಕಾಂಕ್ಷಿಗಳು ಕಾರ್ಯದರ್ಶಿಗಳ ಮುಂದೆ ಹಾಜರಾದರು. ಸುಮಾರು ಒಂದು ಗಂಟೆಗಳ ಕಾಲ ಪ್ರತೀ ಕ್ಷೇತ್ರದ ಆಕಾಂಕ್ಷಿಗಳ‌ ಜೊತೆ ಚರ್ಚೆ ನಡೆಸಿ ಅಭ್ಯರ್ಥಿಗಳ ಬಗೆಗೆ ಪರಿಶೀಲನೆ ನಡೆಸಿದ ನಾಯಕರು ಪಕ್ಷದ ತೀರ್ಮಾನಕ್ಕೆ ಬದ್ದರಾಗಿರಬೇಕು ಎಂದು ಖಡಕ್ ಸಂದೇಶ ರವಾನಿಸಿದರು.

ಇನ್ನೂ 11 ಗಂಟೆ ಆಗ್ತಿದ್ದಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯಲ್ಲಿ ಘಟಾನುಟಿ ನಾಯಕರ ದಂಡೇ ಹರಿದು ಬಂದಿತು. ಚಿತ್ರದುರ್ಗದಿಂದ ಎರಡು ಬಾರಿ ಆಯ್ಕೆ ಆಗಿರುವ ಮಾಜಿ MLC ರಘು ಆಚಾರ್ ಸಿಂಪಲ್ ಆಗಿ ತಮ್ಮ ನಾಲ್ಕೈದು ಕಾರ್ಯಕರ್ತರೊಂದಿಗೆ ಆಗಮಿಸಿ ಪಕ್ಷದ ಕಚೇರಿಯಲ್ಲಿ ನಡೆಯುತ್ತಿದ್ದ ಆಕಾಂಕ್ಷಿಗಳ‌ ಸಭೆಯಲ್ಲಿ ಭಾಗಿಯಾದರು. ಆದ್ರೆ ಮೊನ್ನೆ ತಾನೇ ಮುರುಘಾ ಶ್ರೀ ವಿರುದ್ಧದ ಪಿತೂರಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಶಾಸಕ ಎಸ್. ಕೆ ಬಸವರಾಜನ್ ಜೈಲಿಂದ ಬಿಡುಗಡೆ ಆಗಿದ್ದು ಇದೀಗ‌ ಸಕ್ರೀಯ ರಾಜಕಾರಣದತ್ತ ಹೆಚ್ಚು ಒಲವು ತೋರ್ತಿದ್ದಾರೆ.

ಕಾಂಗ್ರೆಸ್ ಕಚೇರಿಗೂ ಆಗಮನಕ್ಕೂ ಮುನ್ನ ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಆಗಮಿಸಿ ಎಸ್ ಕೆಬಿ ಕಾಂಗ್ರೆಸ್ ಕಚೇರಿಯ ಒಳಗೆ ಗ್ರಾಂಡ್ ಎಂಟ್ರಿ ಕೊಟ್ಟರು. ತಮ್ಮ ಎಲ್ಲಾ ಅಭಿಮಾನಿಗಳು ಬೇಕೆ ಬೇಕು ಟಿಕೆಟ್ ಬೇಕು ಎಂದು ಘೋಷ ವಾಕ್ಯ ಕೂಗುತ್ತಾ ಎಸ್ ಕೆಬಿ ಪೋಟೋಗಳ ಪ್ರದರ್ಶನ ಮಾಡುತ್ತ ಕಚೇರಿಯತ್ತ ಧಾವಿಸಿದರು. ಇನ್ನೂ ಈ ವೇಳೆ ಅಭಿಮಾನಿಗಳು ಅವರನ್ನು ಹೆಗಲ ಮೇಲೆ ಕೂರಿಸಿ ಮೆರವಣಿಗೆ ಮಾಡಿಕೊಂಡು ಬರುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ತೋರಿದರು.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ ನಿರಾಸೆ, ಹೈಕಮಾಂಡ್ ಹೊಸ ರೂಲ್ಸ್ !

ಬಳಿಕ ಆಗಮಿಸಿದ ಪಪ್ಪಿ ಬೆಂಬಲಿಗರು ನಾವೇನು ಯಾರಿಗಿಂತ ಕಮ್ಮಿ ಇಲ್ಲ ಎಂಬಂತೆ, ನೂರಾರು ಸಂಖ್ಯೆಯಲ್ಲಿ ಅಭ್ಯರ್ಥಿ ಇಲ್ಲದೇ ಖಾಲಿ ಬಂದು ಕಾಂಗ್ರೆಸ್ ಕಚೇರಿ ಮುಂದೆ ಕೊಂಚ ಕಾಲ ಗೊಂದಲ ಸೃಷ್ಟಿ ‌ಮಾಡಿದರು. ಈ ಮೊದಲೇ ಕೇವಲ ಆಕಾಂಕ್ಷಿಗಳು ಮಾತ್ರ ಕಚೇರಿ ಒಳಗೆ ಆಗಮಿಸಬೇಕು ಎಂದು ಖಡಕ್ ಆಗಿಯೇ ಸಂದೇಶ ನೀಡಿದ್ದ ಕಾರ್ಯದರ್ಶಿಗಳು ಪಪ್ಪಿ ಆಗಮಿಸದ ಹಿನ್ನೆಲೆ ಆತನ ಭೇಟಿಯನ್ನು ರದ್ದು ಪಡಿಸಿದರು. ಅದೇ ರೀತಿ‌ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಕ್ಕೆ‌ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್ ಆಂಜನೇಯ ತಮ್ಮ ಬೆಂಬಲಿಗರೊಂದಿಗೆ ಅರಾಮಾಗಿ ಆಗಮಿಸಿ ಕಚೇರಿ ಒಳಗೆ ತೆರಳಿ ತಮ್ಮ ನಾಯಕರ ಭೇಟಿ ಮಾಡಿ ಬಂದರು. ಆದ್ರೆ ಸದ್ಯ ಕ್ಷೇತ್ರದಲ್ಲಿ ತನಗೆ ಟಿಕೆಟ್ ಸಿಗಲಿದೆ ಎಂದು ಮಹತ್ವಾಕಾಂಕ್ಷೆ ಹೊಂದಿರುವ ರಘು ತಮ್ಮ ನೂರಾರು ಬೆಂಬಲಿಗರನ್ನು ಕಟ್ಟಿಕೊಂಡು ಬಂದು ಕಚೇರಿ ಮುಂದೆ ಶಕ್ತಿ ಪ್ರದರ್ಶನ ಮಾಡಿದರು.

ಟಿಕೆಟ್‌ ನಿರ್ಧಾರ ಜನರದ್ದು, ಬಿ ಫಾರ್ಮ್‌ ನಿರ್ಧಾರ ನನ್ನದು: ಎಚ್‌.ಡಿ.ದೇವೇಗೌಡ

ಒಟ್ಟಾರೆಯಾಗಿ ಇದೆಲ್ಲದರ ಕುರಿತು ಪ್ರತಿಕ್ರಿಯೆ ನೀಡಿದ ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್ ಚಿತ್ರದುರ್ಗ ಜಿಲ್ಲೆ ಆರು‌ ಕ್ಷೇತ್ರಕ್ಕೆ ಒಟ್ಟು 57 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಅದ್ರಲ್ಲಿ ಕೆಲ ಆಕಾಂಕ್ಷೆಗಳು ಇಂದು ನಮ್ಮನ್ನು‌ ಭೇಟಿ ಮಾಡಿದರು‌. ಎಲ್ಲಾ ಆಕಾಂಕ್ಷಿಗಳ ಹಿನ್ನೆಲೆಯನ್ನು ತಿಳಿದುಕೊಳ್ಳಕಾಯಿತು. ಹಾಗೂ ಮುಂದಿನ‌ ಚುನಾವಣೆಯನ್ನು ನೀವು ಯಾವ ರೀತಿ ಎದುರಿಸ್ತೀರಿ ಎಂದು ಪರಿಶೀಲನೆ ಮಾಡಲಾಯಿತು. ಜೊತೆಗೆ ಕೊನೆಯದಾಗಿ ನಮ್ಮ ಪಕ್ಷದ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತೋ ಅದಕ್ಕೆ ಎಲ್ಲರೂ ಬದ್ದರಾಗಿರಬೇಕು. ಯಾವುದೇ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಪಕ್ಷಕ್ಕೆ ಗೌರವ ‌ಕೊಟ್ಟು‌ ಎಲ್ಲರೂ ಅವರೊಟ್ಟಿಗೆ‌‌ ನಿಂತು ಚುನಾವಣೆ ಮಾಡಬೇಕು ಎಂದು ಎಚ್ಚರಿಕೆಯ ಸಂದೇಶ ನೀಡಿದರು. ಜೊತೆಗೆ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಆರಕ್ಕೆ ಆರೂ ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಮನವಿ ಮಾಡಿಕೊಂಡರು.

click me!