ಮೈಸೂರು (ಸೆ.6) : ಮೈಸೂರು ನಗರಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಮಂಗಳವಾರ (ಸೆ.6) ನಡೆಯಲಿದ್ದು, ಮೂರು ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೂ ಮೀಸಲಾಗಿದೆ. ಮೇಯರ್ ಯಾವ ಪಕ್ಷದವರು ಆಗುತ್ತಾರೆ ಎಂಬುದರ ಮೇಲೆ ಉಪ ಮೇಯರ್ ಯಾರಾಗುತ್ತಾರೆ ಎಂಬುದನ್ನು ನಿರ್ಧಾರವಾಗಲಿದೆ.
ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ:
ಜೆಡಿಎಸ್(JDS)ನಲ್ಲಿ ಮೇಯರ್(Mayor) ಸ್ಥಾನಕ್ಕೆ ಎಂ.ಡಿ. ನಾಗರಾಜು, ಎಸ್‌ಬಿಎಂ ಮಂಜು, ಕೆ.ವಿ. ಶ್ರೀಧರ್, ಬಿಜೆಯಲ್ಲಿ ಶಿವಕುಮಾರ್, ಮ.ವಿ. ರಾಮಪ್ರಸಾದ್, ಕಾಂಗ್ರೆಸ್‌ನಲ್ಲಿ ಜೆ. ಗೋಪಿ, ಸೈಯದ್ ಹಸ್ರತ್‌ವುಲ್ಲಾ, ಅಯಾಜ್‌ಪಾಷ ಮೊದಲಾದವರು ಆಕಾಂಕ್ಷಿತರು. ಮೂರು ಪಕ್ಷಗಳಲ್ಲೂ ಮಹಿಳೆಯರು ಕೇಳುತ್ತಿದ್ದರೂ ಈಗಾಗಲೇ ಮೂರು ಬಾರಿ ಮಹಿಳೆಯರೇ ಮೇಯರ್ ಆಗಿರುವುದರಿಂದ ಈ ಬಾರಿ ಪುರುಷರಿಗೆ ಅವಕಾಶ ಹೆಚ್ಚು.
ಒಟ್ಟು 65 ಸದಸ್ಯ ಬಲದ ಪಾಲಿಕೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ- 22, ಕಾಂಗ್ರೆಸ್- 19, ಜೆಡಿಎಸ್-18, ಬಿಎಸ್ಪಿ-1, ಪಕ್ಷೇತರರು-5 ಸ್ಥಾನ ಗಳಿಸಿದ್ದರು. ಗುರು ವಿನಾಯಕ ಸದಸ್ಯತ್ವ ರದ್ದತಿಯಿಂದ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ರವೀಂದ್ರ ಆಯ್ಕೆಯಾದ್ದರಿಂದ ಆ ಪಕ್ಷದ ಸಂಖ್ಯೆ ಅಷ್ಟೇ ಇದೆ. ಆದರೆ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದತಿಯಿಂದ ನಡೆದ ಉಪ ಚನಾಪಣೆಯಲ್ಲಿ ಕಾಂಗ್ರೆಸ್‌ನ ರಜನಿ ಅಣ್ಣಯ್ಯ ಗೆದ್ದರು. ಹೀಗಾಗಿ ಕಾಂಗ್ರೆಸ್- 20, ಜೆಡಿಎಸ್ 17 ಸದಸ್ಯರನ್ನು ಹೊಂದಿವೆ. ಪಕ್ಷೇತರರ ಪೈಕಿ ಶಿವಕುಮಾರ್ ಹಾಗೂ ಶ್ರೀನಿವಾಸ್- ಕಾಂಗ್ರೆಸ್, ಮ.ವಿ. ರಾಮಪ್ರಸಾದ್- ಬಿಜೆಪಿ ಸೇರಿದ್ದಾರೆ. ಕೆ.ವಿ. ಶ್ರೀಧರ್- ಜೆಡಿಎಸ್‌ನಲ್ಲಿದ್ದಾರೆ. ಸಮೀಯುಲ್ಲಾ ಅಜ್ಜು ಜೆಡಿಎಸ್ ಬೆಂಬಲಿಸಿದ್ದರು. ಬಿಎಸ್ಪಿಯ ಪಲ್ಲವಿ ಬೇಗಂ ಕಳೆದ ಬಾರಿ ಜೆಡಿಎಸ್ ಬೆಂಬಲಿಸಿದ್ದರು.
ಇದಲ್ಲದೇ ಬಿಜೆಪಿಗೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಎಚ್. ವಿಶ್ವನಾಥ್ ಅವರ ಬೆಂಬಲವಿದೆ. ಇದರಿಂದ ಆ ಪಕ್ಷದ ಬಲ 27 ಆಗಲಿದೆ. ಕಾಂಗ್ರೆಸ್‌ಗೆ ಶಾಸಕರಾದ ತನ್ವೀರ್ ಸೇಠ್, ಡಾ.ಡಿ. ತಿಮ್ಮಯ್ಯ, ಮಧು ಮಾದೇಗೌಡ, ದಿನೇಶ್ ಗೂಳೀಗೌಡರ ಬೆಂಬಲವಿದೆ. ಹೀಗಾಗಿ ಅದರ ಬಲ- 26 ಆಗಲಿದೆ. ಜೆಡಿಎಸ್‌ಗೆ ಶಾಸಕರಾದ ಜಿ.ಟಿ. ದೇವೇಗೌಡ, ಮರಿತಿಬ್ಬೇಗೌಡ, ಸಿ,.ಎನ್. ಮಂಜೇಗೌಡರ ಬೆಂಬಲವಿದೆ. ಹೀಗಾಗಿ ಅದರ ಬಲ 21 ಆಗಲಿದೆ. fಬಿಎಸ್ಪಿಯ ಪಲ್ಲಿವಿ ಬೇಗಂ, ಪಕ್ಷೇತರ ಸಮೀಯುಲ್ಲಾ ಅಜ್ಜು ಯಾರಿಗೆ ವೋಟು ಹಾಕುತ್ತಾರೆ ನೋಡಬೇಕು. ಇದಲ್ಲದೇ ಜೆಡಿಎಸ್‌ನಿಂದ ದೂರ ಸರಿದಿರುವ ಮರಿತಿಬ್ಬೇಗೌಡರು ಯಾರನ್ನು ಬೆಂಬಲಿಸುತ್ತಾರೆ ಎಂಬ ಕುತೂಹಲವೂ ಇದೆ.
Suicide attempt: ಹಾಲ್ ಟಿಕೆಟ್ ಸಿಗದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
ಇದೇ ಕಾರಣಕ್ಕೂ ಕೊನೆ ಕ್ಷಣದಲ್ಲಿ ಬಿಜೆಪಿ- ಜೆಡಿಎಸ್ ನಡುವೆ ದೋಸ್ತಿ ಆಗಬಹುದು. ಇಲ್ಲದಿದ್ದರೆ ಕಾಂಗ್ರೆಸ್‌ಗೆ ಛಾನ್ಸ್ ಸಿಗಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಒಂದೇ ಒಂದು ಮತದ ವ್ಯತಾಸವಿದೆ. ಪಲ್ಲವಿ ಬೇಗಂ, ಅಜ್ಜು ಹಾಗೂ ಮರಿತಿಬ್ಹೇಗೌಡರ ಬೆಬಂಲದ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.
ಬಲಾಬಲ: