ಕುಮಾರಸ್ವಾಮಿ ಯಾವತ್ತೂ ರೈತರ ಪರ ಇಲ್ಲ; ಬುಡುಬುಡಿಕೆ ಮಾತು, ಖಾಲಿ ಟ್ರಂಕ್ ಅಷ್ಟೇ: ಡಿಕೆ ಶಿವಕುಮಾರ ವಾಗ್ದಾಳಿ

By Ravi Janekal  |  First Published Apr 20, 2024, 4:27 PM IST

ನಮ್ಮ ಗ್ಯಾರೆಂಟಿ ಯೋಜನೆಗಳಿಂದ ಬಡವರ ಬದುಕು ಹಸನಾಗುತ್ತಿದೆ  ಕುಮಾರಸ್ವಾಮಿ ಯಾವತ್ತೂ ರೈತರ ಪರವಾಗಿ ಇಲ್ಲ, ಹೋರಾಟ ಮಾಡಿಲ್ಲ. ಅವರದು ಬುಡುಬುಡಿಕೆ ಮಾತು, ಖಾಲಿ ಟ್ರಂಕ್ ಎಂದು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಡಿಕೆ ಶಿವಕುಮಾರ ವಾಗ್ದಾಳಿ ನಡೆಸಿದರು.


ಕೆಆರ್‌ಪೇಟೆ (ಏ.20): 18 ತಗೊಂಡು ಬಂದು ನಾವೇ ಕಿಂಗ್ ಮೇಕರ್ ಅಂತಾ ಹೇಳ್ತಾ ಇದ್ರು. ನನಗೆ ಸಿದ್ದರಾಮಯ್ಯ ಜೆಡಿಎಸ್ ಬಗ್ಗೆ ಮಾತಾಡಬೇಡಿ ಬೇಕಾಗುತ್ತೆ ಅಂದ್ರು. ನಮಗೆ ಯಾವ ನೆಂಟಸ್ಥನನೂ ಬೇಡಾ, ಜೋಡೆತ್ತು ಬೇಡಾ ಎಂದಿದ್ದೆ. ಅದರಂತೆಯೇ ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಕೆಆರ್‌ಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ, ಈ ಲೋಕಸಭಾ ಚುನಾವಣೆ ನಮ್ಮ ಸ್ವಾಭಿಮಾನದ ಪ್ರಶ್ನೆಯಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ 8ಕ್ಕೆ 8 ಗೆದ್ದಿದ್ರು. ಆಗ ನಾನು ಕುಮಾರಸ್ವಾಮಿ ಮಗನ ಪರ ಪ್ರಚಾರಕ್ಕೆ ಬಂದಿದ್ದೆ ಜನರು ಕುಮಾರಸ್ವಾಮಿ ಮಗನನ್ನು ಒಪ್ಪಲೇ ಇಲ್ಲ. ಅಂಬರೀಶ್ ಪತ್ನಿಗೆ ಜನರು ಆಶೀರ್ವಾದ ಮಾಡಿದರು. ಇದೀಗ ಮತ್ತೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಬಂದಿದ್ದಾರೆ. ಚನ್ನಪಟ್ಟಣ ಆಯ್ತು, ಈಗ ಮಂಡ್ಯಗೆ ಬಂದಿದ್ದಾರೆ. ನಿಮ್ಮ ತಂದೆ, ಪತ್ನಿ, ನಿನ್ನ ಎಲ್ಲರಿಗೂ ರಾಮನಗರ ಜಿಲ್ಲೆಯ ಜನರು ಅಧಿಕಾರ ಕೊಟ್ಟರು. ಈಗ ತೆನೆ ಹೊತ್ತ ಮಹಿಳೆ ಚಿಹ್ನೆ ಮಾರಿಕೊಂಡಿದಿಯಾ? ನಿನ್ನ ಬಾಮೈದನನ್ನು ಬಿಜೆಪಿಯಲ್ಲಿ ನಿಲ್ಲಿಸಿದಿಯಾ? ಜೆಡಿಎಸ್ ಕಾರ್ಯಕರ್ತರೇ ಜಾಗೃತಿಯಿಂದಿರಿ ಎಂದು ಎಚ್ಚರಿಸಿದರು.

Tap to resize

Latest Videos

ಮತಯಾಚಿಸಿದ  ಡಿಸಿಎಂ ಡಿಕೆ ಶಿವಕುಮಾರ್  ವಿರುದ್ಧ ಎಫ್ಐಆರ್

ಜೆಡಿಎಸ್‌ ಪಕ್ಷ ಜನರಿಗೆ, ಕಾರ್ಯಕರ್ತರಿಗೆ ಇರೋದು ಅಲ್ಲ. ಕೇವಲ ಅವರ ಕುಟುಂಬಕ್ಕೆ ಮಾತ್ರ ಇರೋದು. ದೇವೇಗೌಡರು, ಕುಮಾರಸ್ವಾಮಿಯವರು ಮಂಡ್ಯ ಕ್ಷೇತ್ರಕ್ಕೆ ಏನು ಮಾಡಿದ್ದಾರೆ? ನೀವು ಮಾಡಿದ ಸಾಧನೆ ಏನು ಅಂತಾ ಹೇಳಬೇಕು. ನೀವು ಕೆಆರ್‌ಎಸ್, ಹೇಮಾವತಿ ಕಟ್ಟಿದ್ರಾ? ಬರೀ ರೈತರ ಮಕ್ಕಳು ಎಂದು ಖ್ಯಾತಿ ಪಡೆದಿದ್ದೀರ. ನಾವು ಬಡವರಿಗೆ ಸಹಾಯ ಮಾಡಲು 5 ಗ್ಯಾರಂಟಿ ತಂದಿದ್ದೇವೆ. ಜನರ ಬದುಕು ಹಸನು ಮಾಡುವ ಕೆಲಸ ಮಾಡಿದ್ದೇವೆ. ಇಂತಹ ಕಾರ್ಯಕ್ರಮವನ್ನು ಬಿಜೆಪಿ-ಜೆಡಿಎಸ್ ಇದುವರೆಗೆ ಜಾರಿಗೆ ತಂದಿಲ್ಲ. ಅಧಿಕಾರ ಇರುವಾಗಲೇ ಕುಮಾರಸ್ವಾಮಿಗೆ ಏನು ಮಾಡೋಕೆ ಆಗಿಲ್ಲ. ಈಗ ಏನು ಮಾಡ್ತಾರೆ. ಕುಮಾರಸ್ವಾಮಿ, ರೇವಣ್ಣ, ದೇವೇಗೌಡರು ಗೆದ್ದು ಪಾರ್ಲಿಮೆಂಟ್‌ನಲ್ಲಿ ಏನೂ ಮಾಡಿಲ್ಲ. ಕುಮಾರಸ್ವಾಮಿ ಒಬ್ಬ ಖಾಲಿ ಟ್ರಂಕ್ ಅಷ್ಟೇ ಎಂದು ಲೇವಡಿ ಮಾಡಿದರು.

ಅಧಿಕಾರ ಇದ್ದಾಗ ಏನೂ ಮಾಡಲಾಗದೆ ಈಗ ಬಂದು ನನ್ನೂರು, ನನ್ನ ಜನ ಗೆಲ್ಲಿಸಿ ಅಂತಾ ಇದ್ದಾರೆ. ಜನರನ್ನು ನೋಡ್ತಾ ಇದ್ರೆ ಹಾಸನ ಮಂಡ್ಯದಲ್ಲಿ ಖಂಡಿತವಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲೋದು, ಕುಮಾರಸ್ವಾಮಿ ಸೋಲೋದು ನಿಶ್ಚಿತ ಎಂದರು.

ಬೆಂಗಳೂರು ಗ್ರಾಮಾಂತರ ಪ್ರಬಲ ನಾಯಕರಿಗೂ ಸೋಲುಣಿಸಿದ ಕ್ಷೇತ್ರ: ಎಚ್‌ಡಿಡಿ, ಎಚ್‌ಡಿಕೆ, ಅಂಬಿ, ಡಿಕೆಶಿ ಸೋತವರೇ!

ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅಳಿಯ ಸಹ ಸೋಲೋದು ಗ್ಯಾರಂಟಿ ಮಗ, ಮೊಮ್ಮಗ, ಅಳಿಯ ಮೂರೂ ಜನರು ಸೋತುಹೋಗುತ್ತಾರೆ ಮುಂದೆ ಬಿಜೆಪಿ ಜೊತೆ ಜೆಡಿಎಸ್ ಮರ್ಜ್ ಮಾಡ್ತಾರೆ. ಈಗಲೇ ತೆನೆ‌ ಹೊತ್ತ ಮಹಿಳೆಯನ್ನು ಎಸೆದು ಕುಮಾರಸ್ವಾಮಿ ಕಮಲ‌ ಹಿಡಿದಿದ್ದಾರೆ. ಮಂಡ್ಯದಲ್ಲಿ ಹೊಸ ಮೈ ಶುಗರ್ ಕಾರ್ಖಾನೆ ಕಟ್ಟುತ್ತೇವೆ. ಜಿಲ್ಲೆಯ ಅಭಿವೃದ್ಧಿಗೆ ನಾವು ಶ್ರಮಿಸುತ್ತೇವೆ. ನಾವು ಮೇಕೆದಾಟು ಹೋರಾಟ ಮಾಡಿದ್ದೆವು. ಆಗ ಜೆಡಿಎಸ್‌ ಅವರು ಬೆಂಬಲ ಕೊಡಲಿಲ್ಲ. ಕುಮಾರಸ್ವಾಮಿ ಯಾವತ್ತೂ ರೈತರ ಪರವಾಗಿ ಇಲ್ಲ. ನಿನ್ನದು ಬುಡುಬುಡಿಕೆ ಮಾತು ಎಂದು ಲೇವಡಿ ಮಾಡಿದರು.

click me!