ಮತಯಾಚನೆ ಮಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ .
ಬೆಂಗಳೂರು (ಏ.20): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರ್ ಎಮ್ ಸಿ ಯಾರ್ಡ್ ಠಾಣೆಯಲ್ಲಿ ಎಫ್ಐಆರ್ ಆಗಿದ್ದು, ಮತಯಾಚನೆ ಸಂಬಂಧ ಈ ಬೆಳವಣಿಗೆಯಾಗಿದೆ.
ಡಿಕೆ ಶಿವಕುಮಾರ್ ಅಪಾರ್ಟ್ಮೆಂಟ್ ವೊಂದರಲ್ಲಿ ಮತಯಾಚನೆ ಮಾಡಿದ್ದರು. ಆರ್ ಆರ್ ನಗರದ ಅಪಾರ್ಟ್ಮೆಂಟ್ ಗಳಲ್ಲಿ ಮತಯಾಚನೆ ಮಾಡಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮಾಹಿತಿ ನೀಡಿತ್ತು. ಈ ಬೆನ್ನಲ್ಲೇ ಮಾಹಿತಿ ಪಡೆದು ಎಫ್ಐಆರ್ ದಾಖಲು ಮಾಡಲಾಗಿದೆ.
ಸಹೋದರ ಡಿಕೆ ಸುರೇಶ್ ಪರ ಡಿಕೆ ಶಿವಕುಮಾರ್ ಮತ ಯಾಚನೆ ಮಾಡಿದ್ದರು ಈ ವೇಳೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 171(B)(C)(E)(F) ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ. ಲಂಚ ಮತ್ತು ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಬಳಸಿರೋ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ.
ಹೆಣ್ಣು ಅಬಲೆಯಲ್ಲ ಎಂಬ ಸಂದೇಶದ ಜತೆ ಒನಕೆ ಓಬವ್ವನ ರೂಪ ತಾಳಿದ ಡಿಕೆಶಿ ಪುತ್ರಿ ಐಶ್ವರ್ಯ
ಡಿಕೆಶಿ ನೀಚ ಎಂದ ಹೆಚ್‌ಡಿಕೆ
ನೀಚ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅವರಿಗೆ ಒಳ್ಳೆದಾಗಲಿ, ಒಳ್ಳೆ ಚೆನ್ನಾಗಿ ಮಾತುಗಳನ್ನ ಆಡುತ್ತಿದ್ದಾರೆ. ಡಿಕ್ಷನರಿಯಲ್ಲಿರುವ ಪದಗಳನ್ನ ಹುಡುಕಿ ಮಾತನಾಡುತ್ತಿದ್ದಾರೆ, ಒಳ್ಳೆದಾಗಲಿ ಎಂದರು.
ಇನ್ನು 50 ಕೋಟಿ ದುಡ್ಡು ಇಲ್ಲದೇ ಡಿಕೆಶಿ ಮನೆಗೆ ಹೋಗಲ್ಲ ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ನಾನು ದಿನಾ ನಿದ್ರೆ ಮಾಡುತ್ತಿಲ್ಲ. ಅವರೂ ನಿದ್ರೆ ಮಾಡ್ತಿಲ್ಲ ನಾನೂ ನಿದ್ರೆ ಮಾಡುತ್ತಿಲ್ಲ. ನನಗೆ ಸಿಕ್ಕಿಲ್ವಲ್ಲ. ಅವರಿಗೆ ಸಿಗುತ್ತಿದೆ ನನಗೆ ಈ ಚಾನ್ಸ್ ಸಿಗಲಿಲ್ಲ ಅಲ್ವ ಅಂತ ಅವರು ನಿದ್ದೆ ಮಾಡುತ್ತಿಲ್ಲ ಎಂದರು.
ಐಪಿಎಲ್ ಗೆ ಕಿಕ್ ಹೆಚ್ಚಿಸಲು, 120 ರಿಂದ 4 ಸಾವಿರ ಬೆಲೆಯ ಟಾಪ್ 10 ಬೆಸ್ಟ್ ವಿಸ್ಕಿ ಮತ್ತು ಬಿಯರ್
ಮುಂಬೈಯಲ್ಲಿ ನಾಟಕೀಯ ವರ್ತನೆ ಡಿಕೆಶಿ ಮಾಡಿದ್ರು ಎಂಬ ಹೆಚ್ಡಿಕೆ ಹೇಳಿಕೆಗೆ ಬಂಡೆತರ ನಿಂತೆ ಅಂತನಾದ್ರು ಒಪ್ಪಿಕೊಳ್ತಾರೆ ಅಲ್ವಾ, ನಾಟಕನಾದ್ರೂ ಮಾಡಿದೆ ಅಲ್ವಾ? ಅದನ್ನು ಜಿ.ಟಿ.ದೇವೇಗೌಡ್ರು, ಶಿವಲಿಂಗೇಗೌಡ್ರು, ಬಾಲಕೃಷ್ಣ ಅವರೆಲ್ಲ ಹೇಳಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಬಿಳೋಕೆ ಡಿಸೆಂಬರ್ ಡೆಡ್ ಲೈನ್ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಗೊತ್ತಾಗುತ್ತಿದೆ, ಅವರು ಏನೇನು ಮಾಡಿದ್ರು ಅಂತ. ಸದ್ಯಕ್ಕೆ ಬಿಜೆಪಿ ಮತ್ತು ಜೆಡಿಎಸ್ ಪಾರ್ಟಿ ಎಲೆಕ್ಷನ್ ಆದ ಮೇಲೆ ಏನಾಗುತ್ತೆ ಅಂತ ಅವರೇ ಉತ್ತರೇ ಕೊಡುತ್ತಾರೆ
ಕನಕಪುರದಲ್ಲಿ ಲೀಡ್ ತೆಗೆದುಕೊಳ್ತೇವೆ ಎಂಬ ದೇವೇಗೌಡರ ಹೇಳಿಕೆಗೆ , ಲೀಡ್ ತೆಗೆದುಕೊಳ್ಳಲಿ ನಾನು ಬೇಡ ಅಂದಿದ್ದೇನಾ? 28 ಸೀಟ್ ನ್ನು ಮೋದಿಯವರಿಗೆ ಅರ್ಪಿಸಿ ಬಿಡಲಿ ಎಂದು ಡಿಕೆಶಿ ಹೇಳಿದ್ದಾರೆ.