ಯಾವನೋ ಒಬ್ಬ ತಗಡುನ ಮಂತ್ರಿ ಮಾಡಿಬಿಟ್ಟು ಬೇಡಾ ಕಣಯ್ಯ ಕಾಟಾ; ಮಂಡ್ಯದಲ್ಲಿ ಗೌಡರ ಡೈಲಾಗ್!

By Sathish Kumar KH  |  First Published Mar 16, 2024, 11:15 AM IST

ಮಂಡ್ಯದಲ್ಲಿ ಇವನು ಯಾವನೋ ಒಬ್ಬ ತಗಡುನ ಮಂತ್ರಿ ಮಾಡಿಬಿಟ್ಟು  ಬೇಡಾ ಕಣಯ್ಯ ಕಾಟಾ. ದುರಾಹಂಕಾರ ಆತನ ಕೈಯಲ್ಲಿ ಮಾತನಾಡಿಸ್ತಿದೆ.


ಮಂಡ್ಯ (ಮಾ.16): ಮಂಡ್ಯದಲ್ಲಿ ಇವನು ಯಾವನೋ ಒಬ್ಬ ತಗಡುನ ಮಂತ್ರಿ ಮಾಡಿಬಿಟ್ಟು  ಬೇಡಾ ಕಣಯ್ಯ ಕಾಟಾ. ದುರಾಹಂಕಾರ ಆತನ ಕೈಯಲ್ಲಿ ಮಾತನಾಡಿಸ್ತಿದೆ. ದುಡ್ಡು ಇರುವವರೇಲ್ಲ ಆತನ ಹತ್ತಿರ ಹೋಗ್ತಾರೆ, ಅದೇ ಅವನ ಅದೃಷ್ಟ. ಮಂಡ್ಯ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಕಡಿಮೆ ಕುಳ ಅಲ್ಲ. ಕೆರೆ ನೀರೆಲ್ಲ ನದಿಗೆ ಹೋಗುತ್ತೆ, ನದಿ ನೀರೇಲ್ಲ ಸಮುದ್ರಕ್ಕೆ ಹೋಗುತ್ತೆ ಅಲ್ವಾ. ದುಡ್ಡಿರುವವರೆಲ್ಲ ಅವರ ಬಳಿ ಹೋಗ್ತಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಬಗ್ಗೆ ನಾಗಮಂಗಲ ಮಾಜಿ ಶಾಸಕ ಸುರೇಶ್‌ಗೌಡ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಂಡ್ಯ ಲೋಕಸಭಾ ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ‌. ಕಾರ್ಯಕರ್ತರ ಆಸೆಗೆ ನಿರಾಸೆ ಬಾರದ ರೀತಿ ತೀರ್ಮಾನ ಎಂದಿದ್ದಾರೆ. ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಬೇಕು. ಇಲ್ಲ ಕಳೆದ ಬಾರಿ ಮೋಸದಿಂದ ಅನ್ಯಾಯವಾಗಿ ಸೋತ ನಿಖಿಲ್ ಅಭ್ಯರ್ಥಿ ಆಗಬೇಕೆಂಬುದು ಮತದಾರರ ಆಸೆಯಾಗಿದೆ. ಕುಮಾರಸ್ವಾಮಿಯವರಿಗೆ ಅಪರೇಷನ್ ಇದೆ, ಮುಗಿಸಿ ಅಭ್ಯರ್ಥಿ ಘೋಷಣೆ ಮಾಡ್ತಾರೆ ಎಂದು ಹೇಳಿದರು.

Latest Videos

undefined

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎಚ್‌ಡಿಕೆ ಅಥವಾ ನಿಖಿಲ್‌ ಸ್ಪರ್ಧೆ: ಸುಳಿವೇನು?

ಹೊಟ್ಟೆಪಾಡಿಗೆ ಕುಮಾರಸ್ವಾಮಿ ಬಿಜೆಪಿ ಜೊತೆಗೆ ಹೋಗಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ ಬಗ್ಗೆ ಪ್ರತಿಕ್ರಿಯೆ ಮಾಡಿದ ಅವರು, ಯಾರ್ಯಾರು ಹೊಟ್ಟೆಪಾಡಿಗಾಗಿ ಎಲ್ಲೆಲ್ಲಿ ಬಂದ್ರು ಏನೇನು ಮಾಡಿದ್ರು ಅನ್ನೋದು ತರೆದಿಟ್ಟ ಪುಸ್ತಕವಾಗಿದೆ. ಮಂಡ್ಯದಲ್ಲಿ ಇವನು ಯಾವನೋ ಒಬ್ಬ ತಗಡುನ ಮಂತ್ರಿ ಮಾಡಿಬಿಟ್ಟು  ಬೇಡಾ ಕಣಯ್ಯ ಕಾಟಾ.! ದುರಾಹಂಕಾರ ಆತನ ಕೈಯಲ್ಲಿ ಮಾತನಾಡಿಸ್ತಿದೆ. ದುಡ್ಡು ಇರುವವರೇಲ್ಲ ಆತನ ಹತ್ತಿರ ಹೋಗ್ತಾರೆ, ಅದೇ ಅವನ ಅದೃಷ್ಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕಡಿಮೆ ಕುಳ ಅಲ್ಲ. ಕೆರೆ ನೀರೆಲ್ಲ ನದಿಗೆ ಹೋಗುತ್ತೆ, ನದಿ ನೀರೇಲ್ಲ ಸಮುದ್ರಕ್ಕೆ ಹೋಗುತ್ತೆ, ದುಡ್ಡಿರುವವರೆಲ್ಲ ಅವರ ಬಳಿ ಹೋಗ್ತಾ ಇದ್ದಾರೆ. ಏನಾದ್ರು ಮಾಡಿ ದುಡ್ಡಿಂದ ಅಧಿಕಾರ ಪಡೆಯಲು ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.

ಇನ್ನು ಕಾಂಗ್ರೆಸ್ ಅಭ್ಯರ್ಥಿಗೆ (ಸ್ಟಾರ್ ಚಂದ್ರು) ರಾಜಕಾರಣದ ಅನುಭವ ಕಮ್ಮಿ. ಸುಮಲತಾ ಅವರ ಬಗ್ಗೆ ನಾನು ಯಾವತ್ತು ಮಾತನಾಡಿಲ್ಲ‌. ಅಂಬರೀಶ್ ಅಣ್ಣ ಇದ್ದಾಗ ಅವರ ಮನೆಗೆ ಹೋಗ್ತಿದ್ವಿ, ಬರ್ತಿದ್ವಿ. ಅಕ್ಕ ಅಂತ ಕರಿಯುತ್ತಿದ್ವಿ ಇವಾಗಲು ಅಕ್ಕ ಅಂತನೇ ಕರೆಯೋದು. ರಾಜಕೀಯದಲ್ಲಿ ಎಂತ ಎಂತವರೋ ಒಂದಾಗುತ್ತಾರೆ ಇದ್ಯಾವುದಪ್ಪ? ಮಂಡ್ಯ ಕ್ಷೇತ್ರ ಬಿಜೆಪಿಗೆ ಬಿಟ್ಟಿಕೊಟ್ಟಿದ್ರೆ, ನಾನು ಮೈತ್ರಿ ಪರ ಮಾಡಬೇಕಿತ್ತಲ್ವಾ ನಾವು ಮೈತ್ರಿ ಧರ್ಮ ಪಾಲನೆ ಮಾಡ್ತೇವೆ. ನಾವು ಕಾಂಗ್ರೆಸ್‌ನವರಲ್ಲ ಬೆನ್ನಿಗೆ ಚೂರಿ ಹಾಕೋಕೆ. ಇವರ ಯೋಗ್ಯತೆಗೆ ಕಳೆದ ಬಾರಿ ಕಾಂಗ್ರೆಸ್‌ನವರು ಮೋಸ ಮಾಡಿದ್ದರು. ಪಾರ್ಟಿಯಿಂದ ಒಂದು ನೋಟಿಸ್ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಸ್ವತಃ ನಿಖಿಲ್‌ಗೆ ಅನ್ಯಾಯ ಮಾಡಿದ್ದೇವೆ ಅಂತ ಒಪ್ಪಿಕೊಂಡಿದ್ದಾರೆ. ಇನ್ನೋಬ್ರು ಡ್ರಾಮಾ ಮಾಡಿದೆ ಅಂದರು. ನಮ್ಮ ಪಕ್ಷದ ಅಭ್ಯರ್ಥಿಯನ್ನ ಪಕ್ಷ ತೀರ್ಮಾನ ಮಾಡುತ್ತದೆ. ಯಾರೇ ಅಭ್ಯರ್ಥಿ ಆದರೂ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ ಎಂದು ತಿಳಿಸಿದರು.

ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಬೆಳಗಾವಿ ಸ್ಪರ್ಧೆಗೆ ಒಪ್ಪಿಗೆ: ಜಗದೀಶ್‌ ಶೆಟ್ಟರ್‌

ನಾಟಿ ಬ್ರೀಡ್ ಎಂಬ ಚಲುವರಾಯಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಯಾರು ನಾಟಿ, ಚಲುವರಾಯಸ್ವಾಮಿ ಅವರಿಗೆ ಒಂದು ಮಾತು ಹೇಳಿ. ನಾಗಮಂಗಲ ಇತ್ತಿಚೆಗೆ ಮಂಡ್ಯ ಜಿಲ್ಲೆಗೆ ಸೇರಿರೋದು. ನಾವು ಹಾಸನ ಜಿಲ್ಲೆಯಲ್ಲಿ ಇದ್ವಿ. ಆತನಿಗೆ ಇತಿಹಾಸ ಗೊತ್ತಿಲ್ಲ ಪಾಪ. ಹಾಗಾದ್ರೆ ನಮ್ಮನ್ನ ಹೊರಗಿನವರು ಅಂತಾರಾ? ಅಧಿಕಾರ, ಹಣ ಇದೆ. ಹಣ ಇರುವವರು ಇದ್ದಾರೆ ಮಾತನಾಡಲಿ. ಇಷ್ಟರಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ಬರ್ತಾರೆ‌ ಎಂದು ಹೇಳಿದರು.

click me!