ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಫೈನಲ್ ಆಗಿದೆ. ಅಭ್ಯರ್ಥಿಯ ಹೆಸರನ್ನು ಸೂಕ್ತ ಸಮಯದಲ್ಲಿ ಪ್ರಕಟಿಸುತ್ತೇವೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸೂಚ್ಯವಾಗಿ ಹೇಳಿದರು.
ಮಂಡ್ಯ (ಜ.03): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಫೈನಲ್ ಆಗಿದೆ. ಅಭ್ಯರ್ಥಿಯ ಹೆಸರನ್ನು ಸೂಕ್ತ ಸಮಯದಲ್ಲಿ ಪ್ರಕಟಿಸುತ್ತೇವೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸೂಚ್ಯವಾಗಿ ಹೇಳಿದರು. ಚುನಾವಣೆಗೆ ನಾನಾಗಲೀ ಅಥವಾ ನಮ್ಮ ಮನೆಯವರಾಗಲೀ ಸ್ಪರ್ಧೆ ಮಾಡುತ್ತಿಲ್ಲ. ಸಚಿವರು ಸ್ಪರ್ಧೆ ಮಾಡಬೇಕು ಎಂದು ನಮ್ಮ ಹೈಕಮಾಂಡ್ ಯಾವ ಸೂಚನೆಯನ್ನೂ ಕೊಟ್ಟಿಲ್ಲ. ಜಿಲ್ಲೆಯ ಎಲ್ಲರನ್ನೂ ಒಟ್ಟಾಗಿಸಿ ಅಭ್ಯರ್ಥಿ ಆಯ್ಕೆ ಮಾಡೋ ಸೂಚನೆ ಕೊಟ್ಟಿದೆ. ಅದನ್ನು ಶಿರಸಾವಹಿಸಿ ನಮ್ಮ ಜಿಲ್ಲೆಯ ಶಾಸಕರು, ಮುಖಂಡರು ನಿರ್ವಹಿಸುವುದಾಗಿ ಮಂಡ್ಯದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಿಎಂ ಆಹ್ವಾನಿಸದೆ ರಾಜಕೀಯ: ಅಯೋಧ್ಯೆಯಲ್ಲಿ ಜ. ೨೨ರಂದು ಶ್ರೀರಾಮಂದಿರ ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡದೆ ಬಿಜೆಪಿಗರು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಇಂತಹ ನಡವಳಿಕೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಶ್ರೀರಾಮ ಎಲ್ಲರಿಗೂ ಸೇರಿದ ದೇವರು. ರಾಮಮಂದಿರ ಕಟ್ಟಿರುವುದಕ್ಕೆ ಬಿಜೆಪಿಯವರಿಗಿಂತ ನಾವೇ ಹೆಚ್ಚು ಖುಷಿ ಪಡುತ್ತೇವೆ. ರಾಮಮಂದಿರ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಮಭಕ್ತರ ಮೇಲೆ ಕಾಂಗ್ರೆಸ್ಸಿಗೆ ಇಷ್ಟೊಂದು ಆಕ್ರೋಶ ಏಕೆ?: ಶಾಸಕ ವೇದವ್ಯಾಸ್ ಕಾಮತ್
ರಾವಣ ಮಾತ್ರ ಅಲ್ಲ ಸಿದ್ದರಾಮಯ್ಯ ಕೂಡ ರಾಮನ ವಿರೋಧಿ ಎಂಬ ಹೇಳಿಕೆ ನೀಡಿರುವ ಮಾಜಿ ಸಚಿವ ಸುನೀಲ್ ಕುಮಾರ್‌ಗೆ ಟಾಂಗ್ ನೀಡಿದ ಸಚಿವರು, ಪಾಪ... ಸುನೀಲ್ ಬಹಳ ಹೈ ಟೋನ್ ಬಳಸಿ ನೋಡಿದರು. ಆದರೆ, ಪಕ್ಷದ ಅಧ್ಯಕ್ಷನೂ ಆಗಲಿಲ್ಲ, ವಿಪಕ್ಷ ನಾಯಕನೂ ಆಗಲಿಲ್ಲ. ಈಗ ಇನ್ನೇನಾದರೂ ಹುದ್ದೆ ತಪ್ಪಿಹೋಗಬಹುದು ಎಂಬ ಭಯದಿಂದ ಸುನೀಲ್, ಅಶ್ವಥ್ ನಾರಾಯಣ್ ಎಲ್ಲಾ ಕೂಗಾಡ್ತಾ ಇದ್ದಾರೆ. ಅವರೆಲ್ಲರೂ ನನಗೂ ಆತ್ಮೀಯರೇ, ಪಾಪ ಕೂಗ್ಲಿ ಬಿಡಿ ಎಂದು ಪ್ರತಿಕ್ರಿಯಿಸಿದರು.
ಶೀಘ್ರ ಬರ ಪರಿಹಾರ ಹಣ ಬರಲಿದೆ: ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾರಿಗೆ ಮನವರಿಕೆ ಮಾಡಿದ್ದೇವೆ. ಕೇಂದ್ರದಿಂದ ಆದಷ್ಟು ಬೇಗ ಬರ ಪರಿಹಾರ ಹಣ ಬರಲಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಸಚಿವರು ಪ್ರಧಾನಿ ಸೇರಿದಂತೆ ಕೇಂದ್ರದ ಗೃಹ ಸಚಿವರು, ಸಂಬಂಧಪಟ್ಟ ಇಲಾಖೆ ಸಚಿವರಿಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿದ್ದೇವೆ. ಸಮಿತಿ ಮುಖ್ಯಸ್ಥರಾಗಿರುವ ಅಮಿತ್ ಶಾ ನಮ್ಮ ಮನವಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಬರ ಪರಿಹಾರದ ಹಣ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶ್ರೀರಾಮಮಂದಿರ ರೀವೆಂಜ್ ತೀರಿಸಿಕೊಳ್ಳಲು ಹೊರಟಿದೆ: ಪ್ರಲ್ಹಾದ್ ಜೋಶಿ
ಕೇಂದ್ರದಿಂದ ಹಣ ಬಿಡುಗಡೆ ವಿಳಂಬವಾಗಿದ್ದರಿಂದ ರಾಜ್ಯ ಸರ್ಕಾರ ರಾಜ್ಯದ ರೈತರ ಪ್ರತಿ ಹೆಕ್ಟೇರ್‌ಗೆ 2 ಸಾವಿರ ಬರ ಪರಿಹಾರ ನೀಡಲು ಘೋಷಣೆ ಮಾಡಲಾಯಿತು. ಉಳಿದಂತೆ ಕೇಂದ್ರದಿಂದ ಹಣ ಬಂದ ಕೂಡಲೇ ರೈತರ ಅಕೌಂಟ್ ಗೆ ತಲುಪಲಿದೆ ಎಂದರು. ರೈತರು ಯಾವ ವಿಚಾರವಾಗಿ ಧರಣಿ ಮುಂದುವರೆಸಿದ್ದಾರೋ ಗೊತ್ತಿಲ್ಲ. ಕಾವೇರಿ ಚಳವಳಿ ಸ್ಥಳಕ್ಕೆ ಮುಖ್ಯಮಂತ್ರಿಗಳು ಸೇರಿದಂತೆ ನಾನು, ಜಿಲ್ಲಾ ಮಟ್ಟದ ಅಧಿಕಾರಿಗಳು ರೈತರ ಮನವಿ ಆಲಿಸಿ ಚಳವಳಿ ಕೈ ಬಿಡುವಂತೆ ಮನವಿ ಮಾಡಿದ್ದೇವೆ. ಆದರೂ ಧರಣಿ ಮುಂದುವರೆಸಿದ್ದಾರೆ ಎಂದರು. ಎರಡು ತಿಂಗಳಿಂದ ತಮಿಳುನಾಡಿಗೆ ನೀರು ಬಿಡುತ್ತಿಲ್ಲ. ಅಣೆಕಟ್ಟೆಯಲ್ಲಿ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡುಲು ಹೇಗೆ ಸಾಧ್ಯ. ಎರಡು ತಿಂಗಳಿಂದ ತಮಿಳುನಾಡಿಗೆ ಒಂದು ಹನಿ ನೀರು ಬಿಟ್ಟಿಲ್ಲ. ಧರಣಿ ಕೈ ಬಿಡುವಂತೆ , ನಮ್ಮ ಜೊತೆ ಚರ್ಚೆ ನಡೆಸುವಂತೆ ಕೋರಿದ್ದೇವೆ. ಹೋರಾಟಗಾರರು ಮಾತ್ರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.