ಕೋಲಾರ ಬಿಜೆಪಿಯಲ್ಲಿ ಕೋಲಾಹಲ, MP ಮುನಿಸ್ವಾಮಿ ನಡೆಗೆ ಸಿಡಿದೆದ್ದ ಮೂಲ ಬಿಜೆಪಿಗರು

By Suvarna News  |  First Published May 6, 2022, 11:33 PM IST

* ಮಾಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ…
* ಸಂಸದ ಮುನಿಸ್ವಾಮಿ ನಡೆಗೆ ಮೂಲ ಬಿಜೆಪಿಗರು ಆಕ್ರೋಶ  
* ಹೈಕಮಾಂಡ್‌ಗೆ ದೂರು ನೀಡಲು ತೀರ್ಮಾನ


ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್

ಕೋಲಾರ, (ಮೇ.06) :
ಕೋಲಾರ ಜಿಲ್ಲೆಗೆ ಸೇರಿರುವ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಒಡೆದ ಮನೆಯಾಗಿದೆ. ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇಪ೯ಡೆಗೆ ಮುಂದಾಗಿರುವ ಮಾಜಿ ಶಾಸಕ ಮಂಜುನಾಥ್ ಗೌಡ ವಿರುದ್ದ ಮೂಲ ಬಿಜೆಪಿಗರೂ ವಿರೋಧ ಮಾಡ್ತಿದ್ದು, ಬಹಿರಂಗವಾಗಿ ಸಂಸದ ಮುನಿಸ್ವಾಮಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ವಿರದ್ದ 2013 ರಲ್ಲಿ ಸ್ಪರ್ಧಿಸಿ ಮಂಜುನಾಥ್ ಗೌಡ ಜೆಡಿಎಸ್ ಪಕ್ಷದಿಂದ ಗೆಲುವು ಸಾಧಿಸಿದ್ರ.  2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ನಂಜೇಗೌಡ ಅವರ ವಿರುದ್ದ ಸೋಲು ಕಂಡಿದ್ರು. ಬಳಿಕ ರಾಜಕೀಯದಿಂದ ದೂರ ಉಳಿದುಕೊಂಡಿದ್ದ ಮಾಜಿ ಶಾಸಕ ಮಂಜುನಾಥ್ ಗೌಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮುನಿಸ್ವಾಮಿ ಪರವಾಗಿ ಕೆಲಸ ಮಾಡಿದ್ರು.ಈ ಋಣವನ್ನು ತೀರಿಸಲು ಸಂಸದ ಮುನಿಸ್ವಾಮಿ ಮಂಜುನಾಥ ಗೌಡರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಸಕ೯ಸ್ ಮಾಡುತ್ತಿದ್ದಾರೆ. ಸಂಸದರ ಜೊತೆಗೆ ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಸಹ ಕೈ ಜೊಡಿಸಿದ್ದಾರೆ.

Tap to resize

Latest Videos

ಜೆಡಿಎಸ್​​ ಅಡ್ಜೆಸ್ಟ್​ ಆಗಲ್ಲ, ಕಾಂಗ್ರೆಸ್​ ಅಷ್ಟಕ್ಕಷ್ಟೇ, ಬಿಜೆಪಿಯತ್ತ ಇಬ್ಬರು ಮಾಜಿ ಶಾಸಕರು

ಇದೆಲ್ಲದರ ಬೆಳವಣಿಗೆ ಜೊತೆಗೆ ಈಗಾಗಲೇ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆದಿದ್ದು ಮೂಲ ಬಿಜೆಪಿಗರಿಗೆ ಟಿಕೇಟ್ ನೀಡಬೇಕು. ಇಲ್ಲಿ ನಮ್ಮ ಸಲಹೆ ಸಹ ಕೇಳದೆ ಅದೇಗೆ ಬಿಜೆಪಿ ಪಕ್ಷವನ್ನು ಸೋಲಿಸಿದ ಮಂಜುನಾಥ ಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ತಿದ್ದೀರಿ ಅಂತ ಸಂಸದ ಮುನಿಸ್ವಾಮಿ ವಿರುದ್ದ ಬಹಿರಂಗವಾಗಿ ಆಕ್ರೋಶ ಹೊರ ಹಾಕ್ತಿದ್ದಾರೆ.

ಈ ಭಾರಿ ಟಿಕೇಟ್ ನೀಡಿದ್ರೆ ಮೂಲ ಬಿಜೆಪಿಗರಿಗೆ ಮಾತ್ರ ನೀಡಬೇಕು. ಇಲ್ಲವಾದ್ರೆ ನಾವು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಅಂತ ಮೂಲ ಬಿಜೆಪಿಗರು ತಿರುಗಿಬಿದ್ದಿದ್ದಾರೆ. ಇನ್ನು ಸಂಸದ ಮುನಿಸ್ವಾಮಿ ನಡೆಯ ವಿರುದ್ದ ಬೇಸತ್ತಿರುವ ಮೂಲ ಬಿಜೆಪಿಗರೂ ಹೈಕಮಾಂಡ್ ಗೆ ದೂರು ನೀಡಲು ತಯಾರಿ ಮಾಡಿಕೊಂಡಿದ್ದಾರೆ. ಈ ರೀತಿ ನಮ್ಮ ಪಕ್ಷದವರಿಗೆ ಮೋಸ ಮಾಡುವ, ಕಿತಾಪತಿ ಮಾಡುವ ಸಂಸದರು ನಮಗೆ ಬೇಡ. ಮುಂದಿನ ಚುನಾವಣೆಯಲ್ಲಿ ಸಂಸದ ವಿರುದ್ದವೂ ಚುನಾವಣೆ ಮಾಡ್ತೇವೆ ಅಂತ ದೂರು ನೀಡಲು ತೀಮಾ೯ನ ಮಾಡಿಕೊಂಡಿದ್ದಾರೆ.

ಇನ್ನು ಇದರ ನಡುವೆ ಈಗಾಗಲೇ ಮಂಜುನಾಥ್ ಗೌಡರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ರಾಜ್ಯ ಬಿಜೆಪಿಯಿಂದ ಗ್ರೀನ್ ಸಿಗ್ನನ್ ಸಿಕ್ಕಿದ್ದು,ನಾಳೆ(ಮೇ.06) ಮಾಲೂರು ತಾಲೂಕಿನ ಪ್ರಸಿದ್ಧ ಚಿಕ್ಕತಿರುಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನೇರವಾಗಿ ಮಲ್ಲೇಶ್ವರಂನ ಕಚೇರಿಗೆ ತೆರಳಿ ಬಿಜೆಪಿ ಪಕ್ಷ ಸೇಪ೯ಡೆ ಆಗಲಿದ್ದಾರೆ.ಈ ಕಾಯ೯ಕ್ರಮದಲ್ಲಿ ಕೇವಲ ಮಂಜುನಾಥ ಗೌಡ ಬೆಂಬಲಿಗರು ಮಾತ್ರ ಭಾಗವಹಿಸಲಿದ್ದು,,ಮೂಲ ಬಿಜೆಪಿಗರು ಗೈರು ಹಾಗುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

click me!