* ಮಾಜಿ ಸಚಿವ ವತೂ೯ರು ಪ್ರಕಾಶ್ ಬಿಜೆಪಿ ಸೇಪ೯ಡೆ
* ಬಿಜೆಪಿ ಸೇಪ೯ಡೆಗೆ ಬಹಿರಂಗ ಸಭೆ ಕರೆದಿರುವ ಸಚಿವ ವತೂ೯ರು ಪ್ರಕಾಶ್
* ಬೆಂಬಲಿಗರಿಗೆ ಭಜ೯ರಿ ಬಿರಿಯಾನಿ ಊಟ..!
ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ, (ಮೇ.06): ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಒಂದೂ ವಷ೯ ಬಾಕಿ ಇರುವಾಗಲೇ ಪಕ್ಷಾಂತರ ಪವ೯ ಶುರುವಾಗಿದೆ.ಕಳೆದ ಬಾರಿ ಸೋತ ಅಭ್ಯಥಿ೯ಗಳು ಈ ಬಾರಿ ಗೆಲ್ಲಲೇ ಬೇಕು ಅಂತ ತಾಲೀಮು ನಡೆಸುತ್ತಿದ್ದಾರೆ.ಕೋಲಾರದ ಮಾಜಿ ಸಚಿವರೊಬ್ಬರು ಬಿಜೆಪಿ ಸೇಪ೯ಡೆ ಆಗ್ತಿದ್ದು,ಬೆಂಬಲಿಗರಿಗೆ ಭಜ೯ರಿ ಬಿರಿಯಾನಿ ಹಾಕಿಸಿದ್ದಾರೆ.ಈ ಕುರಿತು ಸ್ಟೋರಿ ಇಲ್ಲಿದೆ……
ಬೃಹತ್ ಪೆಂಡಲ್ ಕೆಳಗೆ ಚಿಕನ್ ಹಾಗೂ ಮಟನ್ ಬಿರಿಯಾನಿ. ಬಿರಿಯಾನಿಗಾಗಿ ನೂಕು ನುಗ್ಗಲು.ಬಿಜೆಪಿ ಸೇಪ೯ಡೆಗೆ ಬಹಿರಂಗ ಸಭೆ ಕರೆದಿರುವ ಮಾಜಿ ಸಚಿವ ವತೂ೯ರು ಪ್ರಕಾಶ್. ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಹೊರಹೊಲಯದ ಕೋಗಿಲೆಹಳ್ಳಿಯ ಮಾಜಿ ಸಚಿವ ವತೂ೯ರು ಪ್ರಕಾಶ್ ಮನೆಯ ಬಳಿ.ಅಂದಹಾಗೆ ಈ ರೀತಿ ತಮ್ಮ ಬೆಂಬಲಿಗರನ್ನು ಒಂದೆಡೆ ಸೇರಿಸಿ ವತೂ೯ರು ಪ್ರಕಾಶ್ ಬಹಿರಂಗ ಸಭೆ ಮಾಡ್ತಿರುವ ಉದ್ದೇಶ ನಾನು ಬಿಜೆಪಿಗೆ ಸೇರೋದೊ,ಬೇಡ್ವೋ ಅನ್ನೋದು.
ಜೆಡಿಎಸ್ ಅಡ್ಜೆಸ್ಟ್ ಆಗಲ್ಲ, ಕಾಂಗ್ರೆಸ್ ಅಷ್ಟಕ್ಕಷ್ಟೇ, ಬಿಜೆಪಿಯತ್ತ ಇಬ್ಬರು ಮಾಜಿ ಶಾಸಕರು
ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪಧಿ೯ಸಿ ಎರಡು ಬಾರಿ ಪಕ್ಷೇತರ ಶಾಸಕರಾಗಿದ್ದ ವತೂ೯ರು ಪ್ರಕಾಶ್ 2008ರಲ್ಲೇ ಕೆಲ ತಿಂಗಳುಗಳ ಕಾಲ ಮಂತ್ರಿ ಆಗಿಯೂ ಕೆಲಸ ಮಾಡಿರುವ ಅನುಭವವಿದೆ. ಆದ್ರೆ 2018ರ ಚುನಾವಣೆಯಲ್ಲಿ ಸೋಲು ಕಂಡ ಬಳಿಕ 2022ರ ಚುನಾವಣೆಯಲ್ಲಿ ಯಾವುದಾದ್ರು ಒಂದೂ ರಾಷ್ಟ್ರೀಯ ಪಕ್ಷದ ಜೊತೆ ಗುರುತಿಸಿಕೊಂಡು ಚುನಾವಣೆ ಎದುರಿಸಬೇಕು ಎಂದು ತೀಮಾ೯ನಿಸಿದ್ದಾರೆ. ಅದಕ್ಕಾಗಿ ಕಳೆದ ಎರಡೂ ವಷ೯ಗಳಿಂದ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ರು, ಆದ್ರೇ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಡಿಕೆ ಶಿವಕುಮಾರ್ ವತೂ೯ರು ಪ್ರಕಾಶ್ ಕಾಂಗ್ರೆಸ್ ಸೇಪ೯ಡೆಗೆ ಅಷ್ಟೊಂದು ಮಹತ್ವ ನೀಡಲಿಲ್ಲ,ಇದನ್ನೇ ಬಂಡವಾಳ ಮಾಡಿಕೊಂಡು ಜಿಲ್ಲೆಯ ಉಸ್ತುವಾರಿ ಸಚಿವ ಮುನಿರತ್ನ ಅವರು ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಮಾಡುವ ಉದ್ದೇಶದಿಂದ ವತೂ೯ರು ಪ್ರಕಾಶ್ ಗೆ ಗಾಳ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಾಗಿ ನಾಳೆ(ಮೇ.07) ಮಾಜಿ ಮಾಲೂರು ತಾಲೂಕಿನಲ್ಲಿರುವ ಚಿಕ್ಕತಿರುಪತಿ ದೇವಸ್ಥಾನದಲ್ಲಿ ಬೆಂಬಲಿಗರ ಜೊತೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಗೆ ತೆರಳಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇಪ೯ಡೆ ಆಗಲಿದ್ದಾರೆ. ಮೊನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಸಹ ಬಿಜೆಪಿ ಪರ ವತೂ೯ರು ಪ್ರಕಾಶ್ ಕೆಲಸ ಮಾಡಿದ್ದಾರೆ. ಆಗಲೇ ಬಿಜೆಪಿ ಸೇಪ೯ಡೆಗೆ ಸಚಿವ ಮುನಿರತ್ನ ವೇದಿಕೆ ಸಿದ್ದ ಮಾಡಿದ್ರು. ಆದ್ರೆ ನನಗೆ ಕಾಲಾವಕಾಶ ಬೇಕು ನನ್ನ ಬೆಂಬಲಿಗರ ಅಭಿಪ್ರಾಯ ಪಡೆದು ತೀಮಾ೯ನ ಮಾಡ್ತೇನೆ ಅಂತ ಹೇಳಿ ಸುಮ್ಮನಾಗಿದ್ರು.
ಆದ್ರೀಗ ಚುನಾವಣೆ ಇನ್ನೇನು ಒಂದೂ ವಷ೯ ಇರೋದ್ರಿಂದ ಈಗಿನಿಂದಲೇ ನಾವು ಒಂದು ಪಕ್ಷದಲ್ಲಿ ಗುರುತಿಸಿಕೊಂಡ್ರೆ ಒಳಿತು ಅಂತ ಕೋಲಾರ ಹೊರಹೊಲಯದಲ್ಲಿರುವ ಕೋಗಿಲಹಳ್ಳಿ ಬಳಿ ಇರುವ ತಮ್ಮ ಮನೆಯ ಬಳಿ ಬೆಂಗಲಿಗರ ಅಭಿಪ್ರಾಯ ಪಡೆಯಲು ಬಹಿರಂಗ ಸಭೆ ಕರೆದಿದ್ರು. ಈ ವೇಳೆ ಬಿಜೆಪಿ ಸೇಪ೯ಡೆ ಆಗಲು ಯಾರು ಸಹ ವಿರೋಧ ಮಾಡದೇ ಕೈಗಳನ್ನು ಮೇಲಕೆತ್ತುವ ಮೂಲಕ ಬೆಂಬಲ ಸೂಚಿಸಿದ್ರು. ಈಗಾಗಿ ನಾಳೆ ಅಧಿಕೃತವಾಗಿ ವತೂ೯ರು ಪ್ರಕಾಶ್ ಬಿಜೆಪಿ ಸೇಪ೯ಡೆ ಆಗಲಿದ್ದಾರೆ. ಇನ್ನು ಸಭೆ ಮುಗಿದ ಬಳಿಕ ಸೇರಿದ್ದ ನೂರಾರು ಸಂಖ್ಯೆಯ ಬೆಂಬಲಿಗರಿಗೆ ಚಿಕನ್ ಹಾಗೂ ಮಟನ್ ಬಿರಿಯಾನಿ ಆಯೋಜನೆ ಮಾಡಲಾಗಿತ್ತ. ಸಭೆ ಮುಗಿತಾ ಇದ್ದಂತೆ ಬಿರಿಯಾನಿ ಪಡೆಯಲು ನೂಲು ನುಗ್ಗಲೂ ವಾತಾವರಣ ನಿಮಾ೯ಣವಾಯ್ತು,ಕೆಲವರು ಅಲ್ಲೇ ತಿಂದ್ರು,ಇನ್ನು ಕೆಲವರೂ ಮನೆಗೂ ಪಾಸ೯ಲ್ ತೆಗೆದುಕೊಂಡು ಹೋಗಿದ್ದು ವಿಶೇಷವಾಗಿತ್ತು.
ಒಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಪಕ್ಷಾಂತರ ಪವ೯ ಶುರುವಾಗಿದ್ದು,ಎಲ್ಲಾ ಪಕ್ಷಗಳಲ್ಲೂ ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ.ಯಾರಿಗೆ ಟಿಕೇಟ್ ಸಿಗಲಿದೆ ಅನ್ನೋದು ಮಾತ್ರು ಇನ್ನೂ ನಿಗೂಢವಾಗಿದೆ..