ಮಾಲೂರು ಕಾಂಗ್ರೆಸ್‌ ಶಾಸಕ ನಂಜೇಗೌಡ 250 ಮತ ಪಡೆದು ಗೆಲುವು

Kannadaprabha News   | Kannada Prabha
Published : Feb 06, 2026, 07:27 AM IST
KY Nanjegowda

ಸಾರಾಂಶ

2023ರ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದ ಅಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆವರಣದಲ್ಲಿಯೇ ಮರು ಮತ ಎಣಿಕೆ ಫಲಿತಾಂಶ ಪ್ರಕಟವಾಗಿದೆ. ಗುರುವಾರ ಹಾಲ್‌ನಲ್ಲಿಯೇ ತೆರೆದ ಪೀಠ ನಂಜೇಗೌಡ ಆಯ್ಕೆಯನ್ನು ಸಿಂಧುಗೊಳಿಸಿದೆ.

  ನವದೆಹಲಿ :  2023ರ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದ ಅಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆವರಣದಲ್ಲಿಯೇ ಮರು ಮತ ಎಣಿಕೆ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಅವರು 50,957 ಮತಗಳು, ಬಿಜೆಪಿಯ ಕೆ.ಎಸ್‌.ಮಂಜುನಾಥ ಗೌಡ ಅವರು 50,707 ಮತಗಳನ್ನು ಪಡೆದಿದ್ದು, ತನ್ಮೂಲಕ ನಂಜೇಗೌಡ ಅವರು ಜಯ ಸಾಧಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದೆ. ನಂಜೇಗೌಡ ಆಯ್ಕೆಯನ್ನು ಸುಪ್ರೀಂ ಕೋರ್ಟ್‌ ಸಿಂಧುಗೊಳಿಸಿದೆ.

ನಂಜೇಗೌಡ ಆಯ್ಕೆ ಸಿಂಧು

2023ರಲ್ಲಿ 248 ಮತಗಳಿಂದ ಪರಾಭವಗೊಂಡಿದ್ದ ಮಂಜುನಾಥ ಅವರು ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪರಿಣಾಮ ಹೈಕೋರ್ಟ್‌ ನಂಜೇಗೌಡರ ಶಾಸಕತ್ವ ಅಸಿಂಧುಗೊಳಿಸಿ, ಮರು ಮತ ಎಣಿಕೆಗೆ ಆದೇಶಿಸಿತ್ತು. ಅಕ್ಟೋಬರ್‌ನಲ್ಲಿ ಇದಕ್ಕೆ ತಡೆ ಕೊಟ್ಟಿದ್ದ ಸುಪ್ರೀಂ, ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆಯೇ ನ.11ರಂದು ಮರು ಮತ ಎಣಿಕೆ ನಡೆಸಿದ ಆಯೋಗ ಸುಪ್ರೀಂಗೆ ಫಲಿತಾಂಶ ಸಲ್ಲಿಸಿತ್ತು. ಇದನ್ನು ಗುರುವಾರ ಹಾಲ್‌ನಲ್ಲಿಯೇ ತೆರೆದ ಪೀಠ ನಂಜೇಗೌಡ ಆಯ್ಕೆಯನ್ನು ಸಿಂಧುಗೊಳಿಸಿದೆ.

ಏನಿದು ಪ್ರಕರಣ:

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಅಕ್ರಮ ನಡೆದಿರುವ ಬಗ್ಗೆ ಬಿಜೆಪಿಯ ಮಂಜುನಾಥ ಗೌಡ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ನಂಜೇಗೌಡರ ಸದಸ್ಯತ್ವ ರದ್ದುಗೊಳಿಸಿ, 4 ವಾರಗಳಲ್ಲಿ ಮರು ಮತ ಎಣಿಕೆ ಮಾಡುವಂತೆ ಆಯೋಗಕ್ಕೆ ಸೂಚಿಸಿತ್ತು. ನಂಜೇಗೌಡ ಅವರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ ಪೀಠವು ಹೈಕೋರ್ಟ್‌ ಆದೇಶಕ್ಕೆ ತಡೆ ಕೊಟ್ಟು, ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತ್ತು. ಗುರುವಾರ ಇದನ್ನು ಪ್ರಕಟಿಸಿದೆ.

- ಸುಪ್ರೀಂಕೋರ್ಟ್‌ ಹಾಲಲ್ಲಿ ಮುಚ್ಚಿದ ಲಕೋಟೆ ಫಲಿತಾಂಶ ಬಹಿರಂಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

India News Live:ಸಂಸತ್ತಲ್ಲಿ ಪ್ರಧಾನಿ ಮೋದಿ ಮೇಲೆ ಪ್ರತಿಪಕ್ಷದಿಂದ ಹಲ್ಲೆಗೆ ಯತ್ನ ನಡೆದಿತ್ತಾ?
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ