ಪ್ರತಿಬಾರಿ ಚುನಾವಣೆ ಬಂದಾಗ ಮಾತೆತ್ತಿದರೆ ಒಕ್ಕಲಿಗರು ಅಂತೀರಲ್ಲಾ, ಎಷ್ಟು ಜನ ಒಕ್ಕಲಿಗರನ್ನು ಬೆಳೆಸಿದ್ದೀರಾ? ನೀವು ಒಕ್ಕಲಿಗರೋ ಇಲ್ವೋ ಎಂಬ ಅನುಮಾನ ನನಗೆ ಬರ್ತಿದೆ ಎಂದು ಶಾಸಕ ನರೇಂದ್ರಸ್ವಾಮಿ ತಿಳಿಸಿದರು.
ಮಂಡ್ಯ (ಏ.11): ರಾಜ್ಯದಲ್ಲಿ ಪ್ರತಿಬಾರಿ ಚುನಾವಣೆ ಬಂದಾಗಲೂ ಮಾತೆತ್ತಿದ್ದರೇ ಒಕ್ಕಲಿಗ ಸಮುದಾಯವರು ಅಂತೀರಾ? ಒಕ್ಕಲಿಗ ಸಮುದಾಯ ನನ್ನ ಪರ ನಿಲ್ಲಿ ಅಂತಾ ಕೇಳ್ತೀರಲ್ಲವಾ? ಎಷ್ಟು ಜನ ಒಕ್ಕಲಿಗ ನಾಯಕರನ್ನ ಬೆಳೆಸಿದ್ದೀರಾ ನೆನಪು ಮಾಡಿಕೊಳ್ಳಿ. ಒಕ್ಕಲಿಗರ ನಾಯಕ ಎಸ್.ಎಂ.ಕೃಷ್ಣರವರು 2ನೇ ಬಾರಿ ಸಿಎಂ ಆಗೋದನ್ನ ತಪ್ಪಿಸಿದ್ದೀರಿ. ನಿಮ್ಮನ್ನ ಮುಖ್ಯಮಂತ್ರಿ ಮಾಡಿದ್ದ ಚಲುವರಾಯಸ್ವಾಮಿ ಮತ್ತು ಬಾಲಕೃಷ್ಣರನ್ನ ಇವತ್ತು ತೆಗಳುತ್ತಿದ್ದೀರಾ. ಇವತ್ತು ನೀವು ಒಕ್ಕಲಿಗರೋ ಇಲ್ವೋ ಎಂಬ ಅನುಮಾನ ನನಗೆ ಬರ್ತಿದೆ ಎಂದು ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಟೀಕೆ ಮಾಡಿದ್ದಾರೆ.
ಮಂಡ್ಯದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಶಾಸಕ ನರೇಂದ್ರಸ್ವಾಮಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮೇಲೆ ಒಂದೇ ಒಂದು ಕಳಂಕ ಇಲ್ಲ. ಇವರು ನಮ್ಮ ಮಂಡ್ಯ ಜಿಲ್ಲೆಯವರು. ಎದುರಾಳಿ ಬಗ್ಗೆ ನಾನು ಏನು ಹೇಳಲ್ಲ. ಆದರೆ, ಒಂದೊಂದು ಚುನಾವಣೆಯಲ್ಲಿ ಒಂದೊಂದು ಮಾತುಗಳನ್ನಾಡ್ತೀರಾ. ನಮ್ಮ ಕೈ ನಾಯಕರ ಬಗ್ಗೆ ನಿಕೃಷ್ಟ ಮಾತುಳನ್ನಾಡ್ತಾರೆ. ಮಂಡ್ಯಕ್ಕೆ ನಿಮ್ಮ ಆಡಳಿತದ ಅವಧಿಯಲ್ಲಿ ಏನ್ ಮಾಡಿದ್ದೀರಿ. ಒಂದು ರಸ್ತೆ ಅಭಿವೃದ್ದಿ ಮಾಡೋದಕ್ಕೆ ಆಗಲಿಲ್ಲ. ನಾಲೆ ಆಧುನೀಕರಣ ಮಾಡಲಿಲ್ಲ ಎಂದು ಆಕ್ರೋಶ ಹೊರಹಾಕಿದರು.
undefined
ಮಂಡ್ಯದ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ನಟಿ ರಮ್ಯಾ, ರಾಹುಲ್‌ಗಾಂಧಿಯೂ ಬರ್ತಾರೆ; ಶಾಸಕ ರವಿಕುಮಾರ್ ಗಣಿಗ ಮಾಹಿತಿ
ನೀವು ಚುನಾವಣೆ ಬಂದಾಗೆಲ್ಲಾ ಮಾತೆತ್ತಿದ್ದರೇ ಒಕ್ಕಲಿಗ ಸಮುದಾಯವರು ಅಂತೀರಾ? ಒಕ್ಕಲಿಗ ಸಮುದಾಯ ನನ್ನ ಪರ ನಿಲ್ಲಿ ಅಂತಾ ಕೇಳ್ತೀರಲ್ಲ. ಎಷ್ಟು ಜನ ಒಕ್ಕಲಿಗ ನಾಯಕರನ್ನ ಬೆಳೆಸಿದ್ದೀರಾ ನೆನಪು ಮಾಡಿಕೊಳ್ಳಿ. ಮಂಡ್ಯದ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣರವರು ಎರಡನೇ ಬಾರಿ ಸಿಎಂ ಆಗೋದನ್ನ ತಪ್ಪಿಸಿದ್ದೀರಿ. ನಿಮ್ಮನ್ನ ಸಿಎಂ ಮಾಡಿದ್ದ ಚಲುವರಾಯಸ್ವಾಮಿ, ಬಾಲಕೃಷ್ಣರನ್ನ ಇವತ್ತು ತೆಗಳುತ್ತಿದ್ದೀರಿ. ಇವತ್ತು ನೀವು ಒಕ್ಕಲಿಗರೋ ಇಲ್ವೋ ಎಂಬ ಅನುಮಾನ ನನಗೆ ಬರ್ತಿದೆ ಎಂದು ಹೇಳಿದರು.
ಸ್ಟಾರ್ ಚಂದ್ರುರನ್ನ ತನಗೆ ಸಾಟಿಯೆ ಅಂತೀರಲ್ಲ. ಮಂಡ್ಯದ ಮಣ್ಣಿನ ಗುಣ, ಮಂಡ್ಯದ ಸ್ವಾಭಿಮಾನವೇ ಉತ್ತರ. ಮಂಡ್ಯದಲ್ಲಿ ಈ ಬಾರಿ ಮಾತು ಮಾತಾಡಲ್ಲ. ಮಂಡ್ಯದ ಹೃದಯ, ಮಂಡ್ಯದ ಸೊಗಡು ಬಗ್ಗೆ ಮಾತನಾಡಬೇಕು. ನಮ್ಮ ಸ್ವಾಭಿಮಾನದ ಪ್ರತಿನಿಧಿ ಸ್ಟಾರ್ ಚಂದ್ರು ಸಂಸತ್ ಗೆ ಹೋಗಲಿ. ಅದಕ್ಕೆ ಮತದಾರರ ಆಶೀರ್ವಾದ ಬೇಕು ಎಂದು ಶಾಸಕ ನರೇಂದ್ರಸ್ವಾಮಿ ಮನವಿ ಮಾಡಿದರು.
5, 8, 9ನೇ ತರಗತಿ ಫಲಿತಾಂಶ ಅಸಿಂಧುಗೊಳಿಸಿ ಸುಪ್ರೀಂ; ಮಕ್ಕಳ ಅಡ್ಮಿಷನ್ ಮಾಡೋಕಾಗದೇ ಪೋಷಕರಿಗೆ ಸಂಕಷ್ಟ
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರು, ಹೋದ ಕಡೆ ಎಲ್ಲಾ ನನಗೆ ಉತ್ತರ ರೆಸ್ಪಾನ್ಸ್ ಸಿಕ್ತಿದೆ. ಕುಮಾರಸ್ವಾಮಿ ಎದುರಾಳಿ ಆದರೂ ನನಗೆ ಯಾವ ಭಯವೂ ಇಲ್ಲ. ನನಗೆ ದುಡ್ಡು ಮಾಡುವ ಅವಶ್ಯಕತೆ ಇಲ್ಲ. ದೇವರು ನನ್ನನ್ನು ಚೆನ್ನಾಗಿಯೆ ಇಟ್ಟಿದ್ದಾನೆ. ನಾನು ಸಾಮಾನ್ಯರಂತೆ ಇರಬಲ್ಲೇ, ಜನರ ಕೈಗೆ ಸಿಗಬಲ್ಲೆ. ಆ ಕಾರಣಕ್ಕಾಗಿ ನನ್ನ ಜನ ನನ್ನ ಕೈ ಹಿಡಿಯುತ್ತಾರೆ. ಇನ್ನು ಏ.17 ರಂದು ಮಂಡ್ಯಕ್ಕೆ ರಾಹುಲ್ ಗಾಂಧಿ ಬರ್ತಾರೆ. ಗ್ಯಾರಂಟಿ ಯೋಜನೆಗಳು ಮತಗಳಿಕೆ ಹೆಚ್ಚಿಸಲಿವೆ. ಗೆಲುವಿನ ಅಂತರ ಹೇಳೋದಿಲ್ಲ, ಆದರೆ ಗೆದ್ದೆ ಗೆಲ್ತೀನಿ ಅನ್ನೋ ವಿಶ್ವಾಸ ಇದೆ ಎಂದು ಹೇಳಿದರು.