ಸಂವಿಧಾನ ಉಳಿಸಬೇಕಾದರೆ ಬಿಜೆಪಿಯನ್ನ ಸೋಲಿಸಲೇಬೇಕು: ಯತೀಂದ್ರ ಸಿದ್ದರಾಮಯ್ಯ 

By Ravi JanekalFirst Published Apr 11, 2024, 2:18 PM IST
Highlights

ಬಿಜೆಪಿಯವರು ಸಂವಿಧಾನ ವಿರೋಧಿಗಳು. ಬಿಜೆಪಿ ಸಂಸದ ಅನಂತಕುಮಾರ ಹೆಗ್ಡೆ ಸಂವಿಧಾನ ಬದಲಾವಣೆ ಮಾತನ್ನಾಡದ್ದಾರೆ. ಹೀಗಾಗಿ ಸಂವಿಧಾನ ಉಳಿಸಬೇಕಾದರೆ ಬಿಜೆಪಿಯನ್ನ ಸೋಲಿಸಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಮಾಜಿ ಶಾಸಕ, ಸಿಎಂ ಸಿದ್ದರಾಮಯ್ಯರ ಪುತ್ರ ಡಾ ಯತೀಂದ್ರ ನುಡಿದರು.

ಮೈಸೂರು (ಏ.11): ಬಿಜೆಪಿಯವರು ಸಂವಿಧಾನ ವಿರೋಧಿಗಳು. ಬಿಜೆಪಿ ಸಂಸದ ಅನಂತಕುಮಾರ ಹೆಗ್ಡೆ ಸಂವಿಧಾನ ಬದಲಾವಣೆ ಮಾತನ್ನಾಡದ್ದಾರೆ. ಹೀಗಾಗಿ ಸಂವಿಧಾನ ಉಳಿಸಬೇಕಾದರೆ ಬಿಜೆಪಿಯನ್ನ ಸೋಲಿಸಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಮಾಜಿ ಶಾಸಕ, ಸಿಎಂ ಸಿದ್ದರಾಮಯ್ಯರ ಪುತ್ರ ಡಾ ಯತೀಂದ್ರ ನುಡಿದರು.

ಇಂದು ಮೈಸೂರಿನ ಹೂಟಗಳ್ಳಿ ಸರಸ್ವತಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ದಲಿತ ಸಂಘಟನೆಗಳ ಒಕ್ಕೂಟದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಗರು ಮೀಸಲಾತಿ ವಿರೋಧಿಗಳಾಗಿದ್ದಾರೆ. ಸಂವಿಧಾನ ಉಳಿದರೆ ಮಾತ್ರ ನಮಗೆ ಉಳಿಗಾಲ. ಇಲ್ಲದಿದ್ರೆ ಅಪಾಯವಿದೆ. ಸಂವಿಧಾನ ಬದಲಾವಣೆಗೆ ಬಿಜೆಪಿ ಸಂಚು ರೂಪಿಸಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸೀಟು ಗೆದ್ದರೆ ಸಂವಿಧಾನ ಬದಲಾವಣೆ ಮಾಡ್ತಾರೆ. ಬಿಜೆಪಿ ಆರೆಸ್ಸೆಸ್ ತತ್ವದಂತೆ ಮೋದಿ ಸರ್ಕಾರ ನಡೆಯುತ್ತಿದೆ. ಆರೆಸ್ಸೆಸ್ ಸಂವಿಧಾನ ವಿರೋಧಿ ಮನಸ್ಥಿತಿ ಹೊಂದಿದೆ.  400 ಸ್ಥಾನ ಕೊಡಿ ಅಂತಲೇ ಮೋದಿ ಕೇಳ್ತಿದ್ದಾರೆ. 400ಕ್ಕಿಂತ ಹೆಚ್ಚು ಸ್ಥಾನ ಮೋದಿ ಸರ್ಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುವುದು ಸುಲಭವಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಬಾರದು ಈ ಬಗ್ಗೆ ಎಚ್ಚರಿಕೆ ಇರಲಿ ಎಂದರು.

ಸಿದ್ದರಾಮಯ್ಯ ಮತದಾರರ ಕಿವಿಗೆ ಹೂ ಇಡೋ ಕೆಲಸ ಮಾಡ್ತಿದ್ದಾರೆ: ಬಿವೈ ವಿಜಯೇಂದ್ರ ಕಿಡಿ

ಬಿಜೆಪಿ ಚುನಾವಣೆ ವೇಳೆ ಮಾತ್ರ ದಲಿತರ ಪರ ಇರುತ್ತದೆ. ಮೀಸಲಾತಿಯನ್ನ ಹಂತಹಂತವಾಗಿ ತೆಗೆದುಹಾಕುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಆರೆಸ್ಸೆಸ್ ಸಂವಿಧಾನ ಒಪ್ಪಿಲ್ಲ. ಅದು ಮೀಸಲಾತಿ ವಿರುದ್ಧವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ವರ್ಷ ಆಗಿದೆ. ಆದರೆ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ದೌರ್ಜನ್ಯಗಳು ಹೆಚ್ಚಾಗಿವೆ. ಹೀಗಾಗಿ ಸಂವಿಧಾನ ಉಳಿವಿಗೆ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಒಳ ಮೀಸಲಾತಿ ತಿದ್ದುಪಡಿಗೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಬಿಜೆಪಿ ನಾಯಕರು ಯಾರೂ ಸಹ ಮೀಸಲಾತಿ ಬಗ್ಗೆ ಮಾತನಾಡುವುದಿಲ್ಲ. ಬಿಜೆಪಿ ನಾಯಕರ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಮೀಸಲಾತಿ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.

ಪ್ರೀತಿ ತೋರಿಸಿದ್ರೆ ಕೆಲಸ ಮಾಡ್ತೇನೆ; ಬಲವಂತ ಮಾಡಿದ್ರೆ ರಾಜಕೀಯವನ್ನೇ ಬಿಟ್ಟುಬಿಡ್ತೇನೆ: ಪ್ರೀತಂ ಗೌಡ

click me!