ನಮ್ಮ ಧರ್ಮ, ದೇಶ ಉಳಿಯಬೇಕೆಂದರೆ ಹಿಂದೂಗಳು ಒಟ್ಟಾಗಬೇಕು. ಭರತ್ ಬೊಮ್ಮಾಯಿ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗೆ ಪಾಠ ಕಲಿಸಬೇಕು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಶಿಗ್ಗಾಂವಿ(ನ.10): ಇಡೀ ಭಾರತವನ್ನು ಸನಾತನ ಹಿಂದೂ ಧರ್ಮದ ಪ್ರಯೋಗ ಶಾಲೆ ಮಾಡಿಯೇ ಮಾಡುತ್ತೇವೆ. ನಮಗೆ (ಹಿಂದೂಗಳಿಗೆ) ಇರುವುದು ಇದೊಂದೆ ದೇಶ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶಿಗ್ಗಾಂವಿ ಕ್ಷೇತ್ರದ ಕುನ್ನೂರಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಪ್ರಚಾರದಲ್ಲಿ ಮಾತನಾಡಿ, ನಮ್ಮ ಧರ್ಮ, ದೇಶ ಉಳಿಯಬೇಕೆಂದರೆ ಹಿಂದೂಗಳು ಒಟ್ಟಾಗಬೇಕು. ಭರತ್ ಬೊಮ್ಮಾಯಿ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗೆ ಪಾಠ ಕಲಿಸಬೇಕು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಹೊಸದೇನಾದರೂ ಹೇಳಿದ್ದಾರಾ? ನಾನು ವಕ್ಫ್ ಬಗ್ಗೆ ಆಗ ಮಾತನಾಡಲು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ಬೊಮ್ಮಾಯಿ ಕಾರಣ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ. ಕಾಂಗ್ರೆಸ್‌ನವರು ಸೈನ್ಯಕ್ಕೆ ಎಕೆ47 ಬಳಕೆಗೆ ಅವಕಾಶ ಕೊಡುತ್ತಿರಲಿಲ್ಲ. ನೆಹರು ಅವರು ಚೀನಾ ಯುದ್ಧದದಲ್ಲಿನಮ್ಮ ಸೈನಿಕರಿಗೆ ಒಂದು ಚಸ್ಮಾಸಹ ಕೊಟ್ಟಿರಲಿಲ್ಲ. ಇನ್ನೂ ಎಷ್ಟು ವರ್ಷ ಬಟಾಟೆಯಲ್ಲಿ ಬಂಗಾರ ತೆಗೆಯುತ್ತೇನೆ ಅನ್ನುವ ರಾಹುಲ್ ಗಾಂಧಿ ಮಾತು ಕೇಳುತ್ತೀರಿ? ಎಂದು ವ್ಯಂಗ್ಯವಾಡಿದರು.
undefined
ಕಾಂಗ್ರೆಸ್‌ನೊಂದಿಗೆ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳದ ಬಿಜೆಪಿ ನಾಯಕರ ಮೇಲೆ ಸರ್ಕಾರ ಕೇಸ್ ಹಾಕಿದೆ; ಯತ್ನಾಳ್!
ವಕ್ಫ್ ಕಾಯ್ದೆ ಅಪಾಯಕಾರಿಯಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಮುಖ ನೋಡಿ ಯಾಸಿರ್‌ಖಾನ್ ಪಠಾಣ್‌ಗೆ ಮತ ಹಾಕಿ ಎನ್ನುತ್ತಾರೆ. ಹೆಬ್ಬಾಳ್ಳರ್ ಅವರು ತಮ್ಮ ಪಿಎ ಮೂಲಕ ಸರ್ಕಾರಿ ಅಧಿಕಾರಿ ಸಾವಿಗೆ ಕಾರಣರಾಗಿದ್ದು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ₹900 ಕೋಟಿ ಲೂಟಿ ಮಾಡಿದ್ದಾರೆ. ಇಂತವರಿಗೆ ವೋಟ್ ಹಾಕಿದರೆ ಜನರ ಬಳಿ ಕೊನೆಗೆ ₹2000 ಸಾವಿರ ಮಾತ್ರ ಉಳಿಯುತ್ತದೆ ಎಂದು ಟೀಕೆ ಮಾಡಿದರು.