Prajadhwani Yatre: ಎರಡೇ ವರ್ಷಗಳಲ್ಲಿ ಮಹದಾಯಿ ಯೋಜನೆ ಪೂರ್ಣ: ಸಿದ್ದರಾಮಯ್ಯ

By Kannadaprabha NewsFirst Published Jan 19, 2023, 11:23 AM IST
Highlights

 ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಟಕವಾಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮಹದಾಯಿ ಯೋಜನೆಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸುತ್ತೇವೆ. ಇದರೊಟ್ಟಿಗೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ .2 ಲಕ್ಷ ಕೋಟಿ ಅನುದಾನ ನೀಡಲಾಗುವುದು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಗದಗ (ಜ.19) : ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಟಕವಾಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮಹದಾಯಿ ಯೋಜನೆಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸುತ್ತೇವೆ. ಇದರೊಟ್ಟಿಗೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ .2 ಲಕ್ಷ ಕೋಟಿ ಅನುದಾನ ನೀಡಲಾಗುವುದು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬುಧವಾರ ಇಲ್ಲಿನ ಮುನ್ಸಿಪಲ್‌ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಯಾತ್ರೆಯ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಇಷ್ಟುದಿನ ಏನ್‌ ಮಾಡ್ತಿದ್ದೀರಿ ಬೊಮ್ಮಾಯಿ... ಬಿಜೆಪಿ ಅಧಿಕಾರ ವಹಿಸಿಕೊಂಡ ಮೇಲೆ ಇಷ್ಟುವರ್ಷ ಮಲಗಿದ್ದವರು ಈಗ ಚುನಾವಣೆ ಹತ್ತಿರ ಬಂದಾಗ ಮಹದಾಯಿ ಹೆಸರಿನ ಮೇಲೆ ಈ ರೀತಿಯ ನಾಟಕ ಮಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ 2 ವರ್ಷದಲ್ಲಿ .2 ಸಾವಿರ ಕೋಟಿ ಖರ್ಚು ಮಾಡಿ ಮಹದಾಯಿ ಯೋಜನೆ ಪೂರ್ಣಗೊಳಿಸುತ್ತೇವೆ. ನಾವು ಅಧಿಕಾರಕ್ಕೆ ಬಂದ ತಕ್ಷಣವೇ 24-7 ಕುಡಿಯುವ ನೀರು ಕೊಡುತ್ತೇನೆ. ಹಾಗೆಯೇ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸುತ್ತೇವೆ ಎಂದರು.

BIG 3: ಗದಗ ತರಕಾರಿ ಮಾರುಕಟ್ಟೆಯಲ್ಲಿ 'ಕತ್ತಲೆ'ಯಲ್ಲೇ ರೈತರ ವ್ಯಾಪಾರ

ಪ್ರಜಾಧ್ವನಿ(Prajadhwani) ಎಂದರೆ ಇದು ನೊಂದ ಕನ್ನಡಿಗರ ಧ್ವನಿ. 8 ಜಿಲ್ಲೆಗಳಲ್ಲಿ ಈಗಾಗಲೇ ಯಾತ್ರೆ ಮುಗಿಸಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಮ್ಮ ಯಾತ್ರೆ ಸಂಚರಿಸಲಿದೆ. ಎಲ್ಲೆಡೆಯೂ ಕಾರ್ಯಕರ್ತರ, ಅಭಿಮಾನಿಗಳ ಉತ್ಸಾಹ ಹೆಚ್ಚುತ್ತಿರುವುದನ್ನು ನೋಡಿ ಸಂತಸವಾಗುತ್ತಿದೆ. 2008, 2013ಕ್ಕಿಂತಲೂ ಹೆಚ್ಚಿನ ಜನಸ್ಪಂದನೆ ಈ ಯಾತ್ರೆಯ ಮೂಲಕ ಬರುತ್ತಿದೆ. 2023ರಲ್ಲಿ ಕಾಂಗ್ರೆಸ್‌ ಸ್ಪಷ್ಟಗೆಲುವು ಸಾಧಿಸುವ ವಿಶ್ವಾಸವಿದ್ದು, ಗದಗ ಜಿಲ್ಲೆಯಲ್ಲೂ ನಾಲ್ಕೂ ವಿಧಾನಸಭಾ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾತ್ರೆಯಿಂದ ಬಿಜೆಪಿಗೆ ನಡುಕ:

ಯಾತ್ರೆಗೆ ಸೇರುತ್ತಿರುವ ಜನಬೆಂಬಲ ನೋಡಿದ ಬಿಜೆಪಿಗೆ ಈಗಲೇ ನಡುಕ ಹುಟ್ಟಿದೆ. ಬಿಜೆಪಿಗರ ಪಾಪದ ಕೊಡ ತುಂಬಿ ತುಳುಕುತ್ತಿದೆ. ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದರೆ ಈಗಲೇ ಪ್ರಾಯಶ್ಚಿತ್ತ ಮಾಡ್ಕೋಬೇಕು. ನಿಮ್ಮೆಲ್ಲರ ಅವ್ಯವಹಾರ, ಹಗರಣಗಳನ್ನು ಜನತೆ ನೋಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ಒಂದು ವಿಶೇಷ ತನಿಖಾ ಆಯೋಗ ರಚನೆ ಮಾಡುತ್ತೇವೆ. ನಿಮ್ಮ ಪಾಪದ ಪುರಾಣವನ್ನು ಜನರ ಮುಂದೆ ಇಡುತ್ತೇವೆ. ಅವರೇ ನಿಮಗೆ ಶಿಕ್ಷೆ ನೀಡಲಿ ಎಂದರು.

ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. .30 ಕೋಟಿಗೆ ಎಂಎಲ್‌ಎಗಳನ್ನು ಕೊಂಡು ಅಧಿಕಾರ ಮಾಡಿದ್ದಾರೆ. ಪಕ್ಷಾಂತರ ಮಾಡಿದ ಶಾಸಕರು ಲೂಟಿ ಹೊಡೆದ ಹಣವನ್ನು ಖರ್ಚು ಮಾಡಿ, ಮತ್ತೆ ಲೂಟಿ ಮಾಡಲು ಪ್ರಾರಂಭಿಸಿದ್ದಾರೆ. ಬಿಜೆಪಿಯದು ಅಲಿಬಾಬಾ-40 ಕಳ್ಳರ ಕೂಟವಾಗಿದೆ. ರಾಜ್ಯದ ಇತಿಹಾಸದಲ್ಲಿ ಅತ್ಯಂತ ಕಳಪೆ ಸರ್ಕಾರ ಎಂದರೆ ಅದು ಬಿಜೆಪಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

40% ಕಮಿಷನ್‌ ಕೇಳುತ್ತಾರೆ, ಈ ಹಿಂದೆ ಯಾರಾದರೂ ಪತ್ರ ಬರೆದಿದ್ದಾರಾ? ನಮಗೆ ರಕ್ಷಣೆ ಬೇಕು ಎಂದು ಕೇಳಿದ್ದಾರಾ? ನರೇಂದ್ರ ಮೋದಿ ಅವರು ನಾ ಕಾವುಂಗಾ... ನಾ ಕಾನೆದೂಂಗಾ (ತಿನ್ನಲ್ಲ, ತಿನ್ನಲು ಬಿಡಲ್ಲ) ಎಂದು ಸುಳ್ಳು ಹೇಳಿದರು. ಆದರೆ, ಈಗ ಆಗುತ್ತಿರುವುದೇನು? ಇದನ್ನೆಲ್ಲ ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಷ್ಟೆಲ್ಲ ಮಾಡಿರುವ ಬಿಜೆಪಿ ಸರ್ಕಾರ ಇರಬೇಕಾ? ತಿಪ್ಪಾರಡ್ಡಿ .90 ಲಕ್ಷ ಲಂಚ ಪಡೆದುಕೊಂಡಿರುವ ಕುರಿತು ಎಲ್ಲೆಡೆ ಆಡಿಯೋ ವೈರಲ್‌ ಆಗಿದೆ. ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakuumar) ಮಾತನಾಡಿ, 1985ರಲ್ಲಿ ಚುನಾವಣೆಗೆ ನಿಂತಿದ್ದೆ, ಅಂದು ಕೆ.ಎಚ್‌. ಪಾಟೀಲ ಅವರು ನನಗೆ ಟಿಕೆಟ್‌ ಕೊಟ್ಟಿದ್ದರು. ಡಿ.ಆರ್‌. ಪಾಟೀಲ, ಕೆ.ಎಚ್‌. ಪಾಟೀಲ, ಎಚ್‌.ಕೆ. ಪಾಟೀಲರೊಂದಿಗೆ ಕೆಲಸ ಮಾಡಿದ್ದೇನೆ. ಗದಗ ಈ ಹಿಂದೆ ನೋಡಿದ್ದೇನೆ. ಗದಗ ಜಿಲ್ಲೆಯ ಕ್ಯಾಂಡಿಡೇಟ್‌ ಬಗ್ಗೆ ಚಿಂತೆ ಮಾಡಬೇಡಿ, ಯಾರಿಗೂ ಅನ್ಯಾಯ ಮಾಡುವುದಿಲ್ಲ. ನಮ್ಮ ಮೇಲೆ ವಿಶ್ವಾಸವಿಡಿ, ಪ್ರಜಾಧ್ವನಿ ಜನರ ಧ್ವನಿಯಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಎಲ್ಲರೂ ಅಧಿಕಾರಕ್ಕೆ ಬಂದ ಹಾಗೆ. ಎಲ್ಲೆಡೆ ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರ ಎಂದು ಹೇಳಿ ಪ್ರಚಾರ ಪಡೆದುಕೊಳ್ಳುತ್ತಾರೆ. ಆದರೆ, ಒಂದಾದರೂ ಕೆಲಸ ಮಾಡಿದ್ದಾರಾ ಅಥವಾ ಮಾಡಿರುವ ಕೆಲಸಗಳನ್ನು ಸಾಕ್ಷಿ ಸಮೇತ ಹೇಳುವ ಧೈರ್ಯ ಬಿಜೆಪಿಯವರಿಗೆ ಇದೆಯಾ? ಎಂದು ಪ್ರಶ್ನಿಸಿದರು.

ಕೋವಿಡ್‌ನಲ್ಲಿ ತೀವ್ರವಾಗಿ ತೊಂದರೆಯಾದಾಗ ಯಾರು ಸಹಾಯ ಮಾಡಿದ್ದಾರೆ? ಸರ್ಕಾರ ಸಹಾಯ ಮಾಡಲಿಲ್ಲ, ಕೋವಿಡ್‌ ರೋಗಿಗಳಿಗೆ ಹಾಸಿಗೆ ನೀಡುವಲ್ಲಿಯೂ ಹಣ ಪಡೆದು ಜನರಿಗೆ ಮೋಸ ಮಾಡಿದ್ದಾರೆ. ಬಿಜೆಪಿಯಲ್ಲಿ 40% ಕಮೀಷನ್‌ ಪದ್ಧತಿ ಇರುವುದನ್ನು ನಾವು ಹೇಳಿಲ್ಲ. ಇದನ್ನ ಗುತ್ತಿಗೆದಾರರೇ ಹೇಳಿದ್ದು, ಪ್ರಧಾನಿಗೆ ದೂರು ಸಹ ಕೊಟ್ಟಿದ್ದಾರೆ. ಸ್ಪಂದಿಸದೇ ಇದ್ದಾಗ ದಯಾ ಮರಣಕ್ಕೆ ಅರ್ಜಿ ಹಾಕಿದ್ದಾರೆ. ಆದರೆ, ಅವರ ಮೇಲೆಯೇ ಆರೋಪ ಮಾಡುವಂತಹ ಕೆಲಸ ಬಿಜೆಪಿ ಮಾಡುತ್ತಿದೆ. ಬಿಜೆಪಿಗರದ್ದು ಜಾತಿ ಜಾತಿ, ಭಾವನೆಗಳ ಮೇಲೆ ದೃಷ್ಟಿಯಾದರೆ, ನಮ್ಮದು ಅಭಿವೃದ್ಧಿ ಮೇಲೆ ದೃಷ್ಟಿಎಂದರು.

ಲಂಚ ಕೊಟ್ಟರೆ ಮಾತ್ರ ಕೆಲಸ:

ಕೈಗಾರಿಕೆಗಳ ಸ್ಥಾಪನೆಯಲ್ಲಿ ಎಷ್ಟುಉದ್ಯೋಗ ಕೊಟ್ಟಿದ್ದಾರೆ ಎಂಬುದನ್ನು ಬಿಜೆಪಿ ಈಗಲಾದರೂ ಬಹಿರಂಗಪಡಿಸಬೇಕು. ಈಗ ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ, ಯಾವುದೇ ಹುದ್ದೆಗೆ ಲಂಚ ಕೊಡಲಿಲ್ಲ ಎಂದರೆ ಕೆಲಸ ಆಗುವುದಿಲ್ಲ. ಲಂಚ ಕೊಟ್ಟರೆ ಮಾತ್ರ ಕೆಲಸ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಸು ಕಾಸು ಎಂದು ವಿಧಾನಸಭೆಯ ಗೋಡೆ ಹೇಳುತ್ತಿದೆ. ಬಿಜೆಪಿ ಮತದಾರರಿಗೆ ಮಾಡಿದ ಮೋಸ, ಅನ್ಯಾಯ ಕುರಿತು ಇನ್ನು ಕೆಲವೇ ದಿನಗಳಲ್ಲಿ ‘ಬಿಜೆಪಿಯ ಪಾಪದ ಪುರಾಣ’ ಎನ್ನುವಂತಹ ಪುಸ್ತಕ ಬಿಡುಗಡೆ ಮಾಡುತ್ತೇವೆ ಎಂದರು.

ಮುದ್ರಣ ಕಾಶಿ​ಯಲ್ಲಿಂದು ಪ್ರಜಾ​ಧ್ವನಿ ಯಾತ್ರೆ: ಕೈ ಶಕ್ತಿ ಪ್ರದರ್ಶನಕ್ಕೆ ಅಂತಿಮ ಸಿದ್ಧತೆ

ಜನರ ರಕ್ಷಣೆಗಾಗಿ ಜೀವನ ಮಟ್ಟಸುಧಾರಿಸಲು ಕಾಂಗ್ರೆಸ್‌ ಹೊಸ ಯೋಜನೆ ರೂಪಿಸುತ್ತಿದೆ. ನಿಮ್ಮನ್ನು ಕತ್ತಲೆಯಿಂದ ಬೆಳಕಿಗೆ ತರಬೇಕು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಉಚಿತ ವಿದ್ಯುತ್‌ ನೀಡುವ ಸಂಕಲ್ಪ ಹೊಂದಿದ್ದೇವೆ, ಜನರ ಆದಾಯ ಡಬಲ್‌ ಆಗಲಿಲ್ಲ, ಅದಕ್ಕಾಗಿ ಮಹಿಳೆಯರಿಗೆ .2 ಸಾವಿರ ಗುರಿ ಹೊಂದಿದ್ದೇವೆ ಎಂದರು.

click me!