ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಅವರ ಜೊತೆ ಸೇರಿ ಸರ್ಕಾರ ಬೀಳಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಊಹಾಪೋಹ ಇದೆ. ಬಿಜೆಪಿ ಅವರ ಜೊತೆ ಸೇರಿ ಏನೋ ಮಾಡುತ್ತಿದ್ದಾರೆ ಅನಿಸುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ
ರಾಮನಗರ(ಆ.03): ಸಿಂಗಾಪುರದಲ್ಲಿ ಯಾರು ಕೂತಿದ್ದಾರೆ. ನಮ್ಮ ಹಳೆಯ ಸ್ನೇಹಿತರು ಅಲ್ವಾ. ಗ್ಯಾರಂಟಿಗಳನ್ನು ನೋಡಿ ಅವರಿಗೆ ತಲೆ ಕೆಡುತ್ತಿದೆ. ಇದರಿಂದ ವಿಚಲಿತರಾಗಿ ಸರ್ಕಾರ ಉಳಿಸುವ ತಂತ್ರ ಮಾಡುತ್ತಿದ್ದಾರೆ. ಇದೆಲ್ಲಾ ಅವರ ಕನಸು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಪರೋಕ್ಷವಾಗಿ ಟಾಂಗ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಂದಲು ಸರ್ಕಾರ ಬೀಳಿಸಲು ಸಾಧ್ಯವಿಲ್ಲ. 40 ಜನ ಶಾಸಕರನ್ನು ಕರೆದುಕೊಂಡು ಹೋಗೊಕೆ ಆಗುತ್ತಾ. ಸಿದ್ದರಾಮಯ್ಯ ಅವರು ಏನು ನಿದ್ದೆ ಮಾಡುತ್ತಿದ್ದಾರಾ. ಅವರೇನು ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಇಲ್ಲವಲ್ಲ. ಎಲ್ಲ ಶಾಸಕರನ್ನು ಭೇಟಿ ಮಾಡಿ ಅವರ ಸಮಸ್ಯೆ ಕೇಳುತ್ತಾರೆ. ಜೊತೆಗೆ ಸಣ್ಣಪುಟ್ಟಏನೇ ಆದರೂ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಇದ್ದಾರೆ. ಅವರು ಯಾವುದೇ ಹೋಟೆಲ್‌ನಲ್ಲಿ ಇಲ್ಲ. ಎಲ್ಲರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಅವರ ಜೊತೆ ಸೇರಿ ಸರ್ಕಾರ ಬೀಳಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಊಹಾಪೋಹ ಇದೆ. ಬಿಜೆಪಿ ಅವರ ಜೊತೆ ಸೇರಿ ಏನೋ ಮಾಡುತ್ತಿದ್ದಾರೆ ಅನಿಸುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರದಲ್ಲಿ ಸಾರಿಗೆ ಬಸ್ಸಿನ ಅವ್ಯವಸ್ಥೆ
ಕಾಂಗ್ರೆಸ್‌ನ 5 ಗ್ಯಾಂರಂಟಿಗಳು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಸ್ವಾತಂತ್ರ್ಯ ಬಂದ ನಂತರವೂ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ಆರೋಪ ಇತ್ತು. ಈಗ ಎಲ್ಲಾ ಪುಣ್ಯಕ್ಷೇತ್ರಗಳು ಹೆಣ್ಣು ಮಕ್ಕಳಿಂದ ಕೂಡಿದೆ. ಇದೆಲ್ಲವನ್ನೂ ನೋಡಿದಾಗ ವಿರೋಧ ಪಕ್ಷದವರಿಗೆ ತಲೆ ಕೆಡುತ್ತಿದೆ. ಇದರಿಂದ ವಿಚಲಿತರಾಗಿ ಸರ್ಕಾರ ಉಳಿಸುವ ತಂತ್ರ ಮಾಡುತ್ತಿದ್ದಾರೆ. ಇದೆಲ್ಲಾ ಅವರ ಕನಸು ಎಂದರು.
ಬಿಜೆಪಿ ಸರ್ಕಾರದಿಂದ ಜನರು ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ಪಕ್ಷ ಸಾಮಾನ್ಯ ಜನರಿಗಾಗಿ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಗ್ಯಾರಂಟಿಗಳ ಒತ್ತಡ ಹೆಚ್ಚಾಗಿದೆ. ಹಣ ಸೋರಿಕೆ ತಡೆಗಟ್ಟುವುದು, ಸಂಪನ್ಮೂಲ ಕ್ರೂಢೀಕರಣ ಮಾಡುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. 6 ತಿಂಗಳ ನಂತರ ಎಲ್ಲವೂ ಸರಿಹೋಗುತ್ತದೆ ಎಂದು ಬಾಲಕೃಷ್ಣ ಹೇಳಿದರು.
ಚುನಾವಣೆ ಜವಾಬ್ದಾರಿ ನೀಡಲು ಸಚಿವರ ಸಭೆ
ರಾಮನಗರ: ಕಾಂಗ್ರೆಸ್ ಮುಂಬರುವ ಲೋಕಸಭಾ ಚುನಾವಣೆಗಾಗಿ ತಯಾರಿಯಲ್ಲಿ ತೊಡಗಿದೆ. ಹೀಗಾಗಿ ಪಕ್ಷದ ವರಿಷ್ಠರು ರಾಜ್ಯ ನಾಯಕರು ಹಾಗೂ ಸಚಿವರಿಗೆ ಚುನಾವಣೆಯ ಜವಾಬ್ದಾರಿ ವಹಿಸಲು ದೆಹಲಿಗೆ ಕರೆಸಿಕೊಂಡಿದ್ದಾರೆ ಎಂದು ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿದರು.
ಅಕ್ರಮ ಆಸ್ತಿ ಗಳಿಕೆ ಕೇಸಲ್ಲಿ ಡಿ.ಕೆ. ಶಿವಕುಮಾರ್‌ಗೆ ಬಿಗ್ ರಿಲೀಫ್ ಕೊಟ್ಟ ಸುಪ್ರೀಂ ಕೋರ್ಟ್: ಸಿಬಿಐಗೆ ಹಿನ್ನಡೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ರಾಜಕೀಯ ಪಕ್ಷಗಳಲ್ಲಿ ಅಸಮಾಧಾನ ಸಹಜ. ನನ್ನ ಮೇಲೂ ಬೇರೆಯವರು ಬೇಡ ನಮ್ಮ ಸ್ನೇಹಿತರಿಗೆ ಅಸಮಾಧಾನ ಇದೆ. ಕಾರ್ಯ ಒತ್ತಡದ ಕಾರಣ ಅವರ ಫೋನ್ ಅನ್ನು ಸ್ವೀಕರಿಸಿ ಮಾತನಾಡಲು ಆಗುತ್ತಿಲ್ಲ. ಶಾಸಕನಾಗಿರುವ ನನ್ನದೇ ಇಂತಹ ಪರಿಸ್ಥಿತಿ ಇದೆ. ಹೀಗಿರುವಾಗ ಸಚಿವರು ಕಾರ್ಯದೊತ್ತಡದ ಕಾರಣ ಶಾಸಕರಿಗೆ ಸ್ಪಂದಿಸದೆ ಇರಬಹುದು ಎಂದರು.
ಅಸಮಾಧಾನ ಎಲ್ಲರ ಮೇಲೂ ಇರುತ್ತದೆ.ಅದನ್ನು ಬೇರೆ ರೀತಿಯಲ್ಲಿ ಬಿಂಬಿಸುವುದು ಬೇಡ. ವರ್ಗಾವಣೆ ವಿಚಾರ, ಸಣ್ಣ ಪುಟ್ಟಕೆಲಸಗಳು ಆಗಿಲ್ಲ ಎಂದು ಅಸಮಾಧಾನ ಇರುತ್ತದೆ. ಇದನ್ನೆಲ್ಲ ಸರಿಪಡಿಸುವ ಕೆಲಸವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮಾಡುತ್ತಾರೆ. ಶಾಸಕರ ಪತ್ರ ವ್ಯವಹಾರ ಎಲ್ಲವೂ ಬೋಗಸ್, ಯಾರು ಸಹ ಪತ್ರಗಳನ್ನು ಬರೆದಿಲ್ಲ. ಪತ್ರವನ್ನು ಕಟ್ ಅಂಡ್ ಪೇಸ್ಟ್ ಮಾಡಿದ್ದಾರೆ ಎಂದು ಹೇಳಿದರು.