Loksabha election 2024: ಎನ್‌ಡಿಎ ಜತೆ ಕೈಜೋಡಿಸಲು ಎಚ್‌ಡಿಕೆಗೆ ಸಂಪೂರ್ಣ ಅಧಿಕಾರ

By Kannadaprabha NewsFirst Published Jul 22, 2023, 8:02 AM IST
Highlights

ಮುಂಬರುವ ಲೋಕಸಭಾ ಚುನಾವಣೆ ಉದ್ದೇಶದಿಂದ ಎನ್‌ಡಿಎ ಜತೆ ಕೈಜೋಡಿಸುವುದೂ ಸೇರಿದಂತೆ ಪಕ್ಷದ ಭವಿಷ್ಯದ ದೃಷ್ಟಿಯಿಂದ ಯಾವುದೇ ತೀರ್ಮಾನ ಕೈಗೊಳ್ಳಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್‌ ಶಾಸಕಾಂಗ ಸಭೆ ಸಂಪೂರ್ಣ ಅಧಿಕಾರವನ್ನು ನೀಡಿದೆ.

ಬೆಂಗಳೂರು (ಜು.22) :  ಮುಂಬರುವ ಲೋಕಸಭಾ ಚುನಾವಣೆ ಉದ್ದೇಶದಿಂದ ಎನ್‌ಡಿಎ ಜತೆ ಕೈಜೋಡಿಸುವುದೂ ಸೇರಿದಂತೆ ಪಕ್ಷದ ಭವಿಷ್ಯದ ದೃಷ್ಟಿಯಿಂದ ಯಾವುದೇ ತೀರ್ಮಾನ ಕೈಗೊಳ್ಳಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್‌ ಶಾಸಕಾಂಗ ಸಭೆ ಸಂಪೂರ್ಣ ಅಧಿಕಾರವನ್ನು ನೀಡಿದೆ.

ಇದನ್ನು ಖುದ್ದು ಕುಮಾರಸ್ವಾಮಿ ಅವರೇ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಸಭೆಯಲ್ಲಿ ಕುಮಾರಸ್ವಾಮಿ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂಬ ಮಾತನ್ನು ದೇವೇಗೌಡ ಅವರೇ ಹೇಳಿದ್ದಾರೆ. ಯಾವುದೇ ತೀರ್ಮಾನ ಕೈಗೊಳ್ಳುವುದಾದರೆ ಪಕ್ಷದ ಶಾಸಕರು, ನಾಯಕರ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Loksabha election 2024: ಎನ್‌ಡಿಎ ಜೊತೆ ಸೇರದೆ ಸ್ವತಂತ್ರವಾಗಿ ಸ್ಪರ್ಧಿಸಲು ದೇವೇಗೌಡ ಇಂಗಿತ

ಪಕ್ಷದ ಉಳಿಸುವ ಸಂಬಂಧ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಲೋಕಸಭೆಗೆ ಇನ್ನೂ 11 ತಿಂಗಳು ಇದೆ. ಅದಕ್ಕೆ ಸಿದ್ದತೆ ನಡೆಸುವುದಕ್ಕಿಂತ ಮುನ್ನ ಪಕ್ಷವನ್ನು ಸಂಘಟನೆ ಮಾಡುವುದು ನಮ್ಮ ಮೇಲಿರುವ ಜವಾಬ್ದಾರಿ. ಇದಕ್ಕಾಗಿ 10 ಮಂದಿಯ ತಂಡವನ್ನು ರಚಿಸಿ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಕಾರ್ಯನಿರ್ವಹಿಸಲಾಗುವುದು. ಈ ವೇಳೆ ಜನತೆಯ ವಿಶ್ವಾಸ ಗಳಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.

click me!