ಈ ದೇಶದ ನೂರು ಕೋಟಿ ಜನರಿಗೆ ನಾಯಕತ್ವ ಕೊಡುವ ವ್ಯಕ್ತಿತ್ವ ಇರೋದು ಮೋದಿಗೆ ಮಾತ್ರ: ಎಚ್‌ಡಿ ದೇವೇಗೌಡ

By Ravi Janekal  |  First Published Jan 18, 2024, 8:29 PM IST

ಮುಂಬರುವ ಲೋಕಸಭಾ ಚುನಾವಣೆಯಲ್ಲೂ ದೇವೇಗೌಡರು ನಿಲ್ಲಬೇಕು ಅಂತಾ ಹೇಳ್ತಿದ್ದಾರೆ. ಆದರೆ ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನಿಲ್ಲೋ ಪ್ರಶ್ನೆಯೇ ಇಲ್ಲ. ವೀಲ್ ಚೇರ್‌ನಲ್ಲಿ ಬಂದು ಚನ್ನಕೇಶವ ದರ್ಶನ ಪಡೆದುಕೊಂಡಿದ್ದೇನೆ. ಈ ಚುನಾವಣೆಯಲ್ಲಿ ನಾನು ಮೊಮ್ಮಗನ ಗೆಲ್ಲಿಸಿ ಅಂತಾ ಬಂದಿಲ್ಲ. ಈ ಜಿಲ್ಲೆಯ ಅಭಿವೃದ್ಧಿ ಗಾಗಿ ಬಂದಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ತಿಳಿಸಿದರು.


ಹಾಸನ (ಜ.18): ಮುಂಬರುವ ಲೋಕಸಭಾ ಚುನಾವಣೆಯಲ್ಲೂ ದೇವೇಗೌಡರು ನಿಲ್ಲಬೇಕು ಅಂತಾ ಹೇಳ್ತಿದ್ದಾರೆ. ಆದರೆ ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನಿಲ್ಲೋ ಪ್ರಶ್ನೆಯೇ ಇಲ್ಲ. ವೀಲ್ ಚೇರ್‌ನಲ್ಲಿ ಬಂದು ಚನ್ನಕೇಶವ ದರ್ಶನ ಪಡೆದುಕೊಂಡಿದ್ದೇನೆ. ಈ ಚುನಾವಣೆಯಲ್ಲಿ ನಾನು ಮೊಮ್ಮಗನ ಗೆಲ್ಲಿಸಿ ಅಂತಾ ಬಂದಿಲ್ಲ. ಈ ಜಿಲ್ಲೆಯ ಅಭಿವೃದ್ಧಿ ಗಾಗಿ ಬಂದಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ತಿಳಿಸಿದರು.

ಇಂದು ಬೇಲೂರಿನಲ್ಲಿ ಚುನಾಯಿತ ಸದಸ್ಯರು ಹಾಗು ಮಾಜಿ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಇಷ್ಟು ವರ್ಷ ದ ರಾಜಕೀಯ ಜೀವನದಲ್ಲಿ ಜಾತ್ಯಾತೀತ ತತ್ವದಡಿ ಕೆಲಸ ಮಾಡಿದ್ರಿ ಆದರೆ ಕೊನೆಯ ಘಟ್ಟದಲ್ಲಿ ಯಾಕೆ ಮಾರ್ಪಾಡು ಮಾಡಿದ್ದೀರಿ ಅಂತಾ ಕೆಲವರು ಕೇಳ್ತಾರೆ. ಹೌದು ಮಾರ್ಪಾಡು ಮಾಡಿದ್ದೇನೆ ಯಾಕೆ ಅಂದರೆ ಈ ರಾಷ್ಟದ ಚುನಾವಣೆ ತುಂಬಾ ವಿಭಿನ್ನವಾಗಿದೆ. ವಿಧಾನಸಭಾ ಚುನಾವಣೆಯಂತಲ್ಲ.  ನಾನು ಮೋದಿಯವರ ಜೊತೆ ಸೇರಿದೆ ಇದರಲ್ಲಿ ಸ್ವಾರ್ಥ ಏನಿದೆ? ನಾನು ಏನು ಆಗಬೇಕಿದೆ ಹೇಳಿ, ಚುನಾವಣೆಗೆ ನಿಲ್ಲಬೇಕಾ? ಈ ದೇಶದ ನೂರು ಕೋಟಿ ಜನರಿಗೆ ನಾಯಕತ್ವ ಕೊಡುವ ವ್ಯಕ್ತಿತ್ವ ಇರೋದು ಮೋದಿಗೆ ಮಾತ್ರ ಇರೋದು. ಮತ್ಯಾರಿಗಿದೆ? ಮಮತಾ ಮಾಡ್ತಾರಾ, ಸ್ಟಾಲಿನ್ ಮಾಡ್ತಾರಾ?ಕ ಕಾಂಗ್ರೆಸ್ ನಲ್ಲಿ ನಾಯಕತ್ವದವರು ಇದ್ದಾರಾ? ಇವತ್ತು ಮಣಿಪುರ ನಿಂದ ಪಾದಯಾತ್ರೆ ಶುರು ಮಾಡಿದ್ದಾರೆ. ಕಾಂಗ್ರೆಸ್ ಬಗ್ಗೆ ನಾನು ಬಹಳ ಮಾತನಾಡಬಲ್ಲೆ. ಆದರೆ ಹಾಗೆ ಮಾಡುವುದಿಲ್ಲ. ಕೆಟ್ಟ ಅಪ ಪ್ರಚಾರಕ್ಕೆ ಮಾರು ಹೋಗಬೇಡಿಕ. ಓರ್ವ ಯುವಕನನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದ ದೇವೇಗೌಡರು

Tap to resize

Latest Videos

Ticket fight: ಅನಂತ್‌ ಸುತ್ತಲೇ ಗಿರಕಿ ಹೊಡೆಯುತ್ತಿರುವ ಬಿಜೆಪಿ ಟಿಕೆಟ್!

ದೇವೇಗೌಡರ ಮಕ್ಕಳು ಯಾರಿಗೆ ಅನ್ಯಾಯ ಮಾಡಿದ್ದಾರೆ?

ಈ ದೇಶದಲ್ಲಿ ಕಾಂಗ್ರೆಸ್ ಗಾಗಿ ನನ್ನ ಪ್ರಾಣವನ್ನೇ ತೆತ್ತಿದ್ದೇನೆ. ಆದರೆ ಅವರಿಂದ ಸಿಕ್ಕಿದ್ದೇನು? ನಾವು ಯಾರಿಗೆ ಅನ್ಯಾಯ ಮಾಡಿದ್ದೇವೆ ಸತ್ಯ ಹೇಳಿ? ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದ ಮಾತ್ರಕ್ಕೆ ಯಾರನ್ನು ಬಿಟ್ಟುಕೊಡೊದಿಲ್ಲ. ನನ್ನ ಅಣ್ಣ ತಮ್ಮಂದಿರು ಮುಸ್ಲಿಂ ಬಾಂದವರು. ನಿಮ್ಮ‌ರಕ್ಷಣೆಗಾಗಿ ಈ ದೇಹ ಸವೆಸಿದ್ದೇನೆ. ನಿಮಗಾಗಿ ಮೀಸಲಾತಿ ಕೊಟ್ಟಿದ್ದು ಯಾರು? ನಾವು ರೈತರ ಮಕ್ಕಳು ನಿಮ್ಮನ್ನ ಬಿಟ್ಟು ನಾವು ಎಲ್ಲಿಗೆ ಹೋಗೋಣ? ಇದೇ ಕೊನೆ ಅಲ್ಲ, ನಿಮ್ಮ ಬಳಿ ಮತ್ತೆ ಬರುತ್ತೇನೆ ಎಂದರು.

ಯಾರೋ ಒಬ್ಬ ಅನಗತ್ಯವಾಗಿ ರೇವಣ್ಣ ಅವರ ಮೇಲೆ ಆಪಾದನೆ ಮಾಡ್ತಾರೆ. ಮಾಡಲಿ ಅವರು ದೊಡ್ಡೋರು, ತುಂಬಾ ದೊಡ್ಡ ವ್ಯಕ್ತಿ ಅವರು. ತಮ್ಮ ಕುಟುಂಬದ ವಿರುದ್ಧ ಟೀಕೆಗೆ ತಿರುಗೇಟು ನೀಡಿದ ದೇವೇಗೌಡರು. ನಾನು ನನ್ನ ಹೆಂಡತಿ ಒಡವೆ ಅಡವಿಟ್ಟು ಪಡುವಲಹಿಪ್ಪೆ ಗ್ರಾಮದಲ್ಲಿ ಜಮೀನು ತಗೊಂಡ್ರೆ ನನ್ನ ಮೇಲೆ‌ ಕೇಸ್ ಹಾಕಿದ್ರು. ಸುಪ್ರೀಂಕೋರ್ಟ್ ವರೆಗೂ ತೆಗೆದುಕೊಂಡು ಹೋದರು. ನಾನು ಇಂತಹ ನೋವಿನಿಂದ ಬಂದವನು ಎಂದು ಭಾವುಕರಾದರು.
ಐತಿಹಾಸಿಕ ಜುಮ್ಮಾ ಮಸೀದಿಯಲ್ಲಿ ಅನಧಿಕೃತ ಮದರಸಾ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

click me!