ಬಿಜೆಪಿಯವರಿಗೆ ರಾಜಕೀಯ ಮಾಡಲು ಒಂದು ಹೆಣ ಬೇಕು ಎಂದು ಹೇಳುವ ಮೂಲಕ ಲೋಕಸಭಾ ಚುನಾವಣಾ ಹೊತ್ತಲ್ಲಿ ಸಚಿವ ಮಾಂಕಾಳು ವೈದ್ಯ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಕಾರವಾರ, ಉತ್ತರಕನ್ನಡ (ಏ.22): ಬಿಜೆಪಿಯವರಿಗೆ ರಾಜಕೀಯ ಮಾಡಲು ಒಂದು ಹೆಣ ಬೇಕು ಎಂದು ಹೇಳುವ ಮೂಲಕ ಲೋಕಸಭಾ ಚುನಾವಣಾ ಹೊತ್ತಲ್ಲಿ ಸಚಿವ ಮಾಂಕಾಳು ವೈದ್ಯ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಇಂದು ಹೊನ್ನಾವರ ಹಳದಿಪುರದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ನಾಲಗೆ ಹರಿಬಿಟ್ಟಿದ್ದಾರೆ. ಉತ್ತರಕನ್ನಡ ಜಿಲ್ಲೆ 30 ವರ್ಷಗಳಿಂದ ಅನಾಥವಾಗಿದ್ದು, 10 ವರ್ಷ ಕೇಂದ್ರದಲ್ಲೂ ಕೇಳುವವರಿಲ್ಲದಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೆಸರು ಒಮ್ಮೆಯೂ ಸಂಸತ್ತಿನಲ್ಲಿ ಚರ್ಚೆಗೆ ಬಂದಿಲ್ಲ. ಬಿಜೆಪಿ ಅಭ್ಯರ್ಥಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ 6 ಬಾರಿ ಶಾಸಕರಾದರೂ ಉತ್ತರ ಕನ್ನಡ ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ಬಗ್ಗೆ ಒಮ್ಮೆಯೂ ಯೋಚಿಸಿಲ್ಲ ಎಂದು ಕಿಡಿಕಾರಿದರು.
undefined
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದ ಖಾಲಿ ಚೊಂಬು ತುಂಬಿಸುವಂತಹ ತೀರ್ಪು ಸುಪ್ರೀಂ ನೀಡಿದೆ - ಸಚಿವ ದಿನೇಶ್ ಗುಂಡೂರಾವ್
ಜೀವಮಾನದಲ್ಲಿ ಬಿಜೆಪಿಗರು ಸುಳ್ಳು ಹೇಳುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಬಿಜೆಪಿಗರಿಗೆ ರಾಜಕಾರಣ ಮಾಡಲು ಕೂಡ ಅವರಿಗೆ ಹೆಣ ಬೇಕು. ಕರ್ನಾಟಕಕ್ಕೆ ಬಂದು ಮೋದಿ ಬಿಜೆಪಿಗೆ ಮತ ಹಾಕಿ ಅಂತಾರೆ. ಆದರೆ ಅವರು ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದು ಏನು ಮಾಡಿದ್ದಾರೆ? ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿ 10 ವರ್ಷ ಕಳೆಯಿತು. ಸಾವಿರಾರು ಜನರು ಸತ್ತರು. ಒಂದು ದಿನ ಹೆದ್ದಾರಿ ಕಾಮಗಾರಿ ಬಗ್ಗೆ ಬಿಜೆಪಿಗರು ಮಾತನಾಡಿಲ್ಲ. ಏಕೆಂದರೆ ಹೆದ್ದಾರಿ ಗುತ್ತಿಗೆ ಕಂಪೆನಿ ಅವರದ್ದೇ ಪಕ್ಷದ ಕೇಂದ್ರ ಸಚಿವರದ್ದಾಗಿದ್ದರಿಂದ ಬಿಜೆಪಿಗರು ಮಾತನಾಡೋಕೆ ಧೈರ್ಯ ಮಾಡಿಲ್ಲ. ರಾಜ್ಯದಲ್ಲಿ ಯಾರದ್ದಾದರೂ ಸಾವಾದರೆ ಅದನ್ನು ಮಾತ್ರ ರಾಜಕೀಯಕ್ಕೆ ಬಳಸಿಕೊಳ್ಳಲು ಹಾತೊರೆಯುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪಗೆ ಪ್ರತ್ಯೇಕ ಚಿಹ್ನೆ ನೀಡಿದ ಚುನಾವಣಾ ಆಯೋಗ!