
ಚನ್ನಪಟ್ಟಣ (ಏ.22): ನಾವು ಭಾರತೀಯರು, ಸಂವಿಧಾನದಲ್ಲಿ ಸಮಾನತೆ ಇದೆ ಅಂತಾ ಹೇಳಿದ್ದಾರೆ. ಆದರೆ ಪ್ರಧಾನಿ ಹಿಂದುಗಳು ಮಂಗಳ ಸೂತ್ರ ಕಳೆದುಕೊಳ್ತಾರೆ ಅಂತಾ ಹೇಳಿದ್ದಾರೆ ಅಂದ್ರೆ ಏನ್ ಅರ್ಥ? ಈ ಮಾತುಗಳನ್ನ ನೋಡಿದ್ರೆ ಬಿಜೆಪಿ ಹತಾಶೆ ಎದ್ದು ಕಾಣುತ್ತೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.
ಹಿಂದೂಗಳ ಮಂಗಳ ಸೂತ್ರ ಮುಸ್ಲಿಮರ ಪಾಲಾಗಲಿದೆ ಎಂಬ ಪ್ರಧಾನಿ ಹೇಳಿಕೆ ಸಂಬಂಧ ಇಂದು ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ, ಹೆಣ್ಣುಮಕ್ಕಳ ಸೌಭಾಗ್ಯ, ಆ ಭಾಗ್ಯಕ್ಕೆ ನಾವೆಲ್ಲ ಗೌರವ ಕೊಡ್ತೀವಿ. ಅಷ್ಟೊಂದು ಬೇಜಾರಾಗಿ ಈ ಮಟ್ಟಕ್ಕೆ ಇಳಿಯುತ್ತಿದ್ದಾರೆಂದು ಗೊತ್ತಿಲ್ಲ. ಈ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ ಎಂದು ತಿರುಗೇಟು ನೀಡಿದರು.
ಎರಡು ಬಾರಿ ಪ್ರಧಾನಿಯಾದ ನರೇಂದ್ರ ಮೋದಿ ಕೊಡುಗೆ ಏನು? ಸಿಎಂ ವಾಗ್ದಾಳಿ
ರಾಜ್ಯಕ್ಕೆ ಬರ ಪರಿಹಾರ ನೀಡುವ ಬಗ್ಗೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇವತ್ತು ಸುಪ್ರೀಂಕೋರ್ಟ್ ನಲ್ಲಿ ಬರಗಾಲದ ಪರಿಹಾರ ಹಣದ ಬಗ್ಗೆ ವಾದವಾಗಿದೆ. ಕೇಂದ್ರ ಸರ್ಕಾರ ಒಂದು ವಾರದಲ್ಲಿ ತೀರ್ಮಾನ ಮಾಡ್ತೀವಿ ಅಂತ ಒಪ್ಪಿಕೊಂಡಿದ್ದಾರೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ನಮ್ಮ ತೆರಿಗೆ, ನಮ್ಮ ಹಕ್ಕು ಅಂತಾ ಹೋರಾಟ ಮಾಡ್ತಿದ್ದೆವು. ಡಿ.ಕೆ ಸುರೇಶ್ ಸಹ ಇದರ ಬಗ್ಗೆ ಹೋರಾಟ ಮಾಡಿದ್ರು. ಹಾಗಾಗಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದರು.
ಓಟು ಹಾಕೊಲ್ಲ ಹಾಕಿಸೊಲ್ಲ ಬರೀ ಘೋಷಣೆ ಕೂಗ್ತೀರಿ: ಕೈ ಕಾರ್ಯಕರ್ತರ ಮೇಲೆ ಡಿಕೆಶಿ ಗರಂ
ಮೇಕೆದಾಟು ಅಣೆಕಟ್ಟು ಬಗ್ಗೆ ವಿಪಕ್ಷಗಳ ಆರೋಪ ವಿಚಾರ ಪ್ರಸ್ತಾಪಿಸಿದ ಅವರು, ನಾವು ಹೋರಾಟ ಮಾಡಿದ್ದೇ ಕಾವೇರಿ ಜಲಾನಯನ ಪ್ರದೇಶ ಜನರ ಉಳಿವಿಗಾಗಿ. ಈಗ ಟ್ಯಾಂಕರ್ ಸಿಟಿ ಅಂತಿದ್ದಾರೆ, ಇಂಥ ಬರಗಾಲದಲ್ಲಿ ಟ್ಯಾಂಕ್ ನಲ್ಲಾದ್ರೂ ನೀರು ಕೊಡ್ತಿದ್ದೀವಿ. 7 ಸಾವಿರ ಬೋರ್ವೆಲ್ ಕೊರೆಸಿದ್ದೇವೆ. ಭೀಕರ ಬರಗಾಲ ಸಮಸ್ಯೆಗಳನ್ನು ನಮ್ಮ ಸರ್ಕಾರ ಸಮರ್ಪಕವಾಗಿ ನಿಭಾಯಿಸಿದೆ. ಪ್ರತಿ ಮನೆಯಲ್ಲಿ ಸ್ನಾನ ಮಾಡದೇ ಯಾರಾದರೂ ಇದ್ದಾರಾ? ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.