ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕಡಿಮೆ ಕೊಟ್ರೆ ಕರೆಂಟ್ ಕೊಡಲ್ಲ; ಮತದಾರರಿಗೆ ಬೆದರಿಕೆ ಹಾಕಿದ ಶಾಸಕ ರಾಜು ಕಾಗೆ

By Ravi JanekalFirst Published May 1, 2024, 10:15 AM IST
Highlights

ಎಡವಟ್ಟು ಹೇಳಿಕೆಗಳಿಂದಲೇ ಸುದ್ದಿಯಾಗುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ರಾಜು ಕಾಗೆ ಇದೀಗ ಚುನಾವಣೆ ಹೊತ್ತಲ್ಲಿ ಮತ್ತೊಂದು ಎಡವಟ್ಟು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಚಿಕ್ಕೋಡಿ (ಮೇ.1): ಎಡವಟ್ಟು ಹೇಳಿಕೆಗಳಿಂದಲೇ ಸುದ್ದಿಯಾಗುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ರಾಜು ಕಾಗೆ ಇದೀಗ ಚುನಾವಣೆ ಹೊತ್ತಲ್ಲಿ ಮತ್ತೊಂದು ಎಡವಟ್ಟು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಲೀಡ್ ಕೊಡದಿದ್ರೆ ಕರೆಂಟು ಕೊಡಲ್ಲ ಮತದಾರರಿಗೆ ಬೆದರಿಕೆ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಮತ ಪ್ರಚಾರದ ವೇಳೆ ಮತದಾರರಿಗೆ ಬೆದರಿಕೆ ಹಾಕಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಕಡಿಮೆ ಬಂದಿವೆ. ಕಳೆದ ಸಲ ಕಡಿಮೆ ಲೀಡ್ ಕೊಟ್ಟಿದ್ದಕ್ಕೆ ಕರೆಂಟು ಮಾತ್ರ ತೆಗೆಯುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಕೊಡದಿದ್ರೆ ಈ ಸಲ ಕರೆಂಟೇ ಕೊಡೊಲ್ಲ ಎಂದು ಬೆದರಿಕೆಯೊಡ್ಡಿರುವ ರಾಜು ಕಾಗೆ.

ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಸವದಿ ಆಪ್ತನ ಮರ್ಡರ್..! ಎಲೆಕ್ಷನ್ ಹೊತ್ತಲ್ಲಾದ ಕೊಲೆ ರಹಸ್ಯವೇನು..?

ಇತ್ತೀಚೆಗೆ ಪ್ರಿಯಾಂಕಾ ಜಾರಕಿಹೊಳಿ ಪರ ಉಗಾರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತಾಡುತ್ತಾ, ಗ್ಯಾರಂಟಿ ಯೋಜನೆ ಪಡೆದು ಬೇರೆಯವರಿಗೆ ಮತ ನೀಡಿದರೆ ಅದು ಸಂವಿಧಾನಕ್ಕೆ ಮಾಡುವ ಅವಮಾನ, ಪ್ರಜಾಪ್ರಭುತ್ವ ಕಗ್ಗೊಲೆ ಎಂಬಂತಹ ಹೇಳಿಕೆ ನೀಡಿ ವಿವಾದ ಮೈಮೇಲೆಳೆದುಕೊಂಡಿದ್ದರು. ಇದೀಗ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಕೊಡದಿದ್ರೆ ಕರೆಂಟು ಕೊಡೊಲ್ಲ ಎಂದು ಹೇಳುವ ಮೂಲಕ ನೇರವಾಗಿ ಮತದಾರರಿಗೆ ಬೆದರಿಕೆ ಹಾಕಿದ್ದಾರೆ. ಜನಪ್ರತಿನಿಧಿಯಾಗಿ ಈ ರೀತಿ ಮತದಾರರಿಗೆ ಬೆದರಿಕೆ ಹಾಕುವುದು ಸಂವಿಧಾನ, ಪ್ರಜಾಪ್ರಭುತ್ವ, ಮತದಾರನ ಹಕ್ಕಿನ ಕಗ್ಗೊಲೆ ಅನ್ನಿಸುವುದಿಲ್ಲವ?

click me!