ಸಿದ್ದು, ಡಿಕೆಶಿಗೂ ಸರ್ಕಾರ ಉಳಿಯಲ್ಲವೆಂದು ಗೊತ್ತಿದೆ: ಶಾಸಕ ಬಸನಗೌಡ ಯತ್ನಾಳ್‌

By Kannadaprabha NewsFirst Published Apr 17, 2024, 7:43 AM IST
Highlights

ಲೋಕಸಭೆಗೆ ಕರ್ನಾಟಕದಿಂದ ಇಂತಿಷ್ಟು ಸೀಟ್ ಕೊಡಬೇಕು ಎಂದು ಅವರ ಹೈಕಮಾಂಡ್‌ನವರು (ಕಾಂಗ್ರೆಸ್‌) ಅವರಿಗೆ ಸೂಚಿಸಿರಬೇಕು. ಆದರೆ, ಕರ್ನಾಟಕದ ಇಂದಿನ ಪರಿಸ್ಥಿತಿ ನೋಡಿದರೆ ಲೋಕಸಭೆ ನಂತರ ಸಿಎಂ, ಡಿಸಿಎಂ, ಸಚಿವರು ಸೇರಿ ಎಲ್ಲರ ತಲೆದಂಡ ಆಗಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭವಿಷ್ಯ ನುಡಿದರು. 
 

ವಿಜಯಪುರ (ಏ.17): ಲೋಕಸಭೆಗೆ ಕರ್ನಾಟಕದಿಂದ ಇಂತಿಷ್ಟು ಸೀಟ್ ಕೊಡಬೇಕು ಎಂದು ಅವರ ಹೈಕಮಾಂಡ್‌ನವರು (ಕಾಂಗ್ರೆಸ್‌) ಅವರಿಗೆ ಸೂಚಿಸಿರಬೇಕು. ಆದರೆ, ಕರ್ನಾಟಕದ ಇಂದಿನ ಪರಿಸ್ಥಿತಿ ನೋಡಿದರೆ ಲೋಕಸಭೆ ನಂತರ ಸಿಎಂ, ಡಿಸಿಎಂ, ಸಚಿವರು ಸೇರಿ ಎಲ್ಲರ ತಲೆದಂಡ ಆಗಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭವಿಷ್ಯ ನುಡಿದರು. ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಹತಾಶರಾಗಿದ್ದಾರೆ. ತಾವು ಲೋಕಸಭಾ ಚುನಾವಣೆ ನಂತರ ಇರುವುದಿಲ್ಲ ಎಂಬುದು ಸಿಎಂ ಹಾಗೂ ಡಿಸಿಎಂ ಅವರಿಗೂ ಗೊತ್ತಿದೆ ಎಂದರು.

ಇದು ಸನಾತನ ಧರ್ಮ ಉಳಿಸುವ ಚುನಾವಣೆ: ಇದು ಮೋದಿ ಚುನಾವಣೆ ಅಲ್ಲ, ಇದು ಸನಾತಮ ಧರ್ಮ ಉಳಿಸುವ ಚುನಾವಣೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಮೋದಿ ಅವರ 10 ವರ್ಷದ ಆಡಳಿತ ಟ್ರೈಲರ್ ಮಾತ್ರ, ಪಿಚ್ಚರ್ ಬಾಕಿ ಹೈ. ಈ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿ ಆದರೆ ಪರಿವಾರ ವಾದ ನಿರ್ನಾಮ ಆಗುತ್ತದೆ. ದೇಶ ಉಳಿದರೆ ಹಿಂದುತ್ವ ಉಳಿಯುತ್ತದೆ ಅಂತ ಜನತೆಗೆ ಗೊತ್ತಾಗಿದೆ ಎಂದರು.

ಲೋಕಸಭೆಯಲ್ಲಿ ಲೀಡ್‌ ಕೊಡದಿದ್ದರೆ ನಾನು ಮಂತ್ರಿ ಸ್ಥಾನ ಬಿಡಬೇಕಾಗುತ್ತೆ: ಸಚಿವ ದರ್ಶನಾಪುರ

ಬಿಜೆಪಿ ಬಂದ್ರೆ ಸಂವಿಧಾನ ಬದಲಾಯಿಸ್ತಾರೆ ಎಂದು ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದವರು ಹೇಳಿದರು. ಕೇಜ್ರಿವಾಲ್ ಜೈಲಿಗೆ ಹೋಗಿದ್ದಾರೆ, ಮುಂದೆ ಡಿಂಗ್ರಿವಾಲನೂ, ಎಲ್ಲರೂ ಜೈಲಿಗೆ ಹೋಗ್ತಾರೆ, ಯಾರೂ ತಪ್ಪಿಸಿಕೊಳ್ಳುವುದಕ್ಕಾಗುವುದಿಲ್ಲ ಎಂದು ತಮ್ಮದೇ ಶೈಲಿಯಲ್ಲಿ ಮಾತನಾಡಿದರು. ಮಂಗಳೂರಿನ ಚೌಟ, ಉಡುಪಿಯ ಕೋಟ, ಕಾಂಗ್ರೆಸ್‌ಗೆ ಗೂಟ ಎಂದು ಹೇಳಿ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಈಶ್ವರಪ್ಪ ಪ್ರಯತ್ನ ಯಶಸ್ವಿಯಾಗಲಿ: ಈಶ್ವರಪ್ಪ ಅವರನ್ನು ಅಮಿತ್ ಶಾ ದೆಹಲಿಗೆ ಕರೆದಿದ್ದಾರೆ, ಅವರ ಮಾತುಕತೆ ಯಶಸ್ವಿಯಾಗಲಿ. ಈಶ್ವರಪ್ಪ ಬಿಜೆಪಿಯಲ್ಲಿಯೇ ಉಳಿಯುವಂತಾಗಲಿ, ರಾಜ್ಯದಲ್ಲಿ ವಂಶಪಾರಂಪರ್ಯದ ರಾಜಕೀಯ ಅಂತ್ಯವಾಗಲಿ ಎಂದು ಬಿಜೆಪಿ ನಾಯಕ ಬಸನಗೌಡ ಯತ್ನಾಳ್ ಹೇಳಿದ್ದಾರೆ. ಧಾನಿ ಮೋದಿ ಅವರೇ ಈ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಬೇರೆ ಪಕ್ಷದೊಂದಿಗೆ ಅಡ್ಜಸ್ಟ್‌ಮೆಂಟುಗಳನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಕೂಡ ಕುಟುಂಬ ರಾಜಕಾರಣ ನಿಲ್ಲಬೇಕು ಎಂದು ಬಯಸುತ್ತಿದ್ದಾರೆ. ಅದನ್ನು ಶೀಘ್ರದಲ್ಲಿಯೇ ಮೋದಿ ಈಡೇರಿಸುತ್ತಾರೆ. 

ಮಂಡ್ಯ, ಕೋಲಾರದಲ್ಲಿ ಇಂದು ರಾಹುಲ್‌ ಗಾಂಧಿ ಅಬ್ಬರ: ಸಿದ್ದು,ಡಿಕೆಶಿ ಸಾಥ್!

ದೇಶದಲ್ಲಿಯೇ ಅಂತಹ ವ್ಯವಸ್ಥೆಯನ್ನು ಅಂತ್ಯಗೊಳಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಮೋದಿ ಅವರ ಮಾರ್ಗದರ್ಶನದಲ್ಲಿ ಈಶ್ವರಪ್ಪ ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು. ರಾಜ್ಯಾಧ್ಯಕ್ಷರ ಬದಲಾವಣೆ ಈಶ್ವರಪ್ಪ ಅವರ ಬೇಡಿಕೆ, ಯಾರನ್ನು ಇಳಿಸಬೇಕು, ಯಾರನ್ನ ಏರಿಸಬೇಕು, ಯಾರನ್ನು ಮೂಲೆಗೊತ್ತಬೇಕು ಎಂದು ಪಕ್ಷ ತೀರ್ಮಾನ ಮಾಡುತ್ತದೆ ಎಂದರು. ಅಪ್ಪ ಮಕ್ಕಳ ವಿರುದ್ಧದ ನಮ್ಮ ಸಮರಕ್ಕೆ ಲೋಕಸಭಾ ಚುನಾವಣೆ ಮುಗಿಯುವವರೆಗೆ ಬೇರೆ ಕೆಲವು ಮಂದಿಗೆ ಚಾರ್ಜ್ ನೀಡಿದ್ದೇವೆ. ಅವರು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಈಗ ನನ್ನ ಅವಶ್ಯಕತೆ ಇಲ್ಲ ಎಂದವರು ಮಾರ್ಮಿಕವಾಗಿ ನುಡಿದರು.

click me!