ಮಂಡ್ಯ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಅತಿ ಹೆಚ್ಚು ಅಂತರದ ಮತಗಳಿಂದ ಜಯಗಳಿಸಿದ್ದ ದಾಖಲೆ ಇದುವರೆಗೆ ಅಂಬರೀಶ್ ಹೆಸರಿನಲ್ಲಿತ್ತು. ಅದನ್ನು ಈ ಬಾರಿಯ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಧೂಳೀಪಟ ಮಾಡಿದ್ದಾರೆ.
ಮಂಡ್ಯ : ಮಂಡ್ಯ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಅತಿ ಹೆಚ್ಚು ಅಂತರದ ಮತಗಳಿಂದ ಜಯಗಳಿಸಿದ್ದ ದಾಖಲೆ ಇದುವರೆಗೆ ಅಂಬರೀಶ್ ಹೆಸರಿನಲ್ಲಿತ್ತು. ಅದನ್ನು ಈ ಬಾರಿಯ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಧೂಳೀಪಟ ಮಾಡಿದ್ದಾರೆ.
೧೯೯೮ರ ಲೋಕಸಭಾ ಉಪ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಂಬರೀಶ್ ಸೋಲಿಲ್ಲದ ಸರದಾರನೆಂಬಂತೆ ಇದ್ದ ಕಾಂಗ್ರೆಸ್ ಪಕ್ಷದ ಜಿ.ಮಾದೇಗೌಡರನ್ನು ೧,೮೦,೫೨೩ ಮತಗಳ ಅಂತರದಿಂದ ಸೋಲಿಸಿ ಪ್ರಚಂಡ ಜಯಭೇರಿಯೊಂದಿಗೆ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದರು.
ಮಗ ಸೋತ ಜಾಗದಲ್ಲಿ ಗೆದ್ದು ಬೀಗಿದ ಅಪ್ಪ: ಗೆಲುವಿಗೆ ಕಾರಣವಾಯ್ತು ಎಚ್‌ಡಿಕೆ ನಾಮಬಲ, ಮೈತ್ರಿ ಒಗ್ಗಟ್ಟಿನ ಫಲ
೨೬ ವರ್ಷಗಳ ಬಳಿಕ ನಡೆದ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಆ ದಾಖಲೆಯನ್ನು ಪುಡಿಗಟ್ಟಿದ್ದು, ೨,೮೪,೬೨೦ ಮತಗಳ ಅಂತರದ ಗೆಲುವು ಸಾಧಿಸಿ ಭಾರೀ ಅಂತರದ ದಿಗ್ವಿಜಯ ಸಾಧಿಸುವುದರೊಂದಿಗೆ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.
ಡಾ. ಮಂಜುನಾಥ್ ಒಳ್ಳೆಯ ವ್ಯಕ್ತಿ ಅಂತ ಜನ ಗೆಲ್ಲಿಸಿದ್ದಾರೆ, ಬಿಜೆಪಿಗೆ ಓಟ್ ಹಾಕಿಲ್ಲ: ಡಿ.ಕೆ.ಶಿವಕುಮಾರ್
ಜಿಲ್ಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಎಲ್ಲಾ ಕ್ಷೇತ್ರಗಳಲ್ಲೂ ನಿರೀಕ್ಷೆಗೆ ಮೀರಿ ಭಾರೀ ಅಂತರದಲ್ಲಿ ಮತಗಳನ್ನು ಗಳಿಸಿಕೊಂಡಿದ್ದಾರೆ. ಮದ್ದೂರು ಕ್ಷೇತ್ರ ಬರೋಬ್ಬರಿ ೫೬,೭೭೮ ಮತಗಳ ಲೀಡ್ ಕೊಟ್ಟು ಪ್ರಥಮ ಸ್ಥಾನದಲ್ಲಿದ್ದರೆ, ಕೆ.ಆರ್.ನಗರ ೬೮೪೭ ಮತಗಳ ಲೀಡ್‌ನೊಂದಿಗೆ ಕೊನೆಯ ಸ್ಥಾನದಲ್ಲಿದೆ. ಆರಂಭದಲ್ಲಿ ಗೆಲುವಿನ ಅಂತರ ಸೃಷ್ಟಿಸಿಕೊಂಡು ಮುನ್ನಡೆದ ಎಚ್.ಡಿ.ಕುಮಾರಸ್ವಾಮಿ ಒಮ್ಮೆಯೂ ಹಿಂತಿರುಗಿ ನೋಡಲೇ ಇಲ್ಲ. ಕುಮಾರಸ್ವಾಮಿ ಪರ ಮತಗಳ ಸುರಿಮಳೆಯಾಯಿತು. ಅಂತಿಮ ಹಂತಕ್ಕೆ ಕುಮಾರಸ್ವಾಮಿ ೮,೫೧,೮೮೧ ಮತಗಳನ್ನು ಗಳಿಸಿದರೆ, ಸ್ಟಾರ್ ಚಂದ್ರು ೫,೬೭,೨೬೧ ಮತಗಳನ್ನು ಗಳಿಸುವುದಕ್ಕೆ ಶಕ್ತರಾಗಿ ಪರಾಭವಗೊಂಡರು.