ನಮ್ಮ ನಾಯಕರ ಓವರ್ ಕಾನ್ಫಿಡೆಂಟ್‌ನಿಂದ ಕಾಂಗ್ರೆಸ್ ಸೋಲು: ಸತೀಶ್ ಜಾರಕಿಹೊಳಿ ಅಸಮಾಧಾನ

By Ravi Janekal  |  First Published Jun 5, 2024, 1:33 PM IST

ಡಬಲ್ ಡಿಜಿಟ್ ರೀಚ್ ಆಗದಿರುವುದಕ್ಕೆ ನಮ್ಮ ನಾಯಕರ ಓವರ್ ಕಾನ್ಫಿಡೆನ್ಸ್ ಕಾರಣ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.


ಬೆಳಗಾವಿ (ಜೂ.5): ಡಬಲ್ ಡಿಜಿಟ್ ರೀಚ್ ಆಗದಿರುವುದಕ್ಕೆ ನಮ್ಮ ನಾಯಕರ ಓವರ್ ಕಾನ್ಫಿಡೆನ್ಸ್ ಕಾರಣ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಗೋಕಾಕ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ಡೈರೆಕ್ಟರ್, ಪ್ರಡ್ಯೂಸರ್ ಫೇಲ್ ಆದ್ರೆ ಈ ರೀತಿಯ ಫಲಿತಾಂಶ ನಿರೀಕ್ಷಿತ. ಚುನಾವಣೆಗೆ ಸಮಯ ಕಡಿಮೆ ಇರುತ್ತೆ. ಆ ಸಮಯದಲ್ಲಿ ಅಲರ್ಟ್ ಆಗಿರಬೇಕು. ಆಗಲೇ ನಾವು ಕೆಲಸ ಮಾಡಬೇಕು. ಇಲ್ಲವಾದರೆ ಚುನಾವಣೆ ಬಂದು ಹೋಗಿರುತ್ತದೆ. ನಮ್ಮ ನಾಯಕರು ಹಲವು ಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದೂ ನಮ್ಮ ಹಿನ್ನೆಡೆಗೆ ಕಾರಣವಾಗಿದೆ ಎಂದರು.

Tap to resize

Latest Videos

ಕಾಂಗ್ರೆಸ್‌ಗೆ ಶಾಪವಾದ ಒಳ ಜಗಳ, ನೇಹಾ ಕೊಲೆ ಪ್ರಕರಣ!

ಹೋದರೂ, ಹೋಗದಿದ್ರೂ ಗೆಲ್ಲುತ್ತೇವೆಂಬ ಓವರ್ ಕಾನ್ಫಿಡೆನ್ಸ್‌ನಿಂದ ಇನ್ನೂ ಕೆಲವು ಕ್ಷೇತ್ರಗಳಿಗೆ ಹೋಗಲಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಪ್ರಚಾರ ಮಾಡಲಿಲ್ಲ. ಹೀಗೆ ಅತಿಯಾದ ವಿಶ್ವಾಸದಿಂದಲೇ ಕಡಿಮೆ ಮತಗಳ ಅಂತರದಿಂದ ಸೋಲಾಗಿದೆ. ಅದಕ್ಕೆ ನಮ್ಮ ನಾಯಕರ ನಿರ್ಲಕ್ಷ್ಯ ಕಾರಣ ಎಂದರು.

click me!