ಈ ಜನರ ಉತ್ಸಾಹ ನೋಡಿದ್ರೆ ಫಲಿತಾಂಶ ಏನು ಅಂತಾ ಗೊತ್ತಾಗ್ತಿದೆ. ಈ ದಿನ ನನಗೆ ಅತ್ಯಂತ ದುಃಖ ತಂದ ದಿನ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ತುಮಕೂರು (ಏ.14): ಈ ಜನರ ಉತ್ಸಾಹ ನೋಡಿದ್ರೆ ಫಲಿತಾಂಶ ಏನು ಅಂತಾ ಗೊತ್ತಾಗ್ತಿದೆ. ಈ ದಿನ ನನಗೆ ಅತ್ಯಂತ ದುಃಖ ತಂದ ದಿನ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಇಲ್ಲಿನ ಕೆಬಿ ಕ್ರಾಸ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ನಮ್ಮೆಲರ ಬದುಕಿಗೆ ಶಕ್ತಿತುಂಬಿದ ಧೀಮಂತ ನಾಯಕ. ಅವರು ಕೊಟ್ಟ ಸಂವಿಧಾನ ಯಾರಿಂದಲೂ ಅಲ್ಲಾಡಿಸೋಕೆ ಆಗಲ್ಲಾ. ಬಿಜೆಪಿ ಸಂವಿದಾನ ಬದಲಿಸ್ತೇನೆ ಅಂದರು. ದೇಶದಲ್ಲಿ ಪ್ರತಿಭಟನೆಗಳು ಆದವು. ಈಗ ಮೋದಿ ಅವರನ್ನ ಕೇಳ್ತೇನೆ,ಅವರನ್ನ ಯಾಕೆ ಉಚ್ಚಾಟನೆ ಮಾಡಿಲ್ಲಾ. ಗಾಂಧಿ ಪುತ್ಥಳಿ ಬಿಟ್ರೆ ದೇಶದ ಉದ್ದಗಲ್ಲಕ್ಕೆ ಇರೋದು ಅಂಬೇಡ್ಕರ್ ಪುತ್ಥಳಿ ಮಾತ್ರ ಎಂದರು.
ಈ ದೇಶಕ್ಕೆ ಸ್ವಾತಂತ್ರ್ಯ ಕಾಂಗ್ರೆಸ್ ಪಕ್ಷದ ಕೊಡುಗೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ದೇಶದ ಜನ ಅಧಿಕಾರಕ್ಕೆ ಬಂದಂತೆ. ನನಗೆ ಅತಿಹೆಚ್ಚು ದುಖ ತಂದ ದಿನ ಇಂದು. ಮಾನ್ಯ ಕುಮಾರಸ್ವಾಮಿ,ದೇಶದ ಪ್ರಧಾನಿಯಾಗಿದ್ದ ದೇವೆಗೌಡರ ಮಗ. ಈ ಭೂಮಿಲಿ ದೊಡ್ಡ ಸ್ಥಾನ ಹೊತ್ತ ದೊಡ್ಡ ಕುಟುಂಬ. ಎಂಎಲ್ಎ,ಎಂಪಿಗಳು ಅವರ ಮನೆಯಲ್ಲಿದ್ದಾರೆ. ಜನರ ಬದುಕಿಗೆ ಶಕ್ತಿ ಕೊಡಬೇಕು ಅಂತಾ ಜನ್ರಿಗೆ ಐದು ಗ್ಯಾರಂಟಿ ಕೊಟ್ವಿ. ಧೀಮಂತ ಮಹಿಳೆ ಇಂದಿರಾ ಗಾಂಧಿ ಸತ್ತಾಗ ಮನಸ್ಸಿಗೆ ನೋವಾಯ್ತು. ಅದು ಆದ್ಮೆಲೇ ಇಂದು ಮನಸ್ಸಿಗೆ ದುಖಃವಾಗ್ತಿದೆ. ನಿನ್ನೆ ಮಧ್ಯ ರಾತ್ರಿ ಟಿವಿಲಿ ನೊಡಿದಾಗ.
undefined
ಗ್ಯಾರಂಟಿಯಿಂದ ತಾಯಂದಿರು ದಾರಿ ತಪ್ಪಿದ್ದಾರೆ ಅಂತಾ ಮಾತಾಡಿದ್ದಾರೆ. ಅದನ್ನ ಸಹಿಸೋಕೆ ಆಗಲ್ಲಾ. ಅವರನ್ನ ಕ್ಷಮೆ ಕೇಳು ಅಂತಾ ನಾನು ಹೇಳಲ್ಲಾ. ಇದು ನಿಮ್ಮ ಜವಾಬ್ದಾರಿ,ಈಗಾಗಲೆ ರಾಜ್ಯದ ಹೆಣ್ಣುಮಕ್ಕಳು ಪ್ರತಿಭಟನೆ ಶುರು ಮಾಡಿದ್ದಾರೆ. ದೇಶದೆಲ್ಲೆಡೆ ಹೊತ್ತಿಕೊಂಡು ಉರಿತಿದೆ. ಪ್ರಧಾನಿ ಮೋದಿ,ಸೃತಿ ಇರಾನಿ,ಶೋಭಕ್ಕೆ ಎಲ್ಲರನ್ನ ಕೇಳ್ತಿದ್ದೇನೆ. ಮೊನ್ನೆ ಗ್ಯಾರಂಟಿಯಿಂದ ಬಂದ ಹಣದಿಂದ ಫ್ರಿಡ್ಜ್ ತೆಗೆದುಕೊಂಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಸತ್ಯಕ್ಕು ಸುಳ್ಳಿಗೂ ನಡೆಯುತ್ತಿರುವ ಯುದ್ದ ಇದು. ಕಪ್ಪುಹಣ ತಂದು, ನಿಮ್ಮಅಕೌಂಟ್ ಗೆ 15 ಲಕ್ಷ ಹಾಕ್ತಿನಿ ಅಂದಿದ್ರು. ಹಣ ಬಂತಾ..? ಬರಲಿಲ್ಲಾ.
ತೆರಿಗೆ, ಬರ ಪರಿಹಾರ ವಿಚಾರದಲ್ಲಿ ಬಿಜೆಪಿಯಿಂದ ರಾಜ್ಯಕ್ಕೆ ಅನ್ಯಾಯ: ಸಚಿವ ಬೋಸರಾಜು
ರೈತರ ಆದಾಯ ಡಬಲ್ ಮಾಡ್ತೀನಿ ಅಂದ್ರು,ಆಯ್ತಾ..? ಯುವಕರಿಗೆ ಯಾರಿಗೂ ಉದ್ಯೋಗ ಸಿಗಲಿಲ್ಲಾ..ಪಕೋಡ ಮಾರಿ ಅಂದ್ರು. ಐದು ಗ್ಯಾರಂಟಿಗೆ 39 ಸಾವಿರ ಕೋಟಿ ಆಗಿದೆ. ನನ್ನ ತಾಯಂದಿರು,ಅಕ್ಕಂದಿರು, ಅವರ ತಾಯಿ ಮನೆಗೆ ಹೋಗೋಕೆ,ಧರ್ಮಸ್ಥಳಕ್ಕೆ ಹೋಗೋಕೆ,ಕುಕ್ಕೆಗೆ ಹೋಗೋಕೆ. ಬಸ್ ಹಿಡಿದು ಹೋದ್ರೆ,ದಾರಿತಪ್ಪಿದ್ದಾರೆ ಅಂತ್ಯ ಕುಮಾರಣ್ಣ. ನೀನು ಒಂದು ತಾಯಿ ಹೊಟ್ಟೆಯಲ್ಲಿ ಹುಟ್ಟಿದ್ದಿಯಾ..ಆ ತಾಯಿಯ ನೋವು ಅರ್ಥ ಆಗುತ್ತಾ. ಇವತ್ತು ಇದನ್ನ ಯಾರೂ ಕ್ಷಮಿಸೋಕೆ ಆಗೋದಿಲ್ಲಾ. ಕಮಲ ಕೆರೆಯಲ್ಲಿದ್ದರೇ ಚಂದ,ತೆನೆ ಹೊಲದಲ್ಲಿದ್ದರೇ ಚಂದ. ದಾನ ಮಾಡುವ ಕೈ ಅಧಿಕಾರದಲ್ಲಿದ್ದರೇ ಚಂದ ಎಂದು ಹೇಳಿದರು.