Bengaluru: ಎರಡು ಕಾರಲ್ಲಿ ಚೀಲಗಳಲ್ಲಿ ಸಾಗಿಸುತ್ತಿದ್ದ ಕೋಟಿ ಕೋಟಿ ಹಣ ವಶಕ್ಕೆ!

By Suvarna NewsFirst Published Apr 13, 2024, 12:27 PM IST
Highlights

ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಚುನಾವಣಾ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ಕೋಟಿ ಕೋಟಿ ಹಣ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು (ಏ.13): ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಚುನಾವಣಾ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ಭರ್ಜರಿ ಹಣ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಜಯನಗರ 4th ಬ್ಲಾಕ್ ನಲ್ಲಿ ಹಣ ಸಾಗಿಸುತ್ತಿದ್ದ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಹಣ ತುಂಬಿದ್ದ ಕಾರುಗಳನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದು, ಕೋಟ್ಯಾಂತರ ರೂಪಾಯಿ ಕ್ಯಾಶ್ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ  ವಶಕ್ಕೆ ಪಡೆದ ಹಣವನ್ನು ಅಧಿಕಾರಿಗಳು ಎಣಿಸುತ್ತಿದ್ದಾರೆ.

Rameshwaram Cafe Blast Case: ಬೆಂಗಳೂರು to ಕೊಲ್ಕತ್ತಾ, ಉಗ್ರರು ಸಿಕ್ಕಿಬಿದ್ದಿದ್ದು ಹೇಗೆ? ಇಂಚಿಂಚು ಮಾಹಿತಿ

ಜಯನಗರದ ನಾಲ್ಕನೇ ಬಡಾವಣೆಯಲ್ಲಿ ಸಿಕ್ಕಿರುವ ಕೋಟಿ ಕೋಟಿ ಹಣ ಪ್ರತಿಷ್ಠಿತ ಪಕ್ಷದ್ದು ಎನ್ನಲಾಗುತ್ತಿದೆ. ಚುನಾವಣೆಗೆಂದು ಅಕ್ರಮವಾಗಿ ಸಾಗಿಸುತ್ತಿದ್ದ ಹಣವನ್ನು ಎರಡು ವಾಹನದಲ್ಲಿ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ. ವಿಚಾರಿಸಲು ಯತ್ನಿಸಿದಾಗ ವಾಹನ ಮಾಲೀಕರು ಬೇರೆ Fortuner (ಫಾರ್ಚೂನರ್‌) ಕಾರಿನಲ್ಲಿ ತಪ್ಪಿಸಿಕೊಂಡಿದ್ದಾರೆ. ಇದು ಪ್ರಭಾವಿ ನಾಯಕರೊಬ್ಬರ ಬೆಂಬಲಿಗರಿಗೆ ಸೇರಿದ ವಾಹನಗಳು ಎನ್ನಲಾಗುತ್ತಿದೆ.  ವಾಹನದಲ್ಲಿ ಕೋಟ್ಯಂತರ ರೂಪಾಯಿ ಹಣ ಇರುವುದು ಪತ್ತೆಯಾಗಿದೆ ವಾಹನ ಮಾಲೀಕರು ಸ್ಥಳದಿಂದ ಪರಾರಿಯಾಗಿದ್ದಾರೆ.

ಇನ್ನು ಹಣವಿದ್ದ ಮೂರು ಬ್ಯಾಗ್ ನ್ನು ಜಯನಗರ ಪೊಲೀಸ್ ಠಾಣೆಯಲ್ಲಿರಿಸಲಾಗಿದ್ದು, IT ಅಧಿಕಾರಿಗಳು ಪೊಲೀಸ್ ಠಾಣೆಗೆ ಹಣ ಎಣಿಸುವ ಮಷಿನ್ ತಂದಿದ್ದಾರೆ. 3 ಬ್ಯಾಗ್ ನಲ್ಲಿ ಕೋಟ್ಯಂತರ ರೂಪಾಯಿ ಹಣ ಇರುವ ಹಿನ್ನೆಲೆ ಮಷಿನ್ ನಲ್ಲಿ ಹಣ ಎಣಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Rameshwaram Cafe Blast case: ಹಿಂದು ಹೆಸರಿನಲ್ಲಿ ರೂಮ್‌ ಬುಕ್‌ ಮಾಡಿದ್ದ ಮುಸಾವೀರ್, ಮತೀನ್‌ ತಾಹ!

ಇನ್ನು ಹಣವಿದ್ದ ಮರ್ಸಿಡೀಸ್ ಬೆಂನ್ಜ್ ಹಾಗೂ ಪೋಲೋ ಕಾರನ್ನ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಕಾರಿನ ನಂಬರ್ ಆಧರಿಸಿ ಕಾರಿನ ಮಾಲೀಕರಿಗೆ ನೋಟೀಸ್ ನೀಡಲಿದ್ದಾರೆ. ಬಳಿಕ ಹಣದ ಬಗ್ಗೆ ಮಾಹಿತಿ ಕಲೆ ಹಾಕಲಿದ್ದು, ಸದ್ಯ ಸಿಕ್ಕಿರುವ ಹಣಕ್ಕೆ  ಚುನಾವಣಾಧಿಕಾರಿಗಳು ದಾಖಲೆ ಕೇಳಲಿದ್ದಾರೆ. ಸರಿಯಾದ ದಾಖಲೆ ಇಲ್ಲದಿದ್ದರೆ ಹಣವನ್ನ ಸೀಜ್ ಮಾಡಲಿದ್ದಾರೆ.

ಒಟ್ಟು ಮೂರು ಕಾರಿನಲ್ಲಿ ಬಂದಿದ್ರು ಅನ್ನುವ ಬಗ್ಗೆ ಮಾಹಿತಿ ಇದೆ. ಫಾರ್ಚೂನರ್, ವೋಕ್ಸ್ ವ್ಯಾಗನ್, ಮರ್ಸಿಡೀಸ್ ಬೆನ್ಜ್ ಕಾರುಗಳಾಗಿವೆ. ಫಾರ್ಚೂನರ್ ಕಾರಿನಲ್ಲಿದ್ದವರು ಸ್ಥಳದಿಂದ ಕಾರು ಸಮೇತ ಹೋಗಿದ್ದಾರೆ. ಇನ್ನೊಂದು ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿ.

ಇನ್ನು ಜಯನಗರ ಪೊಲೀಸ್ ಠಾಣೆಗೆ ಆಗಮಿಸಿದ ಕಾಂಗ್ರೆಸ್ ನಿಯೋಗ ಆಗಮಿಸಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ , ಮಾಜಿ ಕಾರ್ಪೊರೇಟರ್ ನಾಗರಾಜ್ ಆಗಮಿಸಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ  ತಿಳಿಸಲು ಮುಖಂಡರು  ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಚುನಾವಣಾ ಅಧಿಕಾರಿ ನಿಖಿತ ಈ ಬಗ್ಗೆ ಮಾಹಿತಿ ನೀಡಿ, ದುಡ್ಡು ಸಾಗಿಸಲಾಗುತ್ತಿದೆ ಅಂತ ಮಾಹಿತಿ ಬಂತು. ನಾನು ಇಲ್ಲಿಯೇ ರೌಂಡ್ಸ್ ನಲ್ಲಿ ಇದ್ದೆ. ನಾನು ಒಬ್ಬಳೆ ಇದ್ದೆ. ಬ್ಯಾಗ್ ತೆಗೆದುಕೊಂಡು ಇನ್ನೊಂದು ಕಾರ್ ಗೆ ಹಾಕುತ್ತಿದ್ರು. ಬ್ಯಾಗ್ ತೋರಿಸಿ ಎಂದಾಗ ಆದ್ರಲ್ಲಿ ಮಾವಿನ ಹಣ್ಣಿದೆ ಅಂತ ಹೇಳಿದ್ರು. ತೋರಿಸಿ ಎಂದಾಗ ಅಲ್ಲಿಂದ ಫಾರ್ಚುನರ್ ಕಾರಿನಲ್ಲಿ ಹೋರಟು ಹೋದ್ರು. ನಂತ್ರ ಸ್ಥಳಕ್ಕೆ ಸರ್ ಮತ್ತು ಅಧಿಕಾರಿಗಳು ಬಂದು ಹಣವನ್ನು ಸೀಜ್ ಮಾಡಿದರು ಎಂದು ಮಾಹಿತಿ ನೀಡಿದರು.

click me!