'ಡಿಕೆಶಿ ಬ್ರದರ್ಸ್‌ ಮಮತಾ ಸಿಸ್ಟರ್‌ ಊರಲ್ಲಿ ಸಿಕ್ಕಿಬಿದ್ದಿದ್ದಾರೆ..' ಆರ್‌.ಅಶೋಕ್‌ ಟೀಕೆ

By Santosh NaikFirst Published Apr 13, 2024, 12:26 PM IST
Highlights

ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟಕ ಪ್ರಕರಣದಲ್ಲಿ ವಿಪಕ್ಷ ನಾಯಕ ಆರ್‌.ಅಶೋಕ್‌ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.

ಬೆಂಗಳೂರು (ಏ.13): ಮಾರ್ಚ್‌ ಆರಂಭದಲ್ಲಿ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಮಾಸ್ಟರ್‌ ಮೈಂಡ್‌ ಅಬ್ದುಲ್‌ ಮತೀನ್‌ ತಾಹ ಹಾಗೂ ಬಾಂಬ್‌ ಇರಿಸಿದ್ದ ಮುಸಾವಿರ್‌ ಹುಸೇನ್‌ನನ್ನು ಎನ್‌ಐಎ ಬಂಧಿಸಿದೆ. ಇಬ್ಬರನ್ನೂ ಕೋರ್ಟ್‌ 10 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಲಾಗಿದೆ. ಈ ಕುರಿತಾಗಿ ಮಾತನಾಡಿರುವ ವಿಪಕ್ಷ ನಾಯಕ ಆರ್‌ ಅಶೋಕ್‌, 'ಬಾಂಬ್ ಬ್ಲಾಸ್ಟ್ ಆದಾಗ ಇದು ಹೊಟೇಲ್ ನಡುವಿನ ವ್ಯಾಜ್ಯ ಅಂತಾ ಡಿಕೆ ಶಿವಕುಮಾರ್‌ ಹೇಳಿದ್ದರು. ಬೆಂಗಳೂರು ಹೆಡ್ ಡಿಕೆಶಿ ಹೀಗೆ ಹೇಳಿದ ಮೇಲೆ ಪೊಲೀಸ್ ಕೂಡ ಅದೇ ಹಾದಿಯಲ್ಲಿ ‌ತನಿಖೆ ಆರಂಭ ಮಾಡಿದ್ದರು. ಡಿಕೆಶಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗಲೂ ಬ್ರದರ್ಸ್‌ ಅಂದಿದ್ದರು. ಆದರೆ, ಎನ್‌ಐಎ ತನಿಖೆ ಶುರು ಮಾಡಿದ ಮೇಲೆ ಅಸಲಿ ವಿಚಾರ ಗೊತ್ತಾಗಿತ್ತು. ಈಗ ಅವರನ್ನು ಹಿಡಿಯಲಾಗಿದೆ. ಇವರ ಸಿಸ್ಟರ್ ಮಮತಾ ಬ್ಯಾನರ್ಜಿ ಅವರ ರಾಜ್ಯದಲ್ಲಿ ಸಿಕ್ಕಿಬಿದ್ದಿದ್ದಾರೆ. ಇಲ್ಲಿ ಬ್ರದರ್ (ಡಿಕೆಶಿ) ಆಯ್ತ. ಅಲ್ಲಿ ಸಿಸ್ಟರ್ (ಮಮತಾ ಬ್ಯಾನರ್ಜಿ). ಎಲ್ಲಿ ಸೇಫ್ ಇದೆ ಆ ರಾಜ್ಯಕ್ಕೆ ಹೋಗುತ್ತಾರೆ. ಈಗ ನೋಡಿ ಮಮತಾ ಬ್ಯಾನರ್ಜಿಯವರ ರಾಜ್ಯದಲ್ಲಿ ಉಗ್ರರು ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ‌ಕಾರ್ಯಕರ್ತ ಸಾಯಿ ಪ್ರಸಾದ್ ತನಿಖೆಗೆ ಸಹಕಾರ ನೀಡಿ ಮಾಹಿತಿ ನೀಡಿದ್ದರು. ಆದರೆ ಅವರ ಬಗ್ಗೆ ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸಿದ್ದರು. ಸಾಯಿ ಪ್ರಸಾದ್ ನೀಡಿದ ಮಾಹಿತಿ ಮೇರೆಗೆ ಭಯೋತ್ಪಾದಕರ ಹಿಡಿಯೋಕೆ ಆಗಿದೆ. ಅವರು ಕೂಡ ಸಾಕ್ಷಿ ಆಗಿದ್ದಾರೆ. ಸಾಯಿಪ್ರಸಾದ್ ಹೆಸರು ಕಾಂಗ್ರೆಸ್ ಹೇಳಬಾರದಿತ್ತು ಅವರ ಜೀವಕ್ಕೆ ಈಗ ಅಪಾಯ ಇದೆ. ಅವರು ಸಾಕ್ಷಿಯಾಗಿದ್ದವರು. ಉಗ್ರರಿಂದ ಈಗ ಅವರಿಗೆ ತೊಂದರೆ ಆದಲ್ಲಿ ಕಾಂಗ್ರೆಸ್‌ ಏನು ಪರಿಹಾರ ನೀಡುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

ವಿಧಾನಸೌಧಧಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದಿದ್ದರು. ಅವರನ್ನು ಬಂಧಿಸಲು ಒಂದು ವಾರ ತೆಗೆದುಕೊಂಡಿದ್ದರು. ಅವರು ವಿಧಾನಸೌಧಧಲ್ಲಿ ಕೂಗೇ ಇಲ್ಲ ಅಂದ್ರು. ಪ್ರಿಯಾಂಕಾ ಖರ್ಗೆ ನಮ್ಮನ್ನೇ ಕಾಮಾಲೆ ಕಣ್ಣು ಅಂದ್ರು. ಬಿಜೆಪಿಯವರದ್ದೇ ಎಫ್ಎಸ್ ಎಲ್ ರಿಪೋರ್ಟ್ ಅಂದ್ರು. ಇವಾಗ ಪೊಲೀಸ್ ರಿಪೋರ್ಟ್‌ನಲ್ಲಿ ನಿಜ‌ ಅಂತಾ ಗೊತ್ತಾಯ್ತಲ್ಲ. ಇವಾಗ ಯಾರು ಕಾಮಾಲೆ ಕಣ್ಣಿನವರು..? ಸಂಪತ್ ರಾಜ್ ಜೈಲಿಗೆ ಹೋಗಿ ಬೇಲ್ ಮೇಲೆ ಇದ್ದಾರೆ. ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದವನಿಗೆ ಬೋರ್ಡ್ ಚೇರ್ಮನ್‌ ಹುದ್ದೆ ನೀಡಿದ್ದಾರೆ ಎಂದು ಟೀಕೆ ಮಾಡಿದರು.
ಕಾಂಗ್ರೆಸ್‌ನಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಟ್ಲರ್ ಎಂದು ಕರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣಾ ಸಂದರ್ಭದಲ್ಲಿ ವ್ಯೆಯಕ್ತಿಕ ನಿಂದನೆ ಅಪರಾಧ. ಅದರಲ್ಲೂ ಹಿಟ್ಲರ್ ಹೆಸರೇಳಿ  ಬಿಂಬಿಸೋದು ಅಪರಾಧ. ಮೋದಿಯವರನ್ನು ಹಿಟ್ಲರ್ ಅನ್ನೋಕೆ ಏನು ನೈತಿಕತೆ ಇದೆ. ಈ ದೇಶಕ್ಕೆ ರಿಯಲ್ ಹಿಟ್ಲರ್ ಅಂದರೆ ಅದು ಕಾಂಗ್ರೆಸ್. ನಾವು ಇವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದು ಹೇಳಿದ್ದಾರೆ.

Rameshwaram Cafe Blast case: ಹಿಂದು ಹೆಸರಿನಲ್ಲಿ ರೂಮ್‌ ಬುಕ್‌ ಮಾಡಿದ್ದ ಮುಸಾವೀರ್, ಮತೀನ್‌ ತಾಹ!

ಚುನಾವಣೆ ‌ಬಳಿಕ ಜೆಡಿಎಸ್ ಬಿಜೆಪಿ ಒಳಗೆ ವಿಲೀನ ಆಗಲಿದೆ ಎನ್ನುವ ಡಿಕೆಶಿ ಹೇಳಿಕೆಗೆ ಉತ್ತರ ನೀಡಿದ ಅಶೋಕ್‌, 'ಈ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಇರಲ್ಲ. ಡಿಕೆ ಶಿವಕುಮಾರ್ ಯಾವುದಾದರೂ ಪಾರ್ಟಿಗೆ ಟವೆಲ್ ಹಾಕಬೇಕು. ನಮ್ಮಲ್ಲಿ ಅಪ್ಲಿಕೇಶನ್ ಹಾಕಿದ್ರೆ ನೋಡೊಣ. ಅವರ ಅರ್ಹತೆ , ಅಪ್ಲಿಕೇಶನ್ ಬಂದ ಮೇಲೆ ಚೆಕ್ ಮಾಡೋಣ. ಮೊದಲು ಅವರು ಅಪ್ಲಿಕೇಶನ್ ಹಾಕಲಿ ನೋಡೋಣ. ಆಮೇಲೆ ಅವರನ್ನು ಸೇರಿಸಿಕೊಳ್ಳೋದೋ ಬೇಡವೋ ನೋಡೋಣ' ಎಂದರು.

Rameshwaram Cafe Blast Case: ಬೆಂಗಳೂರು to ಕೊಲ್ಕತ್ತಾ, ಉಗ್ರರು ಸಿಕ್ಕಿಬಿದ್ದಿದ್ದು ಹೇಗೆ? ಇಂಚಿಂಚು ಮಾಹಿತಿ

click me!