ಈ ಚುನಾವಣೆಯಲ್ಲಿ ಬಿಜೆಪಿ 400 ಸೀಟು ಗೆಲ್ಲಬೇಕೆಂದು ಹೊರಟಿದೆ. ಅದಕ್ಕೆ ಕಾರಣ ಏನು ಅನ್ನೋದು ಸಂಸದ ಅನಂತಕುಮಾರ ಹೆಗ್ಡೆ ಬಹಿರಂಗ ಪಡಿಸಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.
ಕೊಡಗು (ಮಾ.31): ಈ ಚುನಾವಣೆಯಲ್ಲಿ ಬಿಜೆಪಿ 400 ಸೀಟು ಗೆಲ್ಲಬೇಕೆಂದು ಹೊರಟಿದೆ. ಅದಕ್ಕೆ ಕಾರಣ ಏನು ಅನ್ನೋದು ಸಂಸದ ಅನಂತಕುಮಾರ ಹೆಗ್ಡೆ ಬಹಿರಂಗ ಪಡಿಸಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.
ಇಂದು ವಿರಾಜಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸೀಟು ಗೆದ್ದು ದೇಶದ ಸಂವಿಧಾನ ಬದಲಾಯಿಸುವುದು ಗುರಿ ಇಟ್ಟುಕೊಂಡಿದೆ. ಇದು ಆರೆಸ್ಸೆಸ್ ಸಿದ್ಧಾಂತ. ಬಿಜೆಪಿ ಏನಿದ್ದರೂ ಅದರ ಮುಖವಾಡ ಅಷ್ಟೇ. ಆರೆಸ್ಸೆಸ್ 1925 ರಿಂದಲೂ ಸಮಾನತೆ ವಿರೋಧಿ ಕೆಲಸ ಮಾಡುತ್ತಿದೆ. ನಮ್ಮ ದೇಶದಲ್ಲಿ ಸಿಗುತ್ತಿರುವ ಸಮಾನತೆಯನ್ನು ತೆಗೆದು ಹಾಕಬೇಕು ಎನ್ನುವುದು ಆರೆಸ್ಸೆಸ್ ಸಿದ್ಧಾಂತವಾಗಿದೆ ಎಂದರು.
ಸಿದ್ದರಾಮಯ್ಯ ಏನು ಟ್ವೀಟ್ ಮಾಡಿದ್ದಾರೋ ಅದಕ್ಕೆ ಸದ್ಯದಲ್ಲೇ ಉತ್ತರ ಕೊಡ್ತೇನೆ: ಎಚ್‌ಡಿ ದೇವೇಗೌಡ ಗರಂ
ಸಂವಿಧಾನ ಬದಲಾವಣೆ ಮಾಡಿ ಹಿಂದೆ ಸನಾತನ ಧರ್ಮದಲ್ಲಿ ಇದ್ದ ಜಾತಿ ವ್ಯವಸ್ಥೆ ಪುನಃ ಸ್ಥಾಪಿಸಬೇಕು. ಪ್ರಬಲವಾದ ಜಾತಿಗಳು ಮಾತ್ರ ಆಡಳಿತ ನಡೆಸಬೇಕು, ಸಂಪತ್ತು ಅನುಭವಿಸಬೇಕು, ಮಿಕ್ಕವರೆಲ್ಲ ಅವರ ಕೈ ಕೆಳಗೆ ಇರಬೇಕು ಎನ್ನುವುದು ಆರೆಸ್ಸೆಸ್ ಸಿದ್ಧಾಂತವಾಗಿದೆ. ಆದರೆ ಅದಕ್ಕೆ ಅಡ್ಡಿಯಾಗಿರುವುದು ಸಂವಿಧಾನ. ಹೀಗಾಗಿ ಈ ಬಾರಿ 400 ಸೀಟು ಗೆಲ್ಲಲು ಇಷ್ಟೆಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಈ ಬಾರಿ ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದರೆ ಮೊದಲು ಅದೇ ಆಗಿರುತ್ತದೆ. ಹಾಗೇನಾದರೂ ಆದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹೋಗಿ ಸರ್ವಾಧಿಕಾರ ಬರುತ್ತದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಬೆಂಬಲಿಸುವಂತೆ ಕರೆ ನೀಡಿದರು.
ಸಂವಿಧಾನ ಬದಲಾವಣೆ ಹೇಳಿಕೆ; ಅನಂತಕುಮಾರ ಹೆಗ್ಡೆಗೆ ಟಿಕೆಟ್ ನೀಡಬೇಡಿ; ಛಲವಾದಿ ನಾರಾಯಣಸ್ವಾಮಿ ಆಗ್ರಹ