ಕಳೆದ ಹತ್ತು ದಿನಗಳಿಂದ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ.8 ವಿಧಾನಸಭೆ ಕ್ಷೇತ್ರಗಳಲ್ಲಿ ಅಭೂತಪೂರ್ವ ರೆಸ್ಪಾನ್ಸ್ ಸಿಕ್ತಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸರಣಿ ಸಭೆಗಳನ್ನ ಮಾಡ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ರಾಮನಗರ (ಮಾ.23): ಕಳೆದ ಹತ್ತು ದಿನಗಳಿಂದ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ.8 ವಿಧಾನಸಭೆ ಕ್ಷೇತ್ರಗಳಲ್ಲಿ ಅಭೂತಪೂರ್ವ ರೆಸ್ಪಾನ್ಸ್ ಸಿಕ್ತಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸರಣಿ ಸಭೆಗಳನ್ನ ಮಾಡ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಹೇಳಿದರು. ನಂತರ ಮಾತನಾಡಿದ ಅವರು, ನಿನ್ನೆ ಬೆಂಗಳೂರು ದಕ್ಷಿಣ, ಆರ್ ಆರ್ ನಗರ, ಕುಣಿಗಲ್ ಹೋಗಿದ್ದೆ. ಬಹುಮುಖ್ಯವಾಗಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಎರಡೂ ಹೃದಯ ಒಟ್ಟಾಗಿದೆ. ಇದನ್ನೆಲ್ಲ ನೋಡ್ತಿದ್ರೆ ನಮ್ಮ ಗೆಲುವು 100% ಖಾತ್ರಿ ಎಂದರು.
ಧರ್ಮ ಮತ್ತು ಅಧರ್ಮ ನಡುವೆ ಈ ಚುನಾವಣೆ ಎಂಬ ವಿಚಾರವಾಗಿ ಅದರ ಬಗ್ಗೆ ನಾನು ವ್ಯಾಖ್ಯಾನ ಮಾಡೋದಕ್ಕೆ ಹೋಗೋದಿಲ್ಲ. ಪ್ರತಿಯೊಂದು ಚುನಾವಣೆ ಆರೋಗ್ಯಕರ ಸ್ಫರ್ಧೆಯಾಗಿರಬೇಕು. ಮತದಾರರನ್ನ ಯಾವುದೇ ರೀತಿಯ ಅಡ್ಡ ದಾರಿಗೆ ಎಳೆಯಬಾರದು ಅಷ್ಟೇ. ಕುಟುಂಬ ರಾಜಕಾರಣ ಆಗಿ ಇದೀಗ ಅಳಿಯನನ್ನ ಕಣಕ್ಕೆ ಇಳಿಸಿದ್ದಾರೆ ಎಂಬ ಸಂಸದ ಡಿ.ಕೆ ಸುರೇಶ್ ಹೇಳಿಕೆ ವಿಚಾರವಾಗಿ ಸ್ಥಳೀಯರು ಯಾರೂ ಇರಲಿಲ್ವಾ ಎಂಬ ಹೇಳಿಕೆಗೆ ಟಾಂಗ್ ನೀಡಿದರು. ಕುಟುಂಬ ರಾಜಕಾರಣ ಅನ್ನೋದು ರಾಜ್ಯ, ದೇಶದಲ್ಲಿ ಅಪ್ರಸ್ತುತ. ಈಗ ಅಭ್ಯರ್ಥಿಗಳ ಲಿಸ್ಟ್ ನೋಡಿದ್ರೆ ಗೊತ್ತಾಗುತ್ತೆ ಎಂದು ತಿಳಿಸಿದರು.
ಮಗ, ಮಗಳು ಇದ್ದಾರೆ. ಸೊಸೆ ಅಣ್ಣ ಎಲ್ಲರೂ ಇದ್ದಾರೆ ಅದೆಲ್ಲವೂ ಅಪ್ರಸ್ತುತ. ಪಾರದರ್ಶಕ ಚುನಾವಣೆಗೆ ಪ್ಯಾರ ಮಿಲಿಟರಿ ಬೇಕು ಎಂಬ ಮಾಜಿ ಸಚಿವ ಮುನಿರತ್ನ ಹೇಳಿಕೆ ವಿಚಾರವಾಗಿ ಅದರ ಬಗ್ಗೆ ನಮ್ಮ ವರಿಷ್ಟರು ಎಲ್ಲಾ ಗಮನಹರಿಸಿದ್ದಾರೆ. ಮುಂದೆ ಏನಾಗುತ್ತೆ ಅನ್ನೋದನ್ನ ನೋಡೋಣ. ಎಂದರಲ್ಲದೇ ತಮ್ಮನ ಗೆಲುವಿಗಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರಚಾರ ಎಂಟ್ರಿ ವಿಚಾರವಾಗಿ ಯಾವುದೇ ವ್ಯಕ್ತಿ ಅಥವಾ ಪಕ್ಷ ಆಗಲಿ ಅವರ ಅಭ್ಯರ್ಥಿ ಗೆಲ್ಲಬೇಕು ಅಂತ ಪ್ರಚಾರ ಮಾಡ್ತಾರೆ. ಅವರು ಗೆಲ್ಲಬೇಕು ಅಂತಲೇ ಪ್ರಚಾರ ಮಾಡ್ತಾರೆ ಅದು ಅವರಿಗೆ ಬಿಟ್ಟಿದ್ದು ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ, ಸರ್ಕಾರಕ್ಕೇ ಗ್ಯಾರಂಟಿಯೂ ಇಲ್ಲ: ಪ್ರಲ್ಹಾದ್ ಜೋಶಿ
ನಾಮಪತ್ರ ಸಲ್ಲಿಕೆಗೆ ಎರಡು ದಿನಾಂಕ ನಿಗಧಿಯಾಗಿದೆ ಫೈನಲ್ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಪ್ರಚಾರ ಬರುವ ಸಾಧ್ಯತೆಯಿದೆ. ಮೋದಿಯವರು, ಅಮಿತ್ ಶಾ ಪ್ರಚಾರ ಬಗ್ಗೆ ಸಭೆಯಾಗುತ್ತೆ. ನಿಜವಾದ ಪ್ರಚಾರದ ಗಣ್ಯ ಅತಿಥಿಗಳು ಅಂದ್ರೆ ಕಾರ್ಯಕರ್ತರು. ಚುನಾವಣೆಯಲ್ಲಿ ಗೆದ್ದರೆ ಕೇಂದ್ರ ಆರೋಗ್ಯ ಮಂತ್ರಿ ಆಗ್ತಾರೆ ಎಂಬ ವಿಚಾರವಾಗಿ ಆ ರೀತಿಯ ಯವುದೇ ಷರತ್ತುಗಳನ್ನ ಹಾಕಿಲ್ಲ. ಮೊದಲು ಸಂಸದರಾಗಬೇಕು, ಪ್ರಚಂಡ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಬೇಕು ಆಮೇಲೆ ನೋಡೋಣ ಎಂದು ಸಿ.ಎನ್ ಮಂಜುನಾಥ್ ಹೇಳಿದರು.