ದೇಶ ಮತ್ತು ರಾಜ್ಯದಲ್ಲಿ ಬದಲಾವಣೆಯ ಹೊಸತನದ ಗಾಳಿ ಬೀಸಬೇಕಾದರೆ ಯುವಕರು ರಾಜಕಾರಣಕ್ಕೆ ಬರಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಆನಂದಪುರ (ಮಾ.22): ದೇಶ ಮತ್ತು ರಾಜ್ಯದಲ್ಲಿ ಬದಲಾವಣೆಯ ಹೊಸತನದ ಗಾಳಿ ಬೀಸಬೇಕಾದರೆ ಯುವಕರು ರಾಜಕಾರಣಕ್ಕೆ ಬರಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಆನಂದಪುರದ ಕಡ್ಲೆ ಹಂಕ್ಲು ಮಾರಿಕಾಂಬ ದೇವಾಲಯದ ಆವರಣದಲ್ಲಿ ನಡೆದ ಡಾ.ಕಾಗೋಡು ತಿಮ್ಮಪ್ಪ ಅವರಿಗೆ ನಡೆದ ನಾಗರಿಕ ಸನ್ಮಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಕಾರಣಿಗಳು ಬದಲಾಗಬೇಕಾದರೆ ರಾಜ್ಯದ ಜನತೆ ಮೊದಲು ಬದಲಾಗಬೇಕು. ಭೂಮಿಯ ಮೇಲೆ ಯಾರೂ ಶಾಶ್ವತವಲ್ಲ. ಇರುವಂತಹ ಅಲ್ಪ ಕಾಲದಲ್ಲಿ ಸಮಾಜದ ಒಳಿತಿಗಾಗಿ ಶ್ರಮಿಸಬೇಕು.
ಯಾವ ಆಧಾರದ ಮೇಲೆ ವ್ಯಕ್ತಿತ್ವವನ್ನು ಹೇಗೆ ಕಂಡುಹಿಡಿಯಬೇಕು ಎಂದು ಸಮಾಜ ಬುದ್ಧಿವಂತಿಕೆ ವಹಿಸದೆ ಇದ್ದರೆ ದೇಶದ ಪ್ರಜಾಪ್ರಭುತ್ವ ಹಳ್ಳ ಹಿಡಿದು ಹೋಗುತ್ತದೆ ಎಂದರು. ದೇಶ ಮತ್ತು ರಾಜ್ಯದಲ್ಲಿ ಬದಲಾವಣೆಯಾಗಿ ಹೊಸತನ ಬರಬೇಕಾದರೆ ಯುವ ಜನಾಂಗ ರಾಜಕಾರಣಕ್ಕೆ ಬರಬೇಕು. ಅಲ್ಲದೆ ಕಾಗೋಡು ತಿಮ್ಮಪ್ಪ ಅವರ ಆದರ್ಶ ತತ್ವಗಳನ್ನು ತಮ್ಮ ರಾಜಕಾರಣದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ಡಾ. ಕಾಗೋಡು ತಿಮ್ಮಪ್ಪನವರ ಆತ್ಮ ಚರಿತ್ರೆಯ ಪುಸ್ತಕವನ್ನು ಮುದ್ರಿಸಿ ಸೆಪ್ಟೆಂಬರ್ ತಿಂಗಳ ಅವರ ಜನ್ಮ ದಿನದಂದು ವಿಧಾನಸೌಧದಲ್ಲಿ ಬಿಡುಗಡೆ ಮಾಡುತ್ತೇನೆ ಎಂದರು ತಿಳಿಸಿದರು.
ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಶಿವಮೊಗ್ಗ ಜಿಲ್ಲೆಯ ಎರಡು ಕಣ್ಣುಗಳಾದ ದಿವಂಗತ ಬಂಗಾರಪ್ಪ ಹಾಗೂ ಡಾ.ಕಾಗೋಡು ತಿಮ್ಮಪ್ಪನವರ ಆದರ್ಶ ತತ್ವಗಳನ್ನು ನಾನು ನನ್ನ ಜೀವನದ ಕೊನೆ ಕ್ಷಣದವರೆಗೆ ಪಾಲಿಸುತ್ತೇನೆ. ರೈತರ ಬದುಕಿಗೆ ಅನ್ನ ನೀಡಿದಂತಹ ಕಾಗೋಡು ತಿಮ್ಮಪ್ಪನವರು ನೂರಾರು ವರ್ಷ ಆರೋಗ್ಯವಂತರಾಗಿ ಬದುಕಲಿ ಎಂದು ಆಶಿಸಿದರು.
ಆಧುನಿಕ ಭರಾಟೆಯಲ್ಲಿ ಸಂಸ್ಕೃತಿ, ಬಾಂಧವ್ಯ ಕಣ್ಮರೆ: ಕೇಂದ್ರ ಸಚಿವ ಎಚ್‌ಡಿಕೆ ಬೇಸರ
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಆರ್.ಜಯಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರು ಹಾಗೂ ವಾಗ್ಮಿ ಸುಧೀರ್ ಕುಮಾರ್ ಮುರೊಳ್ಳಿ, ಕೆಪಿಸಿಸಿ ವಕ್ತರ ಅನಿಲ್ ಕುಮಾರ್, ಸೋಮಶೇಖರ್ ಲಗ್ಗೆರೆ, ಬಿ. ಟಾಕಪ್ಪ ಕಣ್ಣೂರ್, ಎನ್.ಉಮೇಶ್, ಚೇತನ್ ರಾಜ್ ಕಣ್ಣೂರ್, ರಮಾನಂದ್ ಸಾಗರ್, ಗಜೇಂದ್ರ ಯಾದವ್, ಶರತ್ ನಾಗಪ್ಪ ಸೇರಿದಂತೆ ಅನೇಕರು ಉಪಸಿತರಿದ್ದರು.