ಹೆಚ್ಚುವರಿ ಡಿಸಿಎಂ ಬಗ್ಗೆ ಹೈಕಮಾಂಡ್‌ ತೀರ್ಮಾನಿಸಲಿ: ಸಚಿವ ಸತೀಶ್ ಜಾರಕಿಹೊಳಿ

By Kannadaprabha NewsFirst Published Jun 22, 2024, 7:02 AM IST
Highlights

ಹೆಚ್ಚುವರಿಯಾಗಿ ಉಪಮುಖ್ಯಮಂತ್ರಿಗಳ ನೇಮಕ ವಿಚಾರದಲ್ಲಿ ಪಕ್ಷದ ನಾಯಕರು, ಹೈಕಮಾಂಡ್‌ನಲ್ಲಿ ಸಾಮೂಹಿಕವಾಗಿ ಚರ್ಚೆಯಾದಾಗ ಮಾತ್ರ ಅದಕ್ಕೆ ದಾರಿ ಸಿಗುತ್ತದೆ. ಸದ್ಯ ಈ ವಿಚಾರದ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗಿಲ್ಲ ಎಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ 
 

ಬೆಂಗಳೂರು(ಜೂ.22):  ಹೆಚ್ಚುವರಿ ಉಪಮುಖ್ಯಮಂತ್ರಿಗಳ ನೇಮಕ ವಿಚಾರವಾಗಿ ಹೈಕಮಾಂಡ್, ಮುಖ್ಯಮಂತ್ರಿ ಯವರ ಮಟ್ಟದಲ್ಲಿ ಸಾಮೂಹಿಕವಾಗಿ ಚರ್ಚೆಯಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೆಚ್ಚುವರಿಯಾಗಿ ಉಪಮುಖ್ಯಮಂತ್ರಿಗಳ ನೇಮಕ ವಿಚಾರದಲ್ಲಿ ಪಕ್ಷದ ನಾಯಕರು, ಹೈಕಮಾಂಡ್‌ನಲ್ಲಿ ಸಾಮೂಹಿಕವಾಗಿ ಚರ್ಚೆಯಾದಾಗ ಮಾತ್ರ ಅದಕ್ಕೆ ದಾರಿ ಸಿಗುತ್ತದೆ. ಸದ್ಯ ಈ ವಿಚಾರದ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗಿಲ್ಲ ಎಂದರು.

Latest Videos

ಮತ್ತೆ ಮುನ್ನೆಲೆಗೆ ಬಂದ ಡಿಸಿಎಂ ಹುದ್ದೆ ಸೃಷ್ಟಿ: ಸತೀಶ್‌ ಜಾರಕಿಹೊಳಿ ಹೇಳಿದ್ದಿಷ್ಟು

ಯಾರೂ ಅಭ್ಯರ್ಥಿ ಯಾಗಬಹುದು:

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಡಿ. ಕೆ.ಶಿವಕುಮಾರ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗೆ ಇನ್ನೂ 6 ತಿಂಗಳು ಇದೆ. ಅಲ್ಲಿ ಅಭ್ಯರ್ಥಿ ಇಲ್ಲ ಎಂದು ಹೇಳಲಾಗಲ್ಲ. ಯಾರು ಬೇಕಾದರೂ ಅಭ್ಯರ್ಥಿಯಾಗಬಹುದು. ಆದರೆ, ಶಿಗ್ಗಾಂವಿಯಲ್ಲಿ ಮೊದಲಿನಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಅಲ್ಲಿ ಪಕ್ಷಕ್ಕೆ ಲೀಡ್ ಬಂದಿದೆ. ಅಲ್ಲಿ ಮುಸ್ಲಿಂ ಅಭ್ಯರ್ಥಿಗಳು 4 ಬಾರಿ ಸೋತಿರಬಹುದು. ಹಾಗೆಂದು ಟಿಕೆಟ್ ತಪ್ಪಿಸುವುದು ಸರಿಯಲ್ಲ. ಅಂತಿಮ ನಿರ್ಧಾರ ಪಕ್ಷ ಕೈಗೊಳ್ಳಲಿದೆ ಎಂದರು

click me!