ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಸರ್ಕಾರದ ಆಡಳಿತದಲ್ಲಿ ಮೂಗು ತೋರಿಸಿರುವುದ ಸಾಕ್ಷಿ ಸಮೇತ ರುಜುವಾತಾಗಿರುವ ಹಿನ್ನಲೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಂಸದ ಎಸ್.ಮುನಿಸ್ವಾಮಿ ಒತ್ತಾಯಿಸಿದರು.
ಕೋಲಾರ (ನ.17): ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಸರ್ಕಾರದ ಆಡಳಿತದಲ್ಲಿ ಮೂಗು ತೋರಿಸಿರುವುದ ಸಾಕ್ಷಿ ಸಮೇತ ರುಜುವಾತಾಗಿರುವ ಹಿನ್ನಲೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಂಸದ ಎಸ್.ಮುನಿಸ್ವಾಮಿ ಒತ್ತಾಯಿಸಿದರು. ನಗರದ ಜಿಪಂ ಕೆ.ಡಿ.ಪಿ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್ ಸಂರ್ಪಕ ಪಡೆದಿರುವ ವಿರುದ್ದ ಕ್ರಮ ಕೈಗೊಂಡಿರುವ ಹಾಗೇ ಡಾ.ಯತೀಂದ್ರ ಸಾರ್ವಜನಿಕವಾಗಿ ಸರ್ಕಾರದ ಆಡಳಿತದಲ್ಲಿ ಮೂಗು ತೋರಿಸಿರುವುದರ ಹಿನ್ನೆಲೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಡಾ.ಯತೀಂದ್ರ ಸ್ಥಳೀಯ ಶಾಸಕರನ್ನು ಹಿಮ್ಮೆಟಿಸಿ ತಾವೇ ವರ್ಗವಣೆಗಳನ್ನು ಮಾಡುವುದಕ್ಕೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿರುವುದು ಎಷ್ಟು ಮಾತ್ರ ಸರಿಯಿದೆ ಎಂದು ಪ್ರಶ್ನಿಸಿದರು. ಬರದಿಂದ ರೈತರು ಸಾಕಷ್ಟು ನಷ್ಟಕ್ಕೆ ತುತ್ತಾಗಿದ್ದರೂ ಸಹ ಆಡಳಿತ ಪಕ್ಷದ ಸಚಿವರು ಈವರೆಗೆ ಬರದ ಅಧ್ಯಯನ ಮಾಡಲು ಯಾವುದೇ ಪ್ರವಾಸ ಕೈಗೊಳ್ಳದೆ ಇರುವುದು ನಿರ್ಲಕ್ಷತೆಯ ಪರಮಾವಧಿಯಾಗಿದೆ. ಕರ್ನಾಟಕದಲ್ಲಿ ಆಡಳಿತ ಪಕ್ಷವು ಬಿಟ್ಟಿ ಪ್ರಚಾರಗಳಲ್ಲಿ ತೊಡಗಿದ್ದು ಹಿಂದಿನ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡುವುದರಲ್ಲಿ ತೊಡಗಿದೆ ಎಂದು ಅರೋಪಿಸಿದರು.
undefined
ಸಚಿವ ರಾಜಣ್ಣ ಒಬ್ಬ ಬಫೂನ್: ಸಂಸದ ಮುನಿಸ್ವಾಮಿ
ಸಿದ್ದರಾಮಯ್ಯ ವಿಧಾನಸೌಧದ ಮುಂದೆ ತಾವು ಮುಖ್ಯಮಂತ್ರಿ ಆದ ಮೇಲೆ ನಮ್ಮ ಜಿಲ್ಲೆ ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ? ಕೇಂದ್ರ ಸರ್ಕಾರ ಎಷ್ಟು ಮಾಡಿದೆ ಎಂಬುವುದನ್ನು ದಾಖಲೆಗಳ ಸಮೇತ ಘೋಷಿಸಲಿ ಎಂದು ಸವಾಲು ಹಾಕಿದ ಅವರು ನಾವು ಜಲಜೀವನ್ ಮಿಷನ್‌ಗೆ ೧೪೦೦ ಕೋಟಿ, ರಸ್ತೆಗಳಿಗೆ ೨೭ ಕೋಟಿ ರು. ನರೇಗಾ, ಹಾಸ್ಟೆಲ್ ಸೇರಿದಂತೆ ಯರ್‌ಗೋಳ್ ಉದ್ಘಾಟನೆ ಸಂದರ್ಭದಲ್ಲಿ ೨೩೦೦ ಕೋಟಿ ಕಾಮಗಾರಿಗಳ ಉದ್ಘಾಟನೆ ಮಾಡಿದ ಮುಖ್ಯ ಮಂತ್ರಿಗಳೇ ಅದನ್ನು ಕಂಡು ಆಶ್ಚರ್ಯ ಚಕಿತರಾದರು ಎಂದು ಹೇಳಿದರು.
ಬಿಜೆಪಿ ಆಡಳಿತದಲ್ಲಿ ಯರಗೋಳ್ ಕಾಮಗಾರಿಗಳು ಪೂರ್ಣಗೊಂಡಿರುವುದು. ಅದರೆ ಕಾಂಗ್ರೆಸ್ ಶಾಸಕರು ನಾನು, ನಾನು ಎಂದು ಒಬ್ಬರ ಮೇಲೆ ಒಬ್ಬರು ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿರುವುದು ನಾಚೀಕೆಗೇಡು. ಕೆ.ಸಿ.ವ್ಯಾಲಿಯನ್ನು 3ನೇ ಹಂತದಲ್ಲಿ ಶುದ್ಧೀಕರಿಸಲು ಕೈಗೊಳ್ಳಬೇಕಾದ ಪ್ರಯತ್ನದಲ್ಲಿದ್ದೆವು. ಕೆ.ಸಿ.ವ್ಯಾಲಿ ನೀರು ಯರಗೋಳ್ ನೀರಿಗೆ ಮಿಶ್ರಣಗೊಳ್ಳಬಾರದು ಎಂಬ ಹಿನ್ನೆಲೆಯಲ್ಲಿ ಉದ್ಘಾಟನೆ ಮುಂದೂಡಲಾಗಿತ್ತು, ಅಷ್ಟರಲ್ಲೇ ಚುನಾವಣೆ ಬಂದು ಕಾಂಗ್ರೆಸ್‌ನವರು ಉದ್ಘಾಟಿಸಿದರು ಎಂದು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ವಿಫಲವಾಗಿದೆ, ಸಿದ್ದರಾಮಯ್ಯ ಅವರು ಕೂಡಲೇ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ರಾಜ್ಯದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯ ಮಟ್ಟದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಬುರುಡೆ ಬಿಟ್ಟು ಹೋಗಿದ್ದಾರೆ: ಸಂಸದ ಮುನಿಸ್ವಾಮಿ ಟೀಕೆ
ಪ್ರಧಾನಿ ನರೇಂದ್ರ ಮೋದಿ, ರಾಷ್ಟೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಷಾ ಹಾಗೂ ಸಂತೋಷ್‌ಜಿ ತೀರ್ಮಾನದಂತೆ ರಾಜ್ಯದ ಅಧ್ಯಕ್ಷ ಸ್ಥಾನ ಬಿ.ವೈ.ವಿಜಯೇಂದ್ರರಿಗೆ ನೀಡಿರುವಾಗ ಇದನ್ನು ವಿರೋಧಿಸುವಂತ ಪ್ರಶ್ನೆಯೇ ಬರುವುದಿಲ್ಲ ಎಂದರು. ಅಧಿಕಾರಿಗಳ ಸಮರ್ಪಕವಾಗಿ ಕೆಲಸ ನಿರ್ವಹಿಸದೆ ವಿರುದ್ದ ಜಿಲ್ಲಾಧಿಕಾರಿಗಳಿಗೆ ಸರ್ಕಾರಕ್ಕೆ ಅಮಾನತ್ತು ವರದಿ ಶಿಫಾರಸ್ಸು ಮಾಡಬೇಕೆಂದು ಉಸ್ತುವಾರಿ ಸಚಿವರು ಸೂಚನೆ ನೀಡುತ್ತಿರುವುದು ಕಂಡರೆ ಕೋಲಾರದಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿರುವುದಕ್ಕೆ ನಿದರ್ಶನವಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ದೂರಿದರು.