ಕಾಂತೇಶ್‌ಗೆ ಟಿಕೆಟ್ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ. ಈಶ್ವರಪ್ಪ ಅವರಿಗೆ ನನ್ನ ಜೊತೆ ದೆಹಲಿಗೆ ಬರಲು ಹೇಳಿ. ನನ್ನ ಜೊತೆ ಈಶ್ವರಪ್ಪ ಬಂದರೆ ನಾನು ಅವರನ್ನು ಕರೆದುಕೊಂಡು ಹೋಗುತ್ತೇನೆ.
ಶಿವಮೊಗ್ಗ (ಮಾ.11): ಕಾಂತೇಶ್‌ಗೆ ಟಿಕೆಟ್ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ. ಈಶ್ವರಪ್ಪ ಅವರಿಗೆ ನನ್ನ ಜೊತೆ ದೆಹಲಿಗೆ ಬರಲು ಹೇಳಿ. ನನ್ನ ಜೊತೆ ಈಶ್ವರಪ್ಪ ಬಂದರೆ ನಾನು ಅವರನ್ನು ಕರೆದುಕೊಂಡು ಹೋಗುತ್ತೇನೆ. ದೆಹಲಿಯಲ್ಲಿ ಅಮಿತ್ ಶಾ ಅವರ ಜೊತೆ ಚರ್ಚಿಸೋಣ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈಶ್ವರಪ್ಪ ಅಭಿಮಾನಿಗಳಿಗೆ ಮನವರಿಕೆ ಮಾಡಿದರು. ಶಿವಮೊಗ್ಗ ವಿನೋಬ ನಗರದ ಯಡಿಯೂರಪ್ಪ ನಿವಾಸಕ್ಕೆ ಭಾನುವಾರ ಆಗಮಿಸಿದ್ದ ಕುರುಬ ಸಮಾಜದ ಮುಖಂಡರೊಂದಿಗೆ ಮಾತನಾಡಿದ ಅವರು, ನಾನು ಬೇರೆ ಅಲ್ಲಾ ಈಶ್ವರಪ್ಪ ಬೇರೆ ಅಲ್ಲ. ಶನಿವಾರ ಅವರ ಮನೆಗೆ ಪ್ರಹ್ಲಾದ್ ಜೋಶಿ ಅವರಿಗೂ ಕಳಿಸಿದ್ದೆ. ಈಶ್ವರಪ್ಪ ನನ್ನ ಜೊತೆ ದೆಹಲಿಗೆ ಬರಲಿ. ನಾನೇ ಖುದ್ದಾಗಿ ಅವರ ಜೊತೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
ನಾನು ಯಡಿಯೂರಪ್ಪ ಮೇಲೆ ವಿಶ್ವಾಸ ಇಟ್ಟಿದ್ದೇನೆ: ನನ್ನ ಮಗನೂ ಚಿತ್ರದುರ್ಗ ಲೋಕಸಭಾ ಟಿಕೆಟ್ ಆಕಾಂಕ್ಷಿ. ಅವನಿಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಬಳಿ ಮನವಿ ಮಾಡಲು ಇವತ್ತು ಶಿವಮೊಗ್ಗ ಬಂದಿದ್ದೇನೆ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ಮಗನಿಗೆ ಕಳೆದ ಬಾರಿ ಟಿಕೆಟ್ ಕೇಳಿದ್ದೆ, ಮುಂದೆ ನೋಡೋಣ ಅಂದಿದ್ರು. ಹಾಗಾಗಿ, ಈ ಸಲ ಅವಕಾಶ ಇದ್ರೆ, ಟಿಕೆಟ್ ಕೊಡಿಸಿ ಅಂತಾ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದ್ದೇನೆ ಎಂದರು. ನಾನು ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಯಡಿಯೂರಪ್ಪ ಕುಟುಂಬದ ಜೊತೆ ನಮ್ಮ ಸಂಪರ್ಕ ನಿರಂತರವಾಗಿದೆ. ಹಾಗಾಗಿ ಅವರ ಮನೆಗೆ ಬರ್ತಾ ಇರುತ್ತೇನೆ, ಇವತ್ತು ಬಂದಿದ್ದೇನೆ. ನಾನು ಯಡಿಯೂರಪ್ಪ ಮೇಲೆ ವಿಶ್ವಾಸ ಇಟ್ಟಿದ್ದೇನೆ. ಟಿಕೆಟ್ ಮೇಲೆ ವಿಶ್ವಾಸ ಇಟ್ಟಿಲ್ಲ ಎಂದು ಹೇಳಿದರು.
undefined
ಸಂಸದ ಅನಂತ ಹೆಗಡೆಯವರನ್ನು ಮೋದಿ ವಜಾ ಮಾಡಲಿ: ಸಿಎಂ ಸಿದ್ದರಾಮಯ್ಯ
ಈಶ್ವರಪ್ಪ ವಲಯದಲ್ಲಿ ಗರಿಗೆದರಿದ ಚಟುವಟಿಕೆ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕುರಿತು ಮಾಧ್ಯಮಗಳಲ್ಲಿ ಚರ್ಚೆ ಜೋರಾಗುತ್ತಿದ್ದಂತೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಆಪ್ತ ವಲಯದಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ. ಅವರ ಆಪ್ತರು, ಹಿತೈಷಿಗಳು ದೂರವಾಣಿ ಮೂಲಕ ಈಶ್ವರಪ್ಪಅವರಿಗೆ ಕರೆ ಮಾಡಿ, ಆತಂಕ ವ್ಯಕ್ತಪಡಿಸುತ್ತಿದ್ದರು. ಅವರೆಲ್ಲರಿಗೂ ಈಶ್ವರಪ್ಪ ಸಮಾಧಾನಪಡಿಸುತ್ತ, ಟಿಕೆಟ್ ಸಿಗುವ ಭರವಸೆ ಪುನರುಚ್ಚರಿಸಿದರು. ಈ ನಡುವೆ ಅವರ ಪುತ್ರ ಹಾಗೂ ಟಿಕೆಟ್ ಆಕಾಂಕ್ಷಿ ಕೆ.ಇ. ಕಾಂತೇಶ್ ಅವರು ದೃಶ್ಯ ಮಾಧ್ಯಮವೊಂದರ ಜೊತೆ ಮಾತನಾಡಿ, ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ.
ಸರ್ಕಾರ ಬೀಳಿಸೋಕೆ ಶಾಸಕರಿಗೆ ಬಿಜೆಪಿಯವರಿಂದ ತಲಾ 50 ಕೋಟಿ ಆಮಿಷ: ಡಿಕೆಶಿ ಆರೋಪ
ಇದು ಕಾರ್ಯಕರ್ತರಲ್ಲಿ ಆತಂಕ ಉಂಟುಮಾಡಲು ಕಾರಣವಾಯಿತು. ಇದರ ಬೆನ್ನಲ್ಲೇ ನಗರಪಾಲಿಕೆ ಸದಸ್ಯರ ಗುಂಪೊಂದು ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಭೇಟಿ ಮಾಡಿ, ಯಡಿಯೂರಪ್ಪ ಅವರ ಜೊತೆ ಮಾತನಾಡುವಂತೆ ಒತ್ತಡ ಹೇರಲು ವಿನೋಬ ನಗರದ ಅವರ ಮನೆಗೆ ತೆರಳಿದ್ದರು. ಆದರೆ, ಈ ವೇಳೆಯಲ್ಲಿ ಸಂಸದ ರಾಘವೇಂದ್ರ ಮನೆಯಲ್ಲಿ ಇರಲಿಲ್ಲ. ಹೀಗಾಗಿ, ಅಲ್ಲಿಂದ ಹಿಂತಿರುಗಿದ ಈ ತಂಡ ನಂತರ ಸಂಸದರನ್ನು ಭೇಟಿ ಮಾಡುವ ಯೋಚನೆಯಲ್ಲಿದ್ದಾರೆ. ಇತ್ತ ಹಾವೇರಿಯಿಂದಲೂ ಕಾರ್ಯಕರ್ತರು ಶಿವಮೊಗ್ಗ ನಗರದ ಈಶ್ವರಪ್ಪ ಮನೆಯತ್ತ ತಂಡ ತಂಡಗಳಾಗಿ ಆಗಮಿಸಿ, ಮಾತುಕತೆ ನಡೆಸುತ್ತಿದ್ದಾರೆ.