ಕೇಂದ್ರಕ್ಕೆ ಯಡಿಯೂರಪ್ಪ ಪತ್ರ ಬರೆದು ಅಕ್ಕಿ ಕೊಡಿ​ಸ​ಲಿ: ಸಚಿವ ಪ್ರಿಯಾಂಕ್‌ ಖರ್ಗೆ

Published : Jun 21, 2023, 11:00 PM IST
ಕೇಂದ್ರಕ್ಕೆ ಯಡಿಯೂರಪ್ಪ ಪತ್ರ ಬರೆದು ಅಕ್ಕಿ ಕೊಡಿ​ಸ​ಲಿ: ಸಚಿವ ಪ್ರಿಯಾಂಕ್‌ ಖರ್ಗೆ

ಸಾರಾಂಶ

ಬಿಜೆಪಿಯ ಈ ಸೇಡಿನ ರಾಜಕಾರಣ ಕನ್ನಡಿಗರ ಅಸ್ಮಿತೆಗೆ ಧಕ್ಕೆ ಉಂಟು ಮಾಡುತ್ತಿದೆ. ಆದಾಗ್ಯೂ ನಮ್ಮ ಸರ್ಕಾರ ಜು.1ರಿಂದಲೆ ಅನ್ನಭಾಗ್ಯ ಯೋಜನೆ ಜಾರಿಗೆ ಶ್ರಮಿಸುತ್ತಿದೆ. ಛತ್ತೀಸಗಡ್‌ ರಾಜ್ಯವನ್ನು ಸಂಪರ್ಕಸಲಾಗಿದ್ದು ಅವರು 1.50 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಸರಬರಾಜು ಮಾಡಲು ಒಪ್ಪಿದ್ದಾರೆ. ಹಾಗಾಗಿ ಯೋಜನೆ ಜಾರಿಗೊಳಿಸುತ್ತೇವೆ ಎಂದ​ ಪ್ರಿಯಾಂಕ್‌ ಖರ್ಗೆ

ಕಲಬುರಗಿ(ಜೂ.21):  ಅನ್ನಭಾಗ್ಯ ಯೋಜನೆ ಜಾರಿಯಾಗದಂತೆ ರಾಜಕೀಯ ಕೇಂದ್ರ ಸರ್ಕಾರ ಸೇಡಿನ ಕ್ರಮಕ್ಕೆ ಮುಂದಾಗಿದೆ ಎಂದು ದೂರಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಯಡಿಯೂರಪ್ಪನವರಿಗೆ ಕನ್ನಡಿಗರ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ, ಮೊದಲು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಅನ್ನಭಾಗ್ಯಕ್ಕಾಗಿ ಅಕ್ಕಿ ಕೊಡಿಸಿ ಕನ್ನಡಿಗರ ಅಸ್ಮಿತೆ ಉಳಿಸಲಿ ಎಂದು ಟಾಂಗ್‌ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಒಂದು ಕಾಳು ಕಡಿಮೆಯಾದರೂ ಅನ್ನಭಾಗ್ಯ ಅಕ್ಕಿ ತಗೋಬೇಡಿ ಎಂದು ಸರ್ಕಾರದ ವಿರುದ್ಧ ಜನರಿಗೆ ಚೇತರಿಸುವ ಬದಲು, ಕನ್ನಡಿಗರ ಹಸಿವು ನೀಗಿಸಲು ಮುಂದಾಗಲಿ. ಅವರೂ ಮುಖ್ಯಮಂತ್ರಿಯಾಗಿದ್ದವರು. ಅವರ ಮಾತಿಗಾದರೂ ಬಿಜೆಪಿ ಹೈಕಮಾಂಡ್‌ ಕಿಮ್ಮತ್ತು ನೀಡಿ 3400ರು. ಗಳಲ್ಲಾದರೂ ಕ್ವಿಂಟಲ್‌ ಅಕ್ಕಿ ಕೊಡಿಸಲಿ ನಾವು ಯಡಿಯೂರಪ್ಪಗೆ ಸನ್ಮಾನ ಮಾಡುತ್ತೇವೆ ಎಂದರು.

ಕರ್ನಾಟಕದಲ್ಲಿ ಮತ್ತೆ ಎಸ್‌​ಇಪಿ ಜಾರಿ: ಸಚಿವ ಡಾ. ಸುಧಾಕರ್‌

ಫುಡ್‌ ಕಾರ್ಪೋರೇಷನ್‌ ಇಂಡಿಯಾ ಜೂ.12ಕ್ಕೆ ನಮ್ಮ ಸರ್ಕಾರದ ಪತ್ರಕ್ಕೆ ಉತ್ತರಿಸಿ, ಕ್ವಿಂಟಲ್‌ ಅಕ್ಕಿಗೆ 3400 ರು.ನಂತೆ 2.28 ಮೆಟ್ರಿಕ್‌ ಟನ್‌ ಅಕ್ಕಿ ಕೊಡುವುದಾಗಿ ಹೇಳಿ ಮರುದಿನ ಜೂ.13ರಂದು ಕರ್ನಾಟಕಕ್ಕೆ ಕೊಡಲಿಕ್ಕಾಗುವುದಿಲ್ಲ. ಇತರೆ ರಾಜ್ಯಗಳಿಗೆ ಹಿಂದಿನಂತೆ ನಿರಂತರವಾಗಿ ಕೊಡಲಾಗುವುದು ಎಂದು ಪತ್ರ ಬರೆದಿದೆ. ಬಿಜೆಪಿಯವರು ಕನ್ನಡಿಗರ ಅನ್ನಭಾಗ್ಯಕ್ಕೆ ಅಡ್ಡಿ ಪಡಿಸುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಿದ್ದು ಅನ್ನಭಾಗ್ಯ ಯೋಜನೆ ಜಾರಿಗೊಳಿಸದಂತೆ ಷಡ್ಯಂತ್ರ ರೂಪಿಸಿದೆ ಎಂದು ದೂರಿದರು.

ಬಿಜೆಪಿಯ ಈ ಸೇಡಿನ ರಾಜಕಾರಣ ಕನ್ನಡಿಗರ ಅಸ್ಮಿತೆಗೆ ಧಕ್ಕೆ ಉಂಟು ಮಾಡುತ್ತಿದೆ. ಆದಾಗ್ಯೂ ನಮ್ಮ ಸರ್ಕಾರ ಜು.1ರಿಂದಲೆ ಅನ್ನಭಾಗ್ಯ ಯೋಜನೆ ಜಾರಿಗೆ ಶ್ರಮಿಸುತ್ತಿದೆ. ಛತ್ತೀಸಗಡ್‌ ರಾಜ್ಯವನ್ನು ಸಂಪರ್ಕಸಲಾಗಿದ್ದು ಅವರು 1.50 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಸರಬರಾಜು ಮಾಡಲು ಒಪ್ಪಿದ್ದಾರೆ. ಹಾಗಾಗಿ ಯೋಜನೆ ಜಾರಿಗೊಳಿಸುತ್ತೇವೆ ಎಂದ​ರು.

ಚಿಂಚೋಳಿ: ಮೃತ ಹಣಮಂತ ಭೋವಿ ಕುಟುಂಬಕ್ಕೆ ಸಂಸದ ಉಮೇಶ ಜಾಧವ್‌ ಸಾಂತ್ವನ

ಯಾರೇ ತಪ್ಪು ಮಾಡಿದ್ದರೂ ಕ್ರಮ ಗ್ಯಾರಂಟಿ:

ಯಾರನ್ನು ತಮ್ಮ ಆಪ್ತ ಕಾರ್ಯದರ್ಶಿ ಮಾಡಿಕೊಳ್ಳಬೇಕು ಎಂಬುದು ತಮ್ಮ ವಿವೇಚನೆ ಎಂದ ಪ್ರಿಯಾಂಕ್‌ ಖರ್ಗೆ, ಕೆಕೆಆರ್‌​ಡಿಬಿಯ ವಿರುದ್ಧ ನನ್ನ ಆರೋಪವಿತ್ತು. ಪ್ರಸ್ತುತ ನಡೆಯುತ್ತಿರುವ ಕೆಕೆಆರ್‌ಡಿಬಿ ಅವ್ಯವಹಾರದ ತನಿಖೆಯಲ್ಲಿ ಆಪ್ತ ಕಾರ್ಯದರ್ಶಿ ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.

ಸುದ್ದಿ​ಗೋ​ಷ್ಠಿ​ಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್‌ ಪಾಟೀಲ, ಶಾಸಕರಾದ ಕನೀಜ್‌ ಫಾತಿಮಾ, ಅಲ್ಲಮಪ್ರಭು ಪಾಟೀಲ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್‌, ಡೇವಿಡ್‌ ಸಿಮೆಯೋನ, ಸುಭಾಷ್‌ ರಾಠೋಡ, ಶಿವಾನಂದ ಪಾಟೀಲ್‌ , ಲತಾ ರಠೋಡ, ವಾಣಿಸ್ರಿ ಸಗರಕರ್‌ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್