Belagavi: ಅಮಿತ್ ಶಾ ಮಗನಿಗೆ ಅಗ್ನಿಪಥ್ ಹೋಗೋಕೆ ಹೇಳಿ ನೋಡೋಣ: ಲಕ್ಷ್ಮೀ ಹೆಬ್ಬಾಳ್ಕರ್

Published : Jun 20, 2022, 10:11 PM IST
Belagavi: ಅಮಿತ್ ಶಾ ಮಗನಿಗೆ ಅಗ್ನಿಪಥ್ ಹೋಗೋಕೆ ಹೇಳಿ ನೋಡೋಣ: ಲಕ್ಷ್ಮೀ ಹೆಬ್ಬಾಳ್ಕರ್

ಸಾರಾಂಶ

• ಅಗ್ನಿಪಥ್ ವಿರೋಧಿಸಿ ಸೇನಾಕಾಂಕ್ಷಿಗಳ 'ಬೆಳಗಾವಿ ಚಲೋ'ಗೆ ತಡೆಗೆ ಕಿಡಿ • 16 ಕೋಟಿ ಉದ್ಯೋಗ ಕೊಡಲಾಗದಿದ್ದಕ್ಕೆ ಅಗ್ನಿಪಥ್ ಡ್ರಾಮಾ ರಿಲೀಸ್ • ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದ ಲಕ್ಷ್ಮೀ ಹೆಬ್ಬಾಳ್ಕರ್

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಜೂ.20): ಅಗ್ನಿಪಥ್ ಯೋಜನೆ ವಿರೋಧಿಸಿ ಸೇನಾಕಾಂಕ್ಷಿಗಳು ಕರೆ ನೀಡಿದ್ದ 'ಬೆಳಗಾವಿ ಬಂದ್', 'ಬೆಳಗಾವಿ ಚಲೋ' ವಿಫಲವಾಗಿದೆ. ಯುವಕರನ್ನು ಬೆಳಗಾವಿ ಬರದಂತೆ ತಡೆಹಿಡಿದಿದ್ದಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿ ತಾಲೂಕಿನ ತುರಮರಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, 'ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದು ಎಲ್ಲರ ಅಧಿಕಾರ. ಆ ಹೋರಾಟದ ರೂಪ ಬೆಂಕಿ ಹಚ್ಚಿ, ಕಲ್ಲು ತೂರಾಟ ರೀತಿ ಉದ್ವಿಗ್ನವಾಗಬಾರದು‌. ಗಾಂಧೀಜಿಯವರು ಕಲಿಸಿ ಕೊಟ್ಟಂತಹ ಸತ್ಯಾಗ್ರಹ ಹೋರಾಟಕ್ಕೆ ನಾವೆಲ್ಲ ಬದ್ಧ. ಕಾಂಗ್ರೆಸ್‌ ನವರು ಅದನ್ನೇ ಬಯಸುತ್ತೇವೆ. ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. 

ಅವರಿಗೆ ಗೊತ್ತಾಗಿರೋದ್ರಿಂದ ಪಥ ಸಂಚಲನ ಮಾಡಿ ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ.ಪ್ರತಿಯೊಂದು ಟೋಲ್ ನಾಕಾನಲ್ಲಿ ಜನರನ್ನು ತಡೆಯುತ್ತಿದ್ದಾರೆ.ಆದರೆ ಈ ರೀತಿ ಎಷ್ಟು ದಿನ ಮಾಡ್ತಾರೆ?ಎಷ್ಟು ದಿನ ಹೋರಾಟ ತಡೆಯಕ್ಕಾಗುತ್ತೆ.ಹೋರಾಟ ತಡೆಯಲು, ದಿಕ್ಕು ಬದಲಿಸಲು ಸಾಧ್ಯವಿಲ್ಲ' ಎಂದಿದ್ದಾರೆ.‌ ಇನ್ನು ಉರಿಯುವ ಬೆಂಕಿಗೆ ಕಾಂಗ್ರೆಸ್ ತುಪ್ಪ ಸುರಿಯುತ್ತಿದೆ ಎಂಬ ಬಿಜೆಪಿ ಆರೋಪ ವಿಚಾರವಾಗಿ‌ ಪ್ರತಿಕ್ರಿಯಿಸಿ, 'ಯುವಕರನ್ನು ಜನರನ್ನು ಎತ್ತಿ ಕಟ್ಟಿ ರೂಢಿ ಇರೋದು ಬಿಜೆಪಿಯವರಿಗೆ.‌ ಬೀಸೋ ಗಾಳಿಯನ್ನು ಯಾರೂ ತಡೆಯಕ್ಕಾಗಲ್ಲ, ಉರಿಯೋ ಸೂರ್ಯವನ್ನ ನಂದಿಸೋಕ್ಕಾಗಲ್ಲ‌. ನಾನು ಯೋಜನೆ ವಿರುದ್ಧ ಅಂತಾ ಹೇಳಲ್ಲ, ಯೋಜನೆಯಲ್ಲಿ ಬದಲಾವಣೆ ಆಗಬೇಕಿದೆ. 

ಸೇನಾಕಾಂಕ್ಷಿಗಳು ಕರೆ ನೀಡಿದ್ದ 'Belagavi Band' ವಿಫಲಗೊಳಿಸಿದ ಪೊಲೀಸರು

ಎಂಟು ವರ್ಷದಲ್ಲಿ 16 ಕೋಟಿ ಕೆಲಸ ಕೊಡ್ತೀನಿ ಅಂತಾ ಪ್ರಧಾನಿ ವಾಗ್ದಾನ ಮಾಡಿದ್ರು‌. ಪಕೋಡ ಮಾರಿ ಅಂತಾ ಹೇಳಿದ್ರು. ಈಗ ಅಗ್ನಿಪಥ್‌ದಲ್ಲಿ ಅಗ್ನಿ ವೀರರು ಅಂತಿದ್ದಾರೆ‌. ಅಗ್ನಿವೀರ ಆಗಿ ನಾಲ್ಕು ವರ್ಷ ಆದ ಮೇಲೆ ಅವರ ಭವಿಷ್ಯ ಏನು? 75 ವರ್ಷದ ರಕ್ಷಣಾ ಸಚಿವರು,71 ವರ್ಷದ ಪ್ರಧಾನಿಗೆ ರಿಟೈರ್‌ಮೆಂಟ್ ಇಲ್ಲ. ನಮ್ಮವರೇ 76 ವರ್ಷದ ಪ್ರಕಾಶ್ ಹುಕ್ಕೇರಿ ಎಂಎಲ್‌ಸಿ ಆಗಿದ್ದಾರೆ. 21 ಅಥವಾ 25ನೇ ವಯಸ್ಸಿಗೆ ರಿಟೈರ್‌ಮೆಂಟ್ ಅಂದ್ರೆ ಯಾರಾದರೂ ಸಹಿಸಿಕೊಳ್ತಾ ಯಾರಾದರೂ ಯುವಕರ ತಂದೆ ತಾಯಿ ಸಹಿಸಿಕೊಳ್ತಾರಾ? ಅವರ ಜಾಬ್ ಸೆಕ್ಯೂರಿಟಿ ಇರಲಿ. ಯಾವುದೇ ಯೋಜನೆ ಇರಲಿ ಪರ ವಿರೋಧ ಇರುತ್ತೆ. ಅದನ್ನ ಸುಧಾರಿಸಿಕೊಂಡು ಮಾಡಲಿ ಅನ್ನೋದು ನನ್ನ ಅಭಿಪ್ರಾಯ' ಎಂದು ತಿಳಿಸಿದ್ದಾರೆ.

ದೇಶದ ಪ್ರಧಾನಿ ರಾಜ್ಯಕ್ಕೆ ಬಂದಿದ್ದಾರೆ ಅಂದ್ರೆ ಮರ್ಯಾದೆ ಕೊಡೋದು ಪ್ರತಿಯೊಬ್ಬರ ಕರ್ತವ್ಯ: ಇನ್ನು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಪ್ರತಿಭಟನೆ ಹತ್ತಿಕ್ಕಲಾಗುತ್ತಿದ್ದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್, 'ದೇಶದ ಪ್ರಧಾನಿ ರಾಜ್ಯಕ್ಕೆ ಬಂದಿದ್ದಾರೆ ಅಂದ್ರೆ ಮರ್ಯಾದೆ ಕೊಡೋದು ಪ್ರತಿಯೊಬ್ಬರ ಕರ್ತವ್ಯ. ಕಾಂಗ್ರೆಸ್‌ನವರು ಆಗಿರಬಹುದು ಬೇರೆ ಯಾರೋ ಆಗಿರಬಹುದು. ಕಾನೂನು ಸುವ್ಯವಸ್ಥೆ ಹದಗೆಡಬಾರದು ಅಂತಾ ಪೊಲೀಸರು ಕ್ರಮ ಕೈಗೊಂಡಿರಬಹುದು.ಎಲ್ಲಾ ಕಡೆ ಬೆಂಕಿ ಹಚ್ಚೋದು ಕಲ್ಲು ಒಡೆಯೋದು ನಡೀತಿದೆ ಅದಕ್ಕೋಸ್ಕರ ಮುಂಜಾಗ್ರತೆ ತಗೆದುಕೊಂಡಿರಬಹುದು.‌

ಆದರೆ ಪ್ರತಿಭಟನೆ ಒಂದು ದಿನ ತಡೆಯಬಹುದು, ಎಷ್ಟು ದಿನ ಇರ್ತಾರೆ .ಶಿವಮೊಗ್ಗದಿಂದ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ತರಿಸಿದ್ದು ಎಷ್ಟು ದಿನ ಇರ್ತಾರೆ. ಒಂದಿಲ್ಲ ಒಂದ್ ದಿನ ಆಕ್ರೋಶ ಸ್ಫೋಟ ಆಗುತ್ತೆ, ಯಾರನ್ಯಾರು ತಡೆಯೋಕಾಗಲ್ಲ. ನನ್ನ ನೀವು ತಡೆಯೋಕಾಗಲ್ಲ, ನಿಮ್ಮನ್ನು ನಾವು ತಡೆಯೋಕಾಗಲ್ಲ. ಅದೇ ರೀತಿ ಪ್ರಜಾಪ್ರಭುತ್ವದಲ್ಲಿ ಯಾವ ಹೋರಾಟ ತಡೆಯಲಾಗಲ್ಲ. ಎರಡು ವರ್ಷ ಕೊರೊನಾ ಟೈಮ್ ಇತ್ತು‌. ಪ್ರತಿ ವರ್ಷ 45 ಸಾವಿರ ಹುದ್ದೆ ಭರ್ತಿ ಆಗ್ತಿತ್ತು.‌ 1 ಲಕ್ಷ 35 ಸಾವಿರ ಹುದ್ದೆ ಖಾಲಿ ಇರುವಾಗ ಅವರಿಗೆ ಹೊಳೆದಿದ್ದು ಅಗ್ನಿಪಥ್. ಅಗ್ನಿಪಥ್ ಯೋಜನೆಯಲ್ಲಿ ರಿಟೈರ್‌ಮೆಂಟ್ ಆದವರನ್ನ ಸೆಕ್ಯೂರಿಟಿ ಗಾರ್ಡ್ ಆಗಿ ಇಟ್ಟುಕೊಳ್ತೀವಿ ಅಂತಾರೆ‌.

ಸಾಮಾಜಿಕ ಕಾರ್ಯಕರ್ತನ ಹತ್ಯೆ: ಹೊತ್ತಿ ಉರಿದ ಬೆಳಗಾವಿ, ಗಂಡನ ಚಪ್ಪಲಿ, ಬೈಕ್ ಅಪ್ಪಿಕೊಂಡು ಕಣ್ಣೀರಿಟ್ಟ ಪತ್ನಿ..!

ಬಿಜೆಪಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಇಟ್ಟುಕೊಳ್ತೀವಿ ಅಂತಾ ಬಿಜೆಪಿ ಲೀಡರ್ ಹೇಳ್ತಾರೆ. ಹಾಗಾದರೆ ಇವರ ಮೆಂಟಾಲಿಟಿ ಯಾವ ಮಟ್ಟಕ್ಕಿದೆ? ಅಮಿತ್ ಶಾ ಮಗ ಜಯ್ ಶಾ ಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ. ಯಾವ ಮಂತ್ರಿ, ಎಂಎಲ್‌ಎ ಮಕ್ಕಳು ಅಗ್ನಿಪಥ್ ಕೆಲಸಕ್ಕೆ ಹೋಗ್ತಾರೆ, ಬಡವರ ಮಕ್ಕಳು ಹೋಗ್ತಾರೆ. ಮಿಲಿಟರಿಯಲ್ಲಿ ಹುದ್ದೆ ಖಾಲಿ ಇರೋದ್ರಿಂದ ಅವುಗಳನ್ನು ಸೇರಿಸಬೇಕು 16 ಕೋಟಿ ಉದ್ಯೋಗ ಕೊಡಲಾಗದಿದ್ದಕ್ಕೆ ಅಗ್ನಿಪಥ್ ಡ್ರಾಮಾ ರಿಲೀಸ್ ಮಾಡಿದ್ದಾರೆ. ಪ್ರತಿಯೊಂದರಲ್ಲೂ ಆರ್‌ಎಸ್ಎಸ್ ವಾದ ತರುತ್ತಿದ್ದಾರೆ.‌ ವೈಯಕ್ತಿಕವಾಗಿ ನನಗೆ ಅಗ್ನಿಪಥ್ ಯೋಜ‌‌ನೆ ವಿರೋಧ ಇಲ್ಲ, ಜಾಬ್ ಸೆಕ್ಯೂರಿಟಿ, ಹೆಲ್ತ್ ಸೆಕ್ಯೂರಿಟಿ, ಪೇನ್ಷನ್ ಇಲ್ಲ.‌ ನಿವೃತ್ತಿ ಆದ ಎಷ್ಟೋ ಸೈನಿಕರಿಗೆ ಉದ್ಯೋಗ ಸಿಗುತ್ತಿಲ್ಲ, ಇವರಿಗೆ ಹೇಗೆ ಕೊಡ್ತಾರೆ' ಅಂತಾ ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ