
ಚಿತ್ರದುರ್ಗ(ನ.13): ಸಿದ್ದರಾಮಯ್ಯ ನನ್ನ ಆಡಳಿತ ತೆರೆದ ಪುಸ್ತಕ ಎನ್ನುತ್ತಾರೆ. ಇತ್ತ ಚುನಾವಣೆಯಲ್ಲಿ ಸಚಿವ ಜಮೀರ್ ಬಹಿರಂಗವಾಗಿ ಹಣ ಹಂಚುತ್ತಿದ್ದು, ವಯನಾಡಲ್ಲೂ ಅಕ್ಕಿ ಹಂಚಲಾಗಿದೆ. ಇಷ್ಟೆಲ್ಲಾ ಅವ್ಯವಹಾರ ಮಾಡುವ ಕಾಂಗ್ರೆಸ್‌ಗೆ ಅಭಿವೃದ್ಧಿಯ ಸಾಕ್ಷಿಗುಡ್ಡೆ ಬೇಕಾ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ಮದ್ಯಗುತ್ತಿಗೆದಾರರು ಅಬಕಾರಿ ಭ್ರಷ್ಟಾಚಾರದ ಬಗ್ಗೆ ರಾಜ್ಯಪಾಲರಿಗೆ, ಸಿಎಂಗೆ ದೂರು ನೀಡಿ, ಕಮಿಷನರ್, ಡೀಸಿಗಳ ಪಾಲಿನ ಬಗ್ಗೆ ವಿವರಿಸಿದ್ದಾರೆ. ಸರ್ಕಾರ ವೈನ್ ಸ್ಟೋರ್, ಬಾರ್, ಪಬ್‌ಗೆ ದರ ನಿಗದಿ ಪಡಿಸಿದ್ದು, ಚುನಾವಣೆಗಾಗಿ ₹900 ಕೋಟಿ ಸಂಗ್ರಹಿಸಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರಕ್ಕೆ 700 ಕೋಟಿ ಹೋಗಿದೆ. ವಾರದಲ್ಲೇ ₹18 ಕೋಟಿ ಸಂಗ್ರಹಿಸಿ ದಾಖಲೆ ಬರೆದಿರುವ ಅಧಿಕಾರಿಗಳಿಗೆ ಶಹಬ್ಬಾಷ್ ಎನ್ನಬೇಕು ಎಂದು ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.