ನಾಮಪತ್ರ ಸಲ್ಲಿಸಲು ಹೊರಟ್ಟಿಗೆ ಮುಹೂರ್ತ ಫಿಕ್ಸ್ ಮಾಡಿದ ರೇವಣ್ಣ

By Suvarna NewsFirst Published Feb 6, 2021, 3:48 PM IST
Highlights

ಪ್ರತಾಪ್​ ಚಂದ್ರ ಶೆಟ್ಟಿ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್​ ಸಭಾಪತಿ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಇತ್ತ ಬಸವರಾಜ್ ಹೊರಟ್ಟಿ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಬೆಂಗಳೂರು, (ಫೆ.06): ಪ್ರತಾಪ್​ ಚಂದ್ರ ಶೆಟ್ಟಿ ರಾಜೀನಾಮೆ ಬಳಿಕ ತೆರವಾಗಿರುವ ವಿಧಾನ ಪರಿಷತ್​ ಸಭಾಪತಿ ಸ್ಥಾನಕ್ಕೆ ಜೆಡಿಎಸ್​ ಮುಖಂಡ ಬಸವರಾಜ್ ಹೊರಟ್ಟಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ವಿಶೇ ಅಂದ್ರೆ ಬಸವರಾಜ್ ಹೊರಟ್ಟಿ ಅವರ ನಾಮಪತ್ರ ಸಲ್ಲಿಕೆಗೆ  ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರು ಮೂಹರ್ತ ನಿಗದಿ ಮಾಡಿದ್ದಾರೆ.

 ಸೋಮವಾರ ಬೆಳಗ್ಗೆ 10.15ರಿಂದ 10.30ರವರೆಗೆ ಶುಭ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸುವಂತೆ ರೇವಣ್ಣ ಅವರು ಬಸವರಾಜ್ ಹೊರಟ್ಟಿ ಅವರಿಗೆ ಸಲಹೆ ನೀಡಿದ್ದಾರೆ. ಎಚ್.ಡಿ ರೇವಣ್ಣ ಸಲಹೆಗೆ ಬಸವರಾಜ್ ಹೊರಟ್ಟಿ ನಾಮಪತ್ರ ಸಲ್ಲಿಸಲಿದ್ದಾರೆ. 

'ಬಿಜೆಪಿ-ಜೆಡಿಎಸ್ ಮೈತ್ರಿ: ದೇವೇಗೌಡ್ರು ನನ್ನ ಸಲುವಾಗಿ ಈ ತೀರ್ಮಾನ‌ ಮಾಡಿದ್ರು'

ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಗುರುವಾರ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ತೆರವಾಗಿರುವ ಸಭಾಪತಿ ಹುದ್ದೆಗೆ ಇದೇ ಮಂಗಳವಾರ ಫೆಬ್ರವರಿ 9ರಂದು ನ ಚುನಾವಣೆ ನಡೆಯಲಿದೆ. ಸೋಮವಾರ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಮರುದಿನ ಚುನಾವಣೆ ನಡೆಯಲಿದೆ.

ಬಹುತೇಕ ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ನೂತನ ಸಭಾಪತಿಯಾಗಲಿದ್ದಾರೆ. ಯಾಕಂದ್ರೆ ಬಿಜೆಪಿ ಬೆಂಬಲದೊಂದಿಗೆ, ಬಿಜೆಪಿ 31 ಹಾಗೂ ಜೆಡಿಎಸ್‌ 13 ಸದಸ್ಯರ ಬಲದಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತಿದೆ.

click me!