ಪಕ್ಷದಿಂದ ದೂರ ಉಳಿದ ಜೆಡಿಎಸ್ ಶಾಸಕರ ಬಗ್ಗೆ ಕುಮಾರಸ್ವಾಮಿ ಖಡಕ್ ಮಾತು

By Suvarna NewsFirst Published Feb 6, 2021, 2:36 PM IST
Highlights

ಜೆಡಿಎಸ್ ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರ ಉಳಿದಿರುವ ಶಾಸಕರ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ

ಬೆಂಗಳೂರು, (ಫೆ.06): ಮುಂಬರರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಈಗಿನಿಂದಲೇ ಭರ್ಜರಿ ತಯಾರಿಸಿ ನಡೆಸಿದ್ದು, ವಲಯವರು ವೀಕ್ಷಕರನ್ನು ನೇಮಿಸಿದೆ. ಇದರ ಮಧ್ಯೆ ಜೆಡಿಎಸ್ ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರ ಉಳಿದುಕೊಂಡಿರುವ ಶಾಸಕರುಗಳಿಗೆ ಎಚ್‌ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕೆಲವು ಶಾಸಕರು ತುಂಬ ದೂರ ಹೋಗಿದ್ದಾರೆ. ಅವರ ಬಗ್ಗೆ ನಾನು ಪದೇ ಪದೇ ಮಾತನಾಡಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು.

ಜೆಡಿಎಸ್‌ನಿಂದ ದೂರ ಉಳಿದ ದೇವೇಗೌಡ ಉಚ್ಛಾಟನೆ ಸುಳಿವು ಕೊಟ್ಟ ಎಚ್‌ಡಿಕೆ

 ಈಗಾಗಲೇ ಹಲವರು ಅವರ ಜೊತೆ ಮಾತನಾಡಿದ್ದಾರೆ. ಅದರ ಬಗ್ಗೆ ನಾನು ಚಿಂತೆ ಮಾಡಲ್ಲ, ನನ್ನ ಮುಂದಿರೋದು ಪಕ್ಷ ಸಂಘಟನೆ ಮಾತ್ರ. ಕಾರ್ಯಕರ್ತರ ಜೊತೆ ಸೇರಿ ಪಕ್ಷ ಸಂಘಟನೆ ನನ್ನ ಗುರಿ ಎಂದು ಹೆಚ್ಡಿಕೆ ಅವರು ಪಕ್ಷದಿಂದ ದೂರ ಉಳಿದ ಶಾಸಕರಿಗೆ ಟಾಂಗ್ ಕೊಟ್ಟರು.

ಮೀಸಲಾತಿಗಾಗಿ ಶ್ರೀಗಳ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಸ್ವಾಮೀಜಿಗಳು ಹೋರಾಟ ಮಾಡುತ್ತಿದ್ದಾರೆ. ಅವರ ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಧಾರ ಮಾಡಬೇಕು. ಹೇಗೆ ಬೇಡಿಕೆ ಈಡೇರಿಸಬೇಕೆಂಬ ಬಗ್ಗೆ ನಿರ್ಧರಿಸಬೇಕು. ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

click me!