ಉಪಚುನಾವಣೆ ನಿಗದಿ: ಬಿಜೆಪಿಯಲ್ಲಿ ಬೇಗುದಿ, ಸಂಕಷ್ಟದಲ್ಲಿ ಲಕ್ಷ್ಮಣ್ ಸವದಿ..!

By Web Desk  |  First Published Oct 28, 2019, 10:00 PM IST

ರಾಜ್ಯದಲ್ಲಿ ಉಪಚುನಾವಣೆ ನಿಧಾನವಾಗಿ ರಂಗು ಪಡೆದುಕೊಳ್ಳುತ್ತಿದ್ದು, ಬಿಜೆಪಿಯಲ್ಲಿ ಬೇಗುದಿ ಶುರುವಾಗಿದೆ. ಇನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿ ಸೋತರೂ ಅವರಿಗೆ ಜಾಕ್ ಪಾಟ್ ಎನ್ನುವಂತೆ ಉಪಮುಖ್ಯಮಂತ್ರಿ ಹುದ್ದೆ ಒಲಿದಿದೆ. ಆದ್ರೆ ಇದೀಗ ಲಕ್ಷ್ಮಣ್ ಸವದಿ ಡಿಸಿಎಂ ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅರೇ ಏನಾಯ್ತು ಅಂತೀರಾ..ಮುಂದೆ ಓದಿ


ಬೆಂಗಳೂರು (ಅ.28): ಅನರ್ಹ ಶಾಸಕರಿಗೆ ಉಪಚುನಾವಣೆ ಟಿಕೆಟ್​ ಕೊಡುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯಲ್ಲಿ ಅಪಸ್ವರಗಳು ಕೇಳಿಬರುತ್ತಿವೆ. 

ಮೊನ್ನೇ ಹುಬ್ಬಳ್ಳಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರ ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ಅನರ್ಹರ ಶಾಸಕರಿಗೆ ಟಿಕೆಟ್ ಬೇಡ ಎಂದು ಮೂಲ ಬಿಜೆಪಿ ನಾಯಕರು ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

Latest Videos

undefined

ಇದ್ರಿಂದ ಪಕ್ಷದ ಉನ್ನತ ಸಭೆಯೊಳಗೆ ಅನರ್ಹರ ವಿರುದ್ಧ ವ್ಯಕ್ತವಾದ ಅಭಿಪ್ರಾಯಕ್ಕೆ ಯಡಿಯೂರಪ್ಪಗೆ ಶಾಕ್ ಆಗಿದ್ದು, ಏನು ಮಾಡಬೇಕು ಎನ್ನುವುದೇ ತಿಳಿಯದೇ ಸಿಎಂ ಅಡ್ಡಕತ್ತರಿತಲ್ಲಿ ಸಿಲುಕಿದ್ದಾರೆ.

ಇತ್ತ ಡಿಕೆಶಿಗೆ ಅದ್ಧೂರಿ ಸ್ವಾಗತ, ಅತ್ತ ಬಿಜೆಪಿ ಸಭೆಯಲ್ಲಿ ಅಸಮಾಧಾನ ಸ್ಫೋಟ

ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾಗಿರುವ ಅನರ್ಹ ಶಾಸಕರನ್ನು ಬಿಟ್ಟುಕೊಡುವಂತಿಲ್ಲ. ಒಂದು ವೇಳೆ ಅನರ್ಹರಿಗೆ ಟಿಕೆಟ್ ಕೊಟ್ಟರೇ ಸ್ಥಳೀಯ ಬಿಜೆಪಿ ನಾಯಕರ ಬೆಂಬಲ ಸಿಗದಿದ್ದರೆ ಸೋಲುಂಟಾಗುವ ಆತಂಕವೂ ಇದೆ. ಹಿನ್ನೆಲೆಯಲ್ಲಿ ಯಡಿಯೂರಪ್ಪಗೆ ದಿಕ್ಕುತೋಚದಂತಾಗಿದೆ.

ಸಭೆಯಲ್ಲಿ ನಡೆದಿದ್ದೇನು.?
ಅನರ್ಹ ಶಾಸಕರ ರಾಜೀನಾಮೆಯಿಂದಾಗಿಯೇ ನಾವು ಸರ್ಕಾರ ರಚನೆ ಸಾಧ್ಯವಾಗಿದ್ದು. ಈಗ ನೀವು ಅವರಿಗೆ ಟಿಕೆಟ್ ನೀಡಬೇಡಿ ಎಂದರೆ ಹೇಗೆ? ಎಂದು ನಾಯಕರಿಗೆ ಬಿಎಸ್ ವೈ ಪ್ರಶ್ನಿಸಿದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮೂಲ ಬಿಜೆಪಿಗರು ಅನರ್ಹರಿಗೆ ಟಿಕೆಟ್ ಕೊಟ್ಟರೇ ನಮ್ಮ ಗತಿ ಏನು ಎನ್ನುವ ಪ್ರಶ್ನೆಯನ್ನು ಬಿಎಸ್ ವೈ ಮುಂದಿಟ್ಟರು.

ಆದ್ರೆ ಕೊನೆ ತನಕವೂ ಅನರ್ಹ ಶಾಸಕರ ಪರ ಮಾತನಾಡಿದ ಬಿಎಸ್ ವೈ,  ಅನರ್ಹ ಶಾಸಕರಿಗೆ ಟಿಕೆಟ್ ಫೈನಲ್ ಎಂಬ ಸಂದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ. ಯಡಿಯೂರಪ್ಪ ಈ ಅಭಿಪ್ರಾಯದಿಂದಾಗಿ ಪಕ್ಷದೊಳಗೆ ಗೊಂದಲ ಮುಂದುವರಿದೆ.

ಸಂಕಷ್ಟದಲ್ಲಿ ಲಕ್ಷ್ಮಣ್ ಸವದಿ
ಹೌದು...2018ರ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಅಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಹೇಶ್ ಕುಮಟಳ್ಳಿ  ವಿರುದ್ಧ ಲಕ್ಷ್ಮಣ್ ಸವದಿ ಸೋಲುಕಂಡಿದ್ದರು. ಆದರೂ ಜಾಕ್ ಪಾಟ್ ಎನ್ನುವಂತೆ ಲಕ್ಷ್ಮಣ್ ಸವದಿಗೆ ಉಪಮುಖ್ಯಮಂತ್ರಿ ಹುದ್ದೆ ಒಲಿದಿದೆ.

ಆದ್ರೆ ಇದೀಗ ಲಕ್ಷ್ಮಣ್ ಸವದಿ ಡಿಸಿಎಂ ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅನರ್ಹರಿಗೆ ಬಿಜೆಪಿ ಟಿಕೆಟ್ ಫಿಕ್ಸ್ ಎನ್ನುವ ಯಡಿಯೂರಪ್ಪ ಅವರ ತಿರ್ಮಾನ ಜಾರಿಯಾದ್ರೆ ಲಕ್ಷ್ಮಣ ಸವದಿ ಅವರಿಗೆ ಅಥಣಿ ಟಿಕೆಟ್ ಕಟ್ ಆಗಲಿದೆ. ಅಷ್ಟೇ ಅಲ್ಲದೇ ಡಿಸಿಎಂ ಹುದ್ದೆ ಕೂಡ ಕೈತಪ್ಪುವುದು ಕಟ್ಟಿಟ್ಟ ಬುತ್ತಿ. ಒಂದು ವೇಳೆ ಕೋರ್ ಕಮಿಟಿಯ ತಿರ್ಮಾನ ಜಾರಿಯಾದ್ರೆ ಲಕ್ಷ್ಮಣ್ ಸವದಿ ಸೇಫ್ ಆಗಲಿದ್ದಾರೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಡಿಸಿಎಂ ಸವದಿಯವರಿಗೆ ಬಿಜೆಪಿ ಹೈಕಮಾಂಡ್ ಗಡಿಯ ಪ್ರಮುಖ ಜಿಲ್ಲೆಗಳಾದ ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳ ಉಸ್ತುವಾರಿ ನೀಡಿತ್ತು. ಈ ಜಿಲ್ಲೆಗಳಲ್ಲಿ ಕಮಲ ಪಕ್ಷ ತೀರ ಕಳಪೆ ಸಾಧನೆ ಮಾಡಿದೆ. ಇದೊಂದು ಅಮಶವೂ ಕೂಡ ಲಕ್ಷ್ಮಣ ಸವದಿಗೆ ಮುಳ್ಳಾದರೂ ಅಚ್ಚರಿ ಪಡುವಂತಿಲ್ಲ.

ಒಟ್ಟಿನಲ್ಲಿ ಬೈಲೆಕ್ಷನ್ ಟಿಕೆಟ್ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ಗೊಂದಲಗಳು ಉದ್ಭವಿಸಿದ್ದು, ಮುಂದಿನ ದಿನಗಳಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯುತ್ತವೆ ಎನ್ನುವುದನ್ನು ಕಾದು ನೋಡಬೇಕು.

ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಅನರ್ಹಗೊಂಡಿರುವ 17ರ ಪೈಕಿ 15 ವಿಧಾನಸಭೆಗಳಿಗೆ ಇದೇ ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 9ಕ್ಕೆ ಫಲಿತಾಂಶ ಹೊರಬೀಳಲಿದೆ. 

click me!