ನನ್ನ ತಂಗಿಯನ್ನು ನಿಮ್ಮ ಮಡಿಲಿಗೆ ಹಾಕುತ್ತೀದ್ದೇನೆ. ದಿ.ಶಿವಾನಂದ ಪಾಟೀಲ ಅವರ ಆತ್ಮಕ್ಕೆ ಶಾಂತಿ ನೀಡುವ ಹಾಗೆ ಸಿಂದಗಿ ಜನತೆ ಮಾಡಬೇಕು ಎಂದು ಮನವಿ ಮಾಡಿಕೊಂಡ ಎಚ್.ಡಿ. ಕುಮಾರಸ್ವಾಮಿ
ಸಿಂದಗಿ(ಫೆ.03): 2023ರ ವಿಧಾನ ಸಭಾ ಚುನಾವಣೆಯ ಸಿಂದಗಿ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ದಿ.ಶಿವಾನಂದ ಪಾಟೀಲ ಅವರ ಪತ್ನಿ ವಿಶಾಲಾಕ್ಷಿ ಪಾಟೀಲ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು.
ಪಟ್ಟಣದ ಶಹಾಪೂರ ಪೆಟ್ರೋಲ್ ಪಂಪ ಹತ್ತಿರ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಿ.ಶಿವಾನಂದ ಪಾಟೀಲರು ನನಗೊಂದು ಮಾತು ಹೇಳಿದ್ದರು, ನಿಮ್ಮ ಪ್ರೀತಿ, ಸಹಕಾರ ನನ್ನ ಮೇಲೆ ಇದ್ದರೆ ನನಗೊಂದು ಅವಕಾಶ ನೀಡಿ. ನಿಮ್ಮ 123ರ ಕನಸಿನ ಹಾಗೆ ನಾನೊಬ್ಬ ಶಾಸಕನಾಗಿ ನಿಮ್ಮ ಜೊತೆಗೆ ವಿಧಾನಸೌಧದ ಮೆಟ್ಟಿಲೇರುವೆ ಎಂಬ ಶಕ್ತಿಯನ್ನು ತುಂಬಿದ್ದರು. ಆದರೆ ಜ.20ರಂದು ಜೆಡಿಎಸ್ ಅಭ್ಯರ್ಥಿಯಾಗಿದ್ದ ದಿ.ಶಿವಾನಂದ ಪಾಟೀಲ್ ಅವರ ಅಕಾಲಿಕವಾಗಿ ಮರಣ ಹೊಂದಿದರು. ಈ ಹಿನ್ನಲೆಯಲ್ಲಿ ಸಿಂದಗಿಯಲ್ಲಿ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮಕ್ಕೆ ನಾನು ಕೇವಲ ಶಿವಾನಂದ ಪಾಟೀಲರಿಗೆ ಶ್ರದ್ಧಾಂಜಲಿ ಅಥವಾ ನುಡಿ ನಮನ ಸಲ್ಲಿಸಲು ಬಂದಿಲ್ಲ. ಈ ನನ್ನ ತಂಗಿಯನ್ನು ನಿಮ್ಮ ಮಡಿಲಿಗೆ ಹಾಕುತ್ತೀದ್ದೇನೆ. ದಿ.ಶಿವಾನಂದ ಪಾಟೀಲ ಅವರ ಆತ್ಮಕ್ಕೆ ಶಾಂತಿ ನೀಡುವ ಹಾಗೆ ಸಿಂದಗಿ ಜನತೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
undefined
Vijayapura: ಚುನಾವಣೆಗಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಪೊಲೀಸ್ ಅಧಿಕಾರಿ!
ಇದೇ ವೇಳೇ ಶಾಸಕ ಬಂಡೆಪ್ಪ ಕಾಶಂಪೂರ, ದೇವಾನಂದ ಚವ್ಹಾಣ, ಹಿರಿಯ ನಾಯಕ ಬಿ.ಡಿ.ಪಾಟೀಲ ನುಡಿನಮನ ಸಲ್ಲಿಸಿ ಮಾತನಾಡಿದರು.
ಶಿವಾನಂದ ಪಾಟೀಲರ ಮಗ ರಕ್ಷೀತ ಪಾಟೀಲ, ಸುನಿತಾ ಚವ್ಹಾಣ, ವಿ.ಕೆ.ಪಾಟೀಲ, ಬಿ.ಜಿ.ಪಾಟೀಲ, ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಸುನಿತಾ ಚವ್ಹಾಣ, ತಾಲೂಕು ಅಧ್ಯಕ್ಷ ದಾನಪ್ಪಗೌಡ ಚನಗೊಂಡ, ರಾಜಣ್ಣಿ ನಾರಾಯಣಕರ, ಗೊಲ್ಲಾಳಪ್ಪಗೌಡ ಪಾಟೀಲ, ಪ್ರಕಾಶ ಹಿರೇಕುರುಬರ, ಜ್ಯೋತಿ ಗುಡಿಮನಿ, ಮಹಮದಸಾಬ್ ಉಸ್ತಾದ್, ನಿಂಗರಾಜ ಬಗಲಿ, ಸಂತೋಷ ಶಿರಕನಳ್ಳಿ ವೇಂಕಟೇಶ ನಾಡಗೌಡ, ಬಸವರಾಜ ಹೊನವಾಡ, ಎಸ್.ವಿ.ಪಾಟೀಲ, ಮಾಜಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಮಾಜಿ ಸೈನಿಕ ಸಂಘದ ತಾಲೂಕು ಅಧ್ಯಕ್ಷ ಶ್ರೀಶೈಲ ಯಳಮೇಲಿ, ರಾಜುಗೌಡ ಪಾಟೀಲ, ಸಂಜು ಹಿರೇಮಠ ಮತ್ತಿತರಿದ್ದರು.