
ರಾಮನಗರ (ಆ.04): ಕುಮಾರಸ್ವಾಮಿ ಅವರೇ ಈ ಭಾಗದಲ್ಲಿ ನೀವು ಆಯ್ಕೆ ಆಗಿದ್ದೀರಿ. ಇಲ್ಲಿ 6 ವರ್ಷ ಅಧಿಕಾರ ಮಾಡಿದ್ದೀರಿ. ನೀವು ರೈತನ ಮಗನೆಂದು ಪಾಪ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ. ನಮ್ಮ ಕಡೆ ಒಂದು ಗಾದೆ ಇದೆ. ಹುಟ್ಟಿದ ಕರುಗಳೆಲ್ಲಾ ಗೂಳಿ ಆಗಲು ಸಾಧ್ಯವಿಲ್ಲ. ಅದೇ ರೀತಿ ಪಂಚೆ ಹಾಕಿದವರೆಲ್ಲಾ ರೈತರಾಗಲು ಸಾಧ್ಯವಿಲ್ಲ, ಆದರೆ, ನಾನು ಹುಟ್ಟಿನಿಂದಲೇ ರೈತನಾಗಿದ್ದೇನೆ. ನನ್ನ ಮೇಲೆ, ನನ್ನ ಕುಟುಂಬದಲ್ಲಿ ತಮ್ಮ, ಹೆಂಡತಿ ಮೇಲೆ ಕೇಸ್ ಹಾಕಿಸಿ ನನ್ನನ್ನು ಜೈಲಿಗೆ ಹಾಕಿಸಿದ್ದೆ. ಈಗ ನೀನು ಮಾಡಿದ ಎಲ್ಲ ಅಕ್ರಮಗಳನ್ನು ಪಟ್ಟಿ ಮಾಡಿಸುತ್ತಿದ್ದೇನೆ. ಅದರ ಬಗ್ಗೆಯೂ ತನಿಖೆ ಆಗುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ಮಾಡಿದರು.
ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಪಾಪ ವಿಮೋಚನೆ ಪಾದಯಾತ್ರೆಯಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಕೊಡಿ. ಕುಮಾರಸ್ವಾಮಿ ಅವರೇ ಈ ಭಾಗದಲ್ಲಿ ನೀವು ಆಯ್ಕೆ ಆಗಿದ್ರಿ. ಇಲ್ಲಿ 6 ವರ್ಷ ಅಧಿಕಾರ ಮಾಡಿದ್ರಿ. ನೀವು ರೈತನ ಮಗ ಪಾಪ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ. ನಮ್ಮ ಕಡೆ ಒಂದು ಗಾದೆ ಇದೆ. ಹುಟ್ಟಿದ ಕರು ಎಲ್ಲಾ ಗೂಳಿ ಆಗಲು ಸಾಧ್ಯವಿಲ್ಲ. ಹಾಗೆ ಎಲ್ಲರೂ ರೈತರಾಗಲು ಸಾಧ್ಯವಿಲ್ಲ. ಕುಮಾರಣ್ಣ ನಿನ್ನ ಕೈಯಲ್ಲಿ ಬಡವರಿಗೆ ಜಮೀನು ಕೊಡಲು ಆಗಲಿಲ್ಲ. ಒಂದು ಸೈಟ್ ಹಂಚಿಕೆ ಮಾಡಿಲ್ಲ. ನಾನು ಈ ಕ್ಷೇತ್ರದಲ್ಲಿ ಬಂದು ಜನಸಂದರ್ಶನ ಸಭೆ ಮಾಡಿದ್ದೆ. 22 ಸಾವಿರ ಜನ ಬಂದು ಅರ್ಜಿ ಕೊಟ್ಟಿದ್ದಾರೆ. ಕುಮಾರಸ್ವಾಮಿ ಇಷ್ಟು ದಿನ ಇಲ್ಲಿ ಏನು ಮಾಡಿದ್ರಿ.? ಮುಂದೆ ಇಲ್ಲಿ ಉಪಚುನಾವಣೆ ಇದೆ. ಇದಕ್ಕೆ ತಕ್ಕ ಉತ್ತರ ಕೊಡಬೇಕು ಎಂದು ಟೀಕಿಸಿದರು.
ಕುಮಾರಸ್ವಾಮಿ ಪ್ಯಾಂಟಿನೊಳಗೆ ಖಾಕಿ ಚೆಡ್ಡಿ ಇದೆ; ಅವರ ಆಸ್ತಿಯಿಂದ 3 ಬಜೆಟ್ ಮಾಡಬಹುದು: ಸಚಿವ ಜಮೀರ್ ಅಹಮ್ಮದ್
ಕುಮಾರಣ್ಣ ನನ್ನ ಪ್ರಶ್ನೆಗೆ ಉತ್ತರ ಕೊಡಬೇಕು. ಬಾಲಕೃಷ್ಣ ನಿನ್ನ ಸಹೋದರ ಅಲ್ವಾ? ನಿನ್ನ ತಂದೆ, ಪತ್ನಿ, ಕುಟುಂಬ, ಸಹೋದರ ಎಷ್ಟು ಆಸ್ತಿ ಮಾಡ್ತಿದ್ದಾರೆ ಉತ್ತರ ಕೊಡಿ. ಒಬ್ಬ ಸರ್ಕಾರಿ ನೌಕರ ಎಷ್ಟು ಆಸ್ತಿ ಮಾಡಲು ಸಾಧ್ಯ ಉತ್ತರ ಕೊಡಬೇಕು. ನಾನು ಬೈ ಬರ್ತ್ ರೈತ, ನೀವು ಎಷ್ಟು ಬೆಳೆ ಬೆಳೆದಿದ್ದೀರಿ ಹೇಳಿ. ನನ್ನನ್ನ ಕಲ್ಲುಕಳ್ಳ, ಕಲ್ಲು ಲೂಟಿ ಮಾಡಿದ್ದಾನೆ ಅಂದ್ರಿ. ನನ್ನ ಮೇಲೆ, ನನ್ನ ತಮ್ಮನ ಮೇಲೆ, ನನ್ನ ಪತ್ನಿ ಮೇಲೆ ಕೇಸ್ ಹಾಕಿಸಿದ್ದಲ್ಲ. ನನ್ನನ್ನ ಜೈಲಿಗೆ ಹಾಕಿದ್ದಾಗ ಬಂದು ನೀನು ನೋಡಿದ್ದೆ. ಆಗ ನನ್ನ ಆತ್ಮಸ್ಥೈರ್ಯ ಹೇಗಿತ್ತು ನೋಡಿದ್ದೆ ಅಲ್ವಾ.? ನನ್ನ ಹಾಗೂ ನನ್ನ ಕುಟುಂಬ ಮೇಲೆ ಹಾಕಿದ್ದ ಕೇಸ್ ವಜಾ ಆಗಿದೆ ಗೊತ್ತಾ.? ಹಾಗೆ ನಿನ್ನ ಅಕ್ರಮವನ್ನೂ ಪಟ್ಟಿ ಮಾಡಿಸ್ತಿದ್ದೀನಿ. ಅದರ ಬಗ್ಗೆಯೂ ತನಿಖೆ ಆಗುತ್ತದೆ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ 56 ಬಾರಿ ರಾಜಭವನವನ್ನು ದುರುಪಯೋಗ ಮಾಡಿಕೊಂಡು ಸರ್ಕಾರ ಉರುಳಿಸಿದೆ: ಬಸವರಾಜ ಬೊಮ್ಮಾಯಿ
ಹಿಟ್ ಅಂಡ್ ರನ್ ಕುಮಾರಸ್ವಾಮಿ ನೀನು. ನೀನು ಎಲ್ಲರನ್ನೂ ಹೆದರಿಸಿದ ಹಾಗೆ ಬಿಜೆಪಿಯವರನ್ನೂ ಹೆಸರಿಸಲು ಹೋದೆ. ಪಾದಯಾತ್ರೆ ಬಗ್ಗೆ ನೀನೊಂದು ಮಾತು, ನಿನ್ನ ಮಗ ಒಂದು ಮಾತು, ಜಿಟಿಡಿ ಒಂದು ಮಾತು ಹೇಳಿದ್ದೀರಿ. ಈಗ ಪಾದಯಾತ್ರೆಗೆ ಬಂದು ಹೆಜ್ಜೆ ಹಾಕ್ತಿದ್ದೀಯಾ.? ನಿನಗೆ ನೈತಿಕತೆ ಇದ್ಯಾ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಡಿ.ಕೆ. ಶಿವಕುಮಾರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.