ಆರ್‌ಎಸ್‌ಎಸ್ ನಪುಂಸಕ ಸಂಘ ಎಂದು ಸಿದ್ದರಾಮಯ್ಯ ಕರೆದಿದ್ದು ನಪುಂಸಕರಿಗೆ ಮಾತ್ರ ನಪುಸಂಕ ಏನು ಎಂಬುದು ಗೊತ್ತು ಎಂದು ಮಾಜಿ ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ತಿರುಗೇಟು ನೀಡಿದ್ದಾರೆ.
ವರದಿ: ರಾಜೇಶ್ ಕಾಮತ್, ಶಿವಮೊಗ್ಗ
ಶಿವಮೊಗ್ಗ (ಮೇ.29): ಆರ್‌ಎಸ್‌ಎಸ್ ನಪುಂಸಕ ಸಂಘ ಎಂದು ಸಿದ್ದರಾಮಯ್ಯ ಕರೆದಿದ್ದು ನಪುಂಸಕರಿಗೆ ಮಾತ್ರ ನಪುಸಂಕ ಏನು ಎಂಬುದು ಗೊತ್ತು ಎಂದು ಮಾಜಿ ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ಹುಲಿ, ಸಿಂಹ ಮತ್ತು ರಾಷ್ಟ್ರಭಕ್ತರನ್ನ ಹುಟ್ಟಿಹಾಕುವ ಆರ್‌ಎಸ್‌ಎಸ್‌ನ್ನ ಕಾಂಗ್ರೆಸ್ ನಪುಂಸಕ ಎಂದು ಕರೆದಿದೆ. ನಪುಂಸಕರಿಗೆ ಮಾತ್ರ ನಪುಸಂಕತೆಯ ಪರಿಚಯವಿರುತ್ತದೆ ಎಂದು ಹೇಳಿದರು. ಈಶ್ವರಪ್ಪ ಏಕವಚನ ಬಳಸಿ ನನ್ನನ್ನ ಟೀಕಿಸಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ಪ್ರಾಣಿ ಮೃಗಕ್ಕೆ ಹೋಲಿಸಿದ್ದಾರೆ.
ಇದೇ ಸಿದ್ದರಾಮಯ್ಯ ಪ್ರಧಾನಿ ಮೋದಿಯವರನ್ನ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನ ಏಕವಚನ ಬಳಿಸಿದ್ರಲ್ಲಾ ಆಗ ಇವರು ಯಾವ ಪ್ರಾಣಿ ಆಗಿದ್ದರು. ಖರ್ಗೆ ಅವರು ಹೆಗಡೇವಾರ್‌ನ್ನ ಯಾರೀ ಅವ್ನು ಎಂದರು. ಆಗ ಇವರು ಯಾವ ಪ್ರಾಣಿ ಎಂದು ವ್ಯಂಗ್ಯವಾಡಿದರು. ಕಾಶಿಯಲ್ಲಿ ಮಸೀದಿಯಲ್ಲಿ ದೇವಸ್ಥಾನ ಇತ್ತು, ಮಂಗಳೂರಿನಲ್ಲೂ ದೇವಸ್ಥಾನ ಇದೆ. ತಾಜ್ ಮತ್ತು ಕುತುಬ್ ಬಿನಾರ್ ನಲ್ಲೂ ದೇವಸ್ಥಾನ ಎಂಬುದು ಹೊರಬರುತ್ತಿದೆ. ಕಾಂಗ್ರೆಸ್ ಆಡಳಿತ ನಡೆಸಿದ 75 ವರ್ಷ ನಪುಂಸಕತೆಯಿಂದ ನಡೆಸಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಆರ್ ಎಸ್ ಎಸ್ ನ್ನ ನಪುಸಂಕ ಎಂಬ ಹೇಳಿಕೆಯನ್ನ ಹಿಂಪಡೆಯಬೇಕು.
Shivamogga: ದೇಶಭಕ್ತಿ ಮತ್ತು ಹೊಣೆಗಾರಿಕೆಯಿಂದ ಬದುಕಬೇಕು: ಸಚಿವ ಆರಗ ಜ್ಞಾನೇಂದ್ರ
ವಿಜಯದಶಮಿಗೆ ಆರ್‌ಎಸ್‌ಎಸ್ ಹುಟ್ಟಿ 100 ವರ್ಷ ಆಯಿತು. ಬ್ರಿಟೀಷರು ಆರ್‌ಎಸ್‌ಎಸ್‌ನಿಂದ ಭಾರತಕ್ಕೆ ಬಂದರು ಎಂದು ಸಿದ್ದರಾಮಯ್ಯ ಮಾಹಿತಿ ಇಲ್ಲದೆ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರ ತಲೆಯಲ್ಲಿ ಸಗಣಿ ಬಿಟ್ರೆ ಏನೂ ಇದ್ದಂಗೆ ಇಲ್ಲ. ಬ್ರಿಟಿಷರು ಬಂದು 600 ವರ್ಷ ಆಯಿತು. ಎಲ್ಲಿನಆರ್‌ಎಸ್‌ಎಸ್ ಎಲ್ಲಿನ ಬ್ರಿಟೀಷರು ಎಲ್ಲಿ ಎಂದರು. ಆರ್‌ಎಸ್‌ಎಸ್‌ನಿಂದ ಹಿಂದೂಗಳು ಜಾಗೃತರಾಗಿದ್ದಾರೆ. ಹಾಗಾಗಿ ಎಲ್ಲಾ ವಿಷಯಗಳು ಹೊರಬರುತ್ತಿದೆ. ವಿದೇಶಿ ಕೈಯಲ್ಲಿ ಕಾಂಗ್ರೆಸ್‌ನವರು ಇದ್ದಾರೆ. ಇಂದಿರಾ ಗಾಂಧಿಯ ಪತಿ ಯಾರು? ಸೋನಿಯಾ ಗಾಂಧಿ ಯಾರು? ಇವರೆಲ್ಲಾ ವಿದೇಶಿಗರು ಎಂದರು.
ನಪುಸಂಕ ಕಾಂಗ್ರೆಸ್ ಪಕ್ಷವೇ ಹೊರತು ಆರ್‌ಎಸ್‌ಎಸ್ ಅಲ್ಲ. ಆರ್‌ಎಸ್‌ಎಸ್ ಹುಲಿ ಮತ್ತು ಸಿಂಹನನ್ನ ಹುಟ್ಟಿಹಾಕುವ ಸಂಘ ಎಂದರು. ನಿಮ್ಮ ಮಾತಿನಿಂದ ರಾಷ್ಟ್ರಭಕ್ತರು,ಸಾಧು ಸಂತರು ಬೇಸರಗೊಂಡಿದ್ದಾರೆ ಸಿದ್ದರಾಮಯ್ಯ ಕ್ಷಮೆಕೇಳಬೇಕು. ಇಲ್ಲ ಅಂದರೆ ನಿಮ್ಮ ಇಷ್ಟ ಏನಾದರೂ ಮಾಡಿಕೊಳ್ಳಿ ಎಂದು ಹೇಳಿದರು. ರಾಷ್ಟ್ರಧ್ವಜ ವಿಚಾರದಲ್ಲಿ ಕಾಂಗ್ರೆಸ್ ತನ್ನ ತಪ್ಪನ್ನ ಮುಚ್ಚಿಕೊಳ್ಳಲು ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜ ಇಟ್ಟುಕೊಂಡು ಅಪಮಾನ ಮಾಡುತ್ತಿದೆ. ಈ ದೇಶದಲ್ಲಿ ಭಗವಾ ಧ್ವಜಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಅದು ತ್ಯಾಗದ ಸಂಕೇತ ಹಾಗಾಗಿ ನಾವು ಪ್ರಾರ್ಥನೆ ಮಾಡುತ್ತೇವೆ.
ಮುಂದಿನ ದಿನಗಳಲ್ಲಿ ಭಗಧ್ವಜವನ್ನ ಹಾರಿಸುವ ಸಂದರ್ಭ ಒದಗಿಬರುತ್ತದೆ. ಆದರೆ ಈಗ ರಾಷ್ಟ್ರಧ್ವಜಕ್ಕೆ ಬೆಲೆ ನೀಡಿ ಗೌರವ ಕೊಡುವುದು ನಮ್ಮ ಧರ್ಮ ಮತ್ತು ಕರ್ತವ್ಯ ಅದನ್ನ ಮಾಡುತ್ತಿದ್ದೇವೆ ಎಂದರು. ಬಿಜೆಪಿಗೆ ಆರ್‌ಎಸ್‌ಎಸ್ ಮಾತೃ ಸಂಘ. ಬಿಜೆಪಿಯವರೆಲ್ಲಾ ತಾಯಿಗೆ ಗೌರವಕೊಡುವುದು ನಮ್ಮ ಧರ್ಮ ಮತ್ತು ಕರ್ತವ್ಯವಾಗಿದೆ. ಆರ್ ಎಸ್ ಎಸ್ ಗೆ ಕಠೋರವಾಗಿ ಟೀಕಿಸುವ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ನಿರ್ನಾಮವಾಗುತ್ತದೆ ಎಂದರು. ಸಿದ್ದರಾಮಯ್ಯ ಮತ್ತು ಓವೈಸಿ ಇಬ್ವರಿಗೂ ವ್ಯತ್ಯಾಸವಿಲ್ಲ. ಓವೈಸಿ ವಿದೇಶದಿಂದ ಬಂದ ಮೊಘಲರ ಸಂತತಿ. ನೀವು ಆ ಸಂತತಿನಾ ಎಂದು ಪ್ರಶ್ನಿಸಿದ ಮಾಜಿ ಸಚಿವರು, ಮುಸ್ಲೀಂರನ್ನ ಓಟ್ ಬ್ಯಾಂಕ್ ಮಾಡಿಕೊಂಡ ಕಾಂಗ್ರೆಸ್ ಈ ರೀತಿ ಟೀಕೆ ಟಿಪ್ಪಣಿ ಮಾಡಿಕೊಂಡು ಬರುತ್ತಿದ್ದಾರೆ.
ರಾಷ್ಟ್ರಭಕ್ತರಲ್ಲಿ ಮುಸ್ಲೀಮರು ಇದ್ದಾರೆ. ಅಂತವರು ಬಿಜೆಪಿ ಜೊತೆ ಬನ್ನಿ ಎಂದು ಕರೆ ನೀಡಿದರು. ಒಬ್ಬರು ತಪ್ಪು ಮಾಡಿದರೆ ಇಡೀ ಪಕ್ಷ ತಪ್ಪು ಮಾಡಿದಂತಲ್ಲ. ಡಿಕೆಶಿ ಜೈಲಿಗೆ ಹೋಗಿ ಬಂದ್ರು ಹಾಗಂತ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡಲು ಆಗುತ್ತಾ? ಹಾಗೆ ಪಿಎಸ್ ಐ ಪ್ರಕರಣವನ್ನ ನೋಡಬೇಕಿದೆ. ದಿವ್ಯ ಹಾಗರಗಿ ತಪ್ಪುಮಾಡಿದರೆ ಇಡೀ ಬಿಜೆಪಿ ತಪ್ಪು ಎಂದು ಬಿಂಬಿಸುವುದು ಮೂರ್ಖತನವೆಂದರು. ಒಮ್ಮೆ ಆರ್‌ಎಸ್‌ಎಸ್ ಶಾಖೆಗೆ ಬಂದು ಸಿದ್ದರಾಮಯ್ಯ ಅರ್ಥ ಮಾಡಿಕೊಂಡು ಮಾತನಾಡಲಿ. ಆರ್‌ಎಸ್‌ಎಸ್‌ನಲ್ಲಿ ಎಷ್ಟು ಜನ ದಲಿತ ಇದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೆಳದಿ ಚೆನ್ನಮ್ಮನ ಏಟಿಗೆ ನುಚ್ಚುನೂರಾಗಿ ಓಡಿಹೋದ ಔರಂಗಜೇಬನ ಸೈನ್ಯ : BY raghavendra
ಆರ್‌ಎಸ್‌ಎಸ್‌ನಲ್ಲಿ ದಲಿತ ಮೇಲ್ಜಾತಿ ಅಂತ ಇಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ದ್ರಾವಿಡ ಮತ್ತು ಆರ್ಯರು ಎಂದು ಒಡೆದು ಆಳಲಾಗುತ್ತಿದೆ.ಮುಸ್ಲೀಂರ ವಿಷಯವೆಲ್ಲಾಹೊರಗೆ ಬರುತ್ತಿರುವ ವೇಳೆ ಹಿಂದೂ ಸಮಾಜದಲ್ಲಿನ ವೀಕ್‌ನೆಸ್‌ನ್ನ ಎತ್ತಿ ಹಿಡಿಯುವ ಪ್ರಯತ್ನಕ್ಕೆ ಡಿಕೆಶಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದರು. ಕುವೆಂಪುರವರ ನಾಡಗೀತೆಯನ್ನ ಅಪಮಾನ ಮಾಡಬಾರದು. ಚಕ್ರತೀರ್ಥರು ಅಪಮಾನ ಮಾಡಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇದನ್ನ ಸಿಎಂ ನೋಡಿಕೊಳ್ಳುತ್ತಾರೆ ಎಂದರು.