ಮೋದಿ ಪುಕ್ಕಲು ಗುರು ಎಂದ ಸಿದ್ದರಾಮಯ್ಯನವರ ಟ್ವಿಟ್‌ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ
ವಿಜಯಪುರ(ಅ.14): ಪಾಕಿಸ್ತಾನಕ್ಕೆ ಕೇಳಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಗುರು ಎಂಬುವುದು ಗೊತ್ತಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ವಿಶ್ವಗುರು ಅಲ್ಲ, ಪುಕ್ಕಲು ಗುರು ಎನ್ನುವ ಸಿದ್ಧರಾಮಯ್ಯ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದರು. ಸರ್ಜಿಕಲ್ ಸ್ಟ್ರೈಕ್ ಆಯ್ತು, ಅದು ಅವರಿಗೆ ಗೊತ್ತಿರಲಿಲ್ಲ. ಅದಾದ ಮೇಲೆ ಒಂದು ಹೆಜ್ಜೆ ಕೂಡಾ ಅವರು ಮುಂದೆ ಬಂದಿಲ್ಲ. ಪುಕ್ಕಲು ಯಾರು ಎಂಬುವುದು ಇಡೀ ವಿಶ್ವ ನೋಡುತ್ತದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮುಂಚೆ ಇಡೀ ವಿಶ್ವವೇ ಪಾಕಿಸ್ತಾನದ ಜೊತೆ ಇತ್ತು. ಭಾರತ ಒಬ್ಬಂಟಿಯಾಗಿತ್ತು. ಈಗ ಅದು ಬದಲಾಗಿದೆ. ಇಂದು ಎಲ್ಲರೊಂದಿಗೆ ಸ್ನೇಹ ಬೆಳೆಸಿ ಶಸ್ತ್ರಾಸ್ತ್ರ ಹೆಚ್ಚಿಸಿಕೊಂಡು ರಕ್ಷಣಾ ಖಾತೆಗೆ ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಮೀಸಲು ಇಟ್ಟಿದ್ದಾರೆ. ಇಂದು ಇಡೀ ವಿಶ್ವ ಭಾರತದೊಂದಿಗೆ ಇದೆ. ಈಗ ಪಾಕಿಸ್ತಾನವೇ ಒಬ್ಬಂಟಿಯಾಗಿದೆ. ಈಗ ಪಾಕಿಸ್ತಾನವೇ ಮೋದಿಗೆ ಹೆದರಬೇಕಾದರೇ ಇನ್ನು ಸಿದ್ದರಾಮಯ್ಯ ಯಾವ ಲೆಕ್ಕ ಎಂದು ಈಶ್ವರಪ್ಪ ಪ್ರಶ್ನಿಸಿದರು.
undefined
VIJAYANAGARA: ಜಿಲ್ಲೆಯವರು ಸಿಎಂ ಆಗಲ್ಲ, ಇಲ್ಲಿಯವರು ಶಾಸಕರಾಗಲ್ಲ: ಶಿವಾನಂದ ಪಾಟೀಲ
ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ಸæೂೕನಿಯಾ ಗಾಂಧಿ ಶೂ ಲೇಸ್ ಬಿಚ್ಚಿದಾಗ ಅವರ ಮಗ ರಾಹುಲ್ ಗಾಂಧಿ ಕೆಳಗೆ ಕುಳಿತು ಲೇಸ್ ಹಾಕಿದ್ದನ್ನು ಇಡೀ ದೇಶವೇ ನೋಡಿತು. ಇದು ನನಗೆ ಹೆಚ್ಚು ಮೆಚ್ಚುಗೆ ತಂದಿದೆ. ಅದು ಬಿಟ್ಟರೆ ಭಾರತ ಜೋಡೋದಿಂದ ಮತ್ತೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ರಾಹುಲ್ ಗಾಂಧಿ ನಡುವಳಿಕೆಯನ್ನು ಈಶ್ವರಪ್ಪ ಕೊಂಡಾಡುವ ಮೂಲಕ ಅಚ್ಚರಿ ಮೂಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅಲ್ಪಸಂಖ್ಯಾತರಿಗೆ ಬರೀ ಭರವಸೆ ನೀಡಿ ಅಧಿಕಾರ ಚಲಾವಣೆ ಮಾಡುತ್ತ ಬಂದಿತ್ತು. ಈಗ ಅಲ್ಪಸಂಖ್ಯಾತರಿಗೂ ಕಾಂಗ್ರೆಸ್ ಪಕ್ಷ ಏನಿದೆ ಎಂಬುವುದು ಗೊತ್ತಾಗಿದೆ. ಹೀಗಾಗಿ ಅಲ್ಪ ಸಂಖ್ಯಾತರೂ ಕೂಡಾ ಬಿಜೆಪಿ ಕಡೆಗೆ ಒಲವು ತೋರಿಸುತ್ತಿದ್ದಾರೆ. ಇದು ಕಾಂಗ್ರೆಸ್ ನಿರ್ನಾಮವಾಗಿರುವ ಸಂಕೇತವಾಗಿದೆ ಎಂದು ತೀವ್ರವಾಗಿ ಖಂಡಿಸಿದರು.
ಕಾಂಗ್ರೆಸ್ ನಲ್ಲಿ ಭಿನ್ನಮತ ಹೆಚ್ಚಾಗಿದೆ ಅದನ್ನು ಹೇಳುತ್ತಿದ್ದರೆ, ಎ.ಬಿ.ಸಿ ಎಂದು ಪಟ್ಟಿಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಈಗಾಗಲೇ ಎರಡು ಗುಂಪುಗಳಾಗಿವೆ. ಒಂದು ಸಿದ್ದರಾಮಯ್ಯನವರ ಗುಂಪು. ಇನ್ನೊಂದು ಡಿ.ಕೆ. ಶಿವಕುಮಾರ ಅವರ ಗುಂಪು ಆಗಿದೆ. ಆದರೆ, ಸಿದ್ದರಾಮಯ್ಯ ನಮ್ಮಲ್ಲಿ ಎಲ್ಲಿ ಗುಂಪು ಎನ್ನುತ್ತಾರೆ. ಹಿಂದೆ ಸಿದ್ದರಾಮಯ್ಯ ಸಿಎಂ ಅಂಥ ಬಿಂಬಿಸಿಕೊಳ್ಳುತ್ತಿದ್ದಾರೆ. ಇತ್ತ ಡಿ.ಕೆ.ಶಿವಕುಮಾರ ಅವರು, ಒಕ್ಕಲಿಗರು ನನ್ನ ಬೆನ್ನ ಹಿಂದೆ ನಿಲ್ಲಿ ಎಸ್.ಎಂ. ಕೃಷ್ಣ ಆದ ಮೇಲೆ ನಮ್ಮವರಿಗೆ ಸಿಎಂ ಸ್ಥಾನದ ಅವಕಾಶವಿದೆ ಎನ್ನುತ್ತಾರೆ. ಇಷ್ಟುಜಾತಿವಾದಿ ಪಕ್ಷ ಹಿಂದೆ ಎಂದೂ ಆಗಿರಲಿಲ್ಲ , ಇಂಥ ಜಾತಿವಾದಿಯಿಂದ ಗುಂಪುಗಾರಿಕೆ ಹೆಚ್ಚಾಗಿದೆ. ಹೀಗಾಗಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂದು ತಿಳಿಸಿದರು.
ಬೇಗ ಸಚಿವ ಸ್ಥಾನ
ಈಗಾಗಲೇ ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರವಾಗಿದೆ. ನಾನು ಸಚಿವನಾಗುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಜತೆ ಮಾತುಕತೆ ನಡೆಸಿದ್ದು, ಖಂಡಿತವಾಗಿಯೂ ಶೀಘ್ರದಲ್ಲಿಯೇ ಸಚಿವನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಪ್ರಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಹಿಂದಿಕ್ಕಿದ ಆಮ್ ಆದ್ಮಿ..!
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಚ್‌ನ ದ್ವಿಸದಸ್ಯ ಪೀಠ ವಿಭಿನ್ನ ಅಭಿಪ್ರಾಯ ನೀಡುವುದರ ಜೊತೆಗೆ ಸಂವಿಧಾನಾತ್ಮಕ ಪೀಠಕ್ಕೆ ವರ್ಗಾಯಿಸಿದ್ದು, ಮುಂದೆ ಐದು ಅಥವಾ ಏಳು ನ್ಯಾಯಾಧೀಶರನ್ನೊಳಗೊಂಡ ಪೀಠ ಈ ಬಗ್ಗೆ ತೀರ್ಪು ನೀಡುತ್ತದೆ ಎಂದು ಪ್ರತಿಕ್ರಿಯಿಸಿದರು.
ಹಿಜಾಬ್ ಪ್ರಕರಣವನ್ನು ಇಡೀ ಪ್ರಪಂಚವೇ ಗಮನಿಸುತ್ತಿದೆ.ಇಡೀ ದೇಶದ ಜನ ಒಂದು ರೀತಿಯಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವ ಚರ್ಚೆಯಲ್ಲಿ ತೊಡಗಿದ್ದಾರೆ. ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯ ಇಲ್ಲ, ಇದು ಕುರಾನ್‌ನಲ್ಲೂ ಇಲ್ಲ. ಹೀಗಾಗಿ ಹೈಕೋರ್ಚ್ ತೀರ್ಪು ನೀಡಿದಾಗಲೇ ಮುಸ್ಲಿಂ ಮುಖಂಡರು ಆ ಆರು ಹೆಣ್ಣು ಮಕ್ಕಳಿಗೆ ಬೈದು ಬುದ್ದಿ ಹೇಳಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಸದ್ಯ ದ್ವಿಸದಸ್ಯ ಪೀಠ ವಿಭಿನ್ನ ಅಭಿಪ್ರಾಯ ನೀಡಿದ್ದು ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಸಮಾನತೆಗೆ, ಸಂವಿಧಾನಕ್ಕೆ ಆದ್ಯತೆ ಕೊಡಬೇಕು. ಐದು ಅಥವಾ ಏಳು ಜನರ ನ್ಯಾಯಾಧೀಶರ ತೀರ್ಪು ಏನಾಗಲಿದೆ ಎಂಬುದು ನೋಡಬೇಕು ಎಂದರು.