ದೆಹಲಿಯಲ್ಲಿ ಡಿಕೆಶಿ: ರಕ್ಷಾ ರಾಮಯ್ಯ, ನಲ್ಪಾಡ್ ಸಂಧಾನಕ್ಕೆ ತಯಾರಿ!

By Suvarna NewsFirst Published Jun 22, 2021, 2:03 PM IST
Highlights

* ದೆಹಲಿಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್

* ರಾಹುಲ್ ಗಾಂಧಿಯನ್ನು ಭೇಟಿಯಾಗಿ ಚರ್ಚೆ ನಡೆಸಲಿರುವ ಕೆಪಿಸಿಸಿ ಅಧ್ಯಕ್ಷ

* ನಲಪಾಡ್‌ಗೆ ಮತ್ತೆ ಯುವ ಕಾಂಗ್ರೆಸ್‌ ಪಟ್ಟ:

ಬೆಂಗಳೂರು(ಜೂ.22): ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಭರ್ಜರಿ ಸರ್ಜರಿ ಮಾಡಲು ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಜ್ಜಾಗಿದ್ದು, ಈ ಸರ್ಜರಿಗೆ ಅನುಮೋದನೆ ಪಡೆಯಲು ಕೆಪಿಸಿಸಿ ಅಧ್ಯಕ್ಷರು ದೆಹಲಿಗೆ ಹಾರಿದ್ದಾರೆ. ಇಲ್ಲಿ ಕಾಂಗ್ರೆಸ್‌ ನಾಐಕ ರಾಹುಲ್ ಗಾಂಧಿಯನ್ನು ಭೇಟಿಯಾಗಿ ರಾಜ್ಯದ ರಾಜಕೀಯ ವಿದ್ಯಮಾನಗಳು, ಕಾಂಗ್ರೆಸ್ ಪಕ್ಷದ ವಿದ್ಯಮಾನಗಳು ಬಗ್ಗೆ ಚರ್ಚೆ ನಡೆಸಲಿದ್ದಾರೆ. ಡಿಕೆಶಿ ಇಂದು, ಮಂಗಳವಾರ ರಾಹುಲ್ ಗಾಂಧಿಯನ್ನು ಭೇಟಿಯಾಗಲಿದ್ದಾರೆನ್ನಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯ ರಾಜಕೀಯ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಾಗುತ್ತಿರುವ ವಿದ್ಯಮಾನಗಳು ಸೇರಿದಂತೆ ಪಕ್ಷ, ಸಂಘಟನೆಯ ಬಗ್ಗೆ ಡಿಕೆಶಿ ವರದಿ ನೀಡಲಿದ್ದಾರೆನ್ನಲಾಗಿದೆ. ಇದಾದ ಬಳಿಕ ಕರ್ನಾಟಕ ಉಸ್ತುವಾರಿ ಸುರ್ಜೇವಾಲಾ ಅವರನ್ನೂ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಒಟ್ಟಾರೆ ಮೂರ್ನಾಲ್ಕು ದಿನ ಡಿಕೆಶಿ ದೆಹಲಿಯಲ್ಲಿರಲಿದ್ದಾರೆ.

ಇದೇ ವೇಳೆ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದರೂ ತಮ್ಮ ವಿರುದ್ಧದ ಕೆಲ ಪ್ರಕರಣಗಳಿಂದಾಗಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಆಯ್ಕೆ ಊರ್ಜಿತಗೊಳಿಸುವಂತೆ ಹೈಕಮಾಂಡ್‌ಗೆ ಶಿವಕುಮಾರ್‌ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

ರಕ್ಷಾ ರಾಮಯ್ಯ- ನಲ್ಪಾಡ್ ಸಂಧಾನ ಸಭೆ ಹಿನ್ನಲೆ

ಯೂತ್ ಕಾಂಗ್ರೆಸ್‌ ನಾಯಕ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಾ ರಾಮಯ್ಯ ಹಾಗೂ ನಲ್ಪಾಡ್ ನಡುವೆ ಸಂಧಾನ ಸಭೆಯೂ ನಡೆಲಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಲ್ಪಾಡ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಈ ಸಭೆ ಇಂದು ಅಥವಾ ನಾಳೆ ಯುತ್ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲ್ಲವಾರು ನೇತೃತ್ವದಲ್ಲಿ ನಡೆಯಲಿದೆ. 

ಕಳೆದ ಜನವರಿಯಲ್ಲಿ ನಡೆದ ಯುವ ಕಾಂಗ್ರೆಸ್‌ ಚುನಾವಣೆಯಲ್ಲಿ ಮೊಹಮ್ಮದ್‌ ನಲಪಾಡ್‌ 64,203 ಮತ ಪಡೆದು ಮೊದಲ ಸ್ಥಾನ ಪಡೆದರೂ ಅವರ ಮೇಲಿನ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಫೌಂಡೇಷನ್‌ ಫಾರ್‌ ಅಡ್ವಾನ್ಸ್‌$್ಡ ಮ್ಯಾನೇಜ್‌ಮೆಂಡ್‌ ಆಫ್‌ ಎಲೆಕ್ಷಸ್ಸ್‌ ಸಮಿತಿಯು ಅವರ ಆಯ್ಕೆಯನ್ನು ಅನರ್ಹಗೊಳಿಸಿತ್ತು. ಹೀಗಾಗಿ ನಲಪಾಡ್‌ ನಂತರ ಅತಿ ಹೆಚ್ಚು ಮತ ಗಳಿಸಿದ್ದ ಮಾಜಿ ಸಚಿವ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು.

click me!