
ಬೆಂಗಳೂರು(ಜೂ.22): ‘ಮೋಡ ಸೂರ್ಯನನ್ನು ಮರೆ ಮಾಚಲು ಸಾಧ್ಯವೇ? ಮರೆ ಮಾಚಿದರೂ ಕೆಲಕಾಲ ಮಾತ್ರ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಿಗೂಢಾರ್ಥ ಸೂಚಿಸುವಂತೆ ಹೇಳಿದ್ದಾರೆ.
ಸೋಮವಾರ ಪಕ್ಷದ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಾತಿನ ಹಿಂದೆ ದುರುದ್ದೇಶವಿಲ್ಲ. ನನಗೆ ಯಾವುದೇ ಅಸಮಾಧಾನ ಇಲ್ಲ. ನಮಗೆ ಪಕ್ಷದ ಬೆಳವಣಿಗೆ ಹೊರತುಪಡಿಸಿ ಬೇರೆ ಯಾವುದೇ ಯೋಚನೆಯಿಲ್ಲ. ವೈಯಕ್ತಿಕ ಬೆಳವಣಿಗೆಗಾಗಿ ನಾವು ಪಕ್ಷವನ್ನು ತುಳಿಯಬೇಕು ಎಂಬ ಯೋಚನೆಯನ್ನು ಯಾವತ್ತೂ ಮಾಡಿಲ್ಲ ಎಂದರು.
ಪಕ್ಷ ಬೆಳವಣಿಗೆಯ ಜೊತೆಗೆ ನಾವು ಬೆಳೆಯಬೇಕು ಅಂತ ಆಸೆ ಪಡುತ್ತೇವೆ. ಪಕ್ಷ ಮುಗಿಸಿ ನಾವು ಬೆಳೆಯಬೇಕು ಅಂತಲ್ಲ. ನಾನು ಯಾವುದೇ ವಿಷಯವನ್ನು ಎತ್ತಿದ್ದರು ವಿಷಯಾಧಾರಿತವಾಗಿಯೇ ಹೊರತು ಪೂರ್ವಗ್ರಹದಿಂದಲ್ಲ. ಪ್ರೇಮದಿಂದಲ್ಲ. ನಾನು ಹೇಳಿದ್ದನ್ನು ಅವರವರು ಹೇಗೆ ಗ್ರಹಿಸುತ್ತಾರೋ ಹಾಗೆ. ಒಳ್ಳೆಯ ದೃಷ್ಟಿಯಿಂದ ಗ್ರಹಿಸಿದರೆ ಒಳ್ಳೆಯದು. ಕೆಟ್ಟದೃಷ್ಟಿಯಿಂದ ಗ್ರಹಿಸಿದರೆ ಕೆಟ್ಟದು. ನನ್ನ ಪ್ರತಿ ಮಾತಿನ ಉದ್ದೇಶ ಸದುದ್ದೇಶದಿಂದ ಕೂಡಿರುತ್ತದೆ. ಯಾವತ್ತೂ ದುರುದ್ದೇಶ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.