
ದೊಡ್ಡಬಳ್ಳಾಪುರ(ಜೂ.25): ಸಂಸದ ಬಿ.ಎನ್.ಬಚ್ಚೇಗೌಡರ ಜತೆ 20 ವರ್ಷಗಳ ಬಳಿಕ ವೇದಿಕೆ ಹಂಚಿಕೊಳ್ಳುತ್ತಿದ್ದೇನೆ. ಅವರನ್ನು ತಮ್ಮತ್ತ ಸೆಳೆಯಲು ಹಲವು ಬಾರಿ ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಆದರೆ ಅವರಿಗೆ ಹಾಕಿದ ಗಾಳಕ್ಕೆ ಮರಿ ಮೀನು(ಶರತ್ ಬಚ್ಚೇಗೌಡ) ಅವರಾದರೂ ಸಿಕ್ಕಿತಲ್ವಾ ಎಂದು ಸಂತೋಷ ಪಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇಲ್ಲಿನ ಬಮೂಲ್ ಘಟಕ ಮುಂಭಾಗದಲ್ಲಿ ಶುಕ್ರವಾರ ಬೃಹತ್ ಡೈರಿ ಮೇಳದ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಬಚ್ಚೇಗೌಡರದ್ದು ದೊಡ್ಡ ಜಮೀನ್ದಾರಿ ಕುಟುಂಬ. ನೂರಾರು ಎಕರೆ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದವರು ಅವರು. ಅವರನ್ನು ಕಾಂಗ್ರೆಸ್‌ಗೆ ಕರೆತರಲು ಎಸ್.ಎಂ.ಕೃಷ್ಣ ಹಾಗೂ ನಾನು ಸಾಕಷ್ಟು ಸಮಯದಿಂದ ಪ್ರಯತ್ನಪಟ್ಟಿದ್ದೆವು. ಆದರೆ ಅವರು ನನ್ನ ಗಾಳಕ್ಕೆ ಬೀಳಲಿಲ್ಲ. ಈಗ ಶರತ್ ಬಚ್ಚೇಗೌಡ ಅವರು ಬಂದಿರುವುದು ನಮ್ಮ ಗಾಳಕ್ಕೆಬಿದ್ದಿರುವುದು ಸಂತೋಷ ತಂದಿದೆ ಅಂತ ಹೇಳಿದ್ದಾರೆ.
ಸಚಿವ ಎಂಟಿಬಿ - ಶರತ್ ಬಚ್ಚೇಗೌಡ ವಾರ್ : 'ದರ್ಪದಿಂದ ಏನು ಆಗಲ್ಲ'
ಶರತ್ ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಂತ ಉತ್ಸಾಹಿ ಯುವ ನಾಯಕ. ಅವರು ನಮ್ಮ ಜಿಲ್ಲೆಯ ಆಸ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.