ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಹಿಂದೆ ಜಾರಕಿಹೊಳಿ ಕೈವಾಡ?

By Kannadaprabha News  |  First Published Jun 25, 2022, 9:54 AM IST

*   ಗೋಕಾಕ ಸಾಹುಕಾರ ಮಾಸ್ಟರ್‌ ಸ್ಟ್ರೋಕ್‌ಗೆ ಪತರಗುಟ್ಟಿದ ಶಿವಸೇನೆ
*   ಮಹಾರಾಷ್ಟ್ರದಲ್ಲೂ ಬಿಜೆಪಿ ಸರ್ಕಾರ ರಚನೆಗೆ ಕೈಹಾಕಿದ ಸಾಹುಕಾರ
*   ಮಹಾರಾಷ್ಟ್ರದಲ್ಲಿ ಸದ್ದಿಲ್ಲದೇ ಫೀಲ್ಡ್‌ಗಿಳಿದ ಸಾಹುಕಾರ ಎಂಬ ಬರಹದ ಪೋಸ್ಟ್‌ ವೈರಲ್‌ 


ಬೆಳಗಾವಿ(ಜೂ.25):  ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುತ್ತಿರುವ ನಡುವೆಯೇ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮುಂಬೈಗೆ ಪ್ರಯಾಣ ಬೆಳೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಏತನ್ಮಧ್ಯೆ, ರಮೇಶ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಮೇಶ ಜಾರಕಿಹೊಳಿ ಪರವಾಗಿ ಪೋಸ್ಟ್‌ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. 

‘ಸಾಹುಕಾರ ಮಾಸ್ಟರ್‌ ಸ್ಟ್ರೋಕ್‌ಗೆ ಪತರಗುಟ್ಟಿದ ಶಿವಸೇನೆ. ಮಹಾರಾಷ್ಟ್ರದಲ್ಲೂ ಬಿಜೆಪಿ ಸರ್ಕಾರ ರಚನೆಗೆ ಕೈಹಾಕಿದ ಸಾಹುಕಾರ. ಮಹಾರಾಷ್ಟ್ರದಲ್ಲಿ ಸದ್ದಿಲ್ಲದೇ ಫೀಲ್ಡ್‌ಗಿಳಿದ ಸಾಹುಕಾರ ಎಂಬ ಬರಹದ ಪೋಸ್ಟ್‌ ವೈರಲ್‌ ಆಗಿದೆ. ಮೂರು ದಿನಗಳ ಮಹಾರಾಷ್ಟ್ರ ಪ್ರವಾಸದಲ್ಲಿದ್ದ ರಮೇಶ ಜಾರಕಿಹೊಳಿ ಅವರು ರತ್ನಗಿರಿ, ಗಣಪತಿ ಪುಲೆ ದೇವಸ್ಥಾನ ಸೇರಿದಂತೆ ವಿವಿಧೆಡೆ ಸ್ನೇಹಿತನ ಜೊತೆಗಿದ್ದ ಫೋಟೋಗಳು ವೈರಲ್‌ ಆಗಿವೆ.

Tap to resize

Latest Videos

ಮುಂಬೈನಲ್ಲಿ ರಮೇಶ್‌ ಜಾರಕಿಹೊಳಿ: ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಸರ್ಕಾರ ತರ್ತಾರಾ ಗೋಕಾಕ ಸಾಹುಕಾರ? 

ಗುರುವಾರ ಬೆಂಗಳೂರಿಗೆ ಬಂದಿದ್ದ ರಮೇಶ ಜಾರಕಿಹೊಳಿ ಶುಕ್ರವಾರ ಮತ್ತೆ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಅಧಿಕಾರದ ಆಸೆಗೆ ಮಾತೃಭಾಷೆ ಅಸ್ಮಿತೆ, ಆದರ್ಶ ಕಟ್ಟಿಟ್ಟ ಶಿವಸೇನೆಗೆ ಇದೆಂಥಾ ಗತಿ!

ಮುಂಬೈ: ಮಹಾರಾಷ್ಟ್ರದಲ್ಲಿ ಬಂಡಾಯವೆದ್ದ ಏಕನಾಥ್ ಶಿಂಧೆ, ರೆಬಲ್ ಆದ ಬಳಿಕ ಮಾಡಿದ ಮೊದಲ ಟ್ವೀಟ್ ನಲ್ಲಿ ತಾವು ಬಾಳಾಸಾಹೇಬ್ ಅವರ ಸಿದ್ಧಾಂತವನ್ನು ನಂಬಿದ ಶಿವಸೈನಿಕರು. ಅಧಿಕಾರಕ್ಕಾಗಿ ನಮ್ಮತನವನ್ನು ನಾವೆಂದೂ ಕಳೆದುಕೊಳ್ಳೋದಿಲ್ಲ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಉದ್ಧವ್ ಠಾಕ್ರೆ  ಕೂಡ, ಬಾಳಾ ಠಾಕ್ರೆ ಇದ್ದ ಶಿವಸೇನೆಯೇ ಈಗಲೂ ಇದೆ ಎಂದಿದ್ದರು. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನದ ನಡುವೆ ಪ್ರತಿಬಾರಿಯೂ ಬಾಳಾ ಠಾಕ್ರೆ ಕಟ್ಟಿ ಬೆಳೆಸಿದ ಶಿವಸೇನೆಯ ಬಗ್ಗೆಯೇ ಮಾತುಗಳು ಬರುತ್ತಿವೆ.

60ರ ದಶಕದಲ್ಲಿ ಮುಂಬೈನ ದೊಡ್ಡ ಉದ್ಯಮವನ್ನು ಗುಜರಾತಿಗಳು ಆಕ್ರಮಿಸಿಕೊಂಡಿದ್ದರು. ಅದೇ ಸಮಯದಲ್ಲಿ, ಸಣ್ಣ ವ್ಯಾಪಾರದಲ್ಲಿ ದಕ್ಷಿಣ ಭಾರತೀಯರು ಮತ್ತು ಮುಸ್ಲಿಮರ ಪಾಲು ತುಂಬಾ ಹೆಚ್ಚಿತ್ತು. ಮರಾಠಿಗರ ಮೂಲ ನೆಲವಾದ ಮಹಾರಾಷ್ಟ್ರದಲ್ಲಿ ಅವರಿಗೆ ಕೆಲಸಗಳಿರಲಿಲ್ಲ. ಈ ವೇಳೆ ಆಶಾಕಿರಣವಾಗಿ ಬಂದಿದ್ದು ಬಾಳಾಸಾಹೇಬ್ ಠಾಕ್ರೆ ಇದೇ ವಿಚಾರವನ್ನು ಬಂಡವಾಳ ಮಾಡಿಕೊಂಡ ಬಾಳಾ ಠಾಕ್ರೆ 1966ರಲ್ಲಿ ಮರಾಠಿ ಮಾನುಸ್ ಬಗ್ಗೆ ಮಾತನಾಡುತ್ತಾ ಶಿವಸೇನೆಯನ್ನು  ಸ್ಥಾಪನೆ ಮಾಡಿದರು.

ತಂದೆ ಕಟ್ಟಿದ್ದ ಶಿವಸೈನ್ಯವೇ ಮಗನಿಗೆ ಮುಳುವಾಗಿದ್ದು ಏಕೆ?

ಆ ಸಮಯದಲ್ಲಿ ಮುಂಬೈನಲ್ಲಿ, ಮರಾಠಿಗರು ಜನಸಂಖ್ಯೆಯ ಸುಮಾರು ಶೇ.43ರಷ್ಟಿತ್ತು. ಆದರೆ ಅವರು ಬಾಲಿವುಡ್‌ನಿಂದ ವ್ಯಾಪಾರ ಮತ್ತು ಉದ್ಯೋಗಗಳವರೆಗೆ ಎಲ್ಲದರಲ್ಲೂ ಮರಾಠಿಗರ ಸಂಖ್ಯೆ ಕಡಿಮೆ ಇತ್ತು. ಮತ್ತೊಂದೆಡೆ, ಜನಸಂಖ್ಯೆಯ 14% ಹೊಂದಿರುವ ಗುಜರಾತಿಗಳು ಇಲ್ಲಿನ ದೊಡ್ಡ ಉದ್ಯಮಗಳ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದರು. ಸಣ್ಣ ವ್ಯಾಪಾರಗಳು ಮತ್ತು ಉದ್ಯೋಗಗಳಲ್ಲಿ ದಕ್ಷಿಣ ಭಾರತೀಯರು ಪ್ರಾಬಲ್ಯ ಹೊಂದಿದ್ದರು, ಅವರು ಜನಸಂಖ್ಯೆಯ 9% ರಷ್ಟಿದ್ದರು. 1966 ರ ಪ್ರಣಾಳಿಕೆಯಲ್ಲಿ ದಕ್ಷಿಣ ಭಾರತೀಯರು ಮರಾಠಿಗಳಿಂದ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದ ಠಾಕ್ರೆ, ಮರಾಠಿ ಮಾತನಾಡುವ ಸ್ಥಳೀಯ ಜನರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಅವರು ಆಂದೋಲನವನ್ನು ಪ್ರಾರಂಭಿಸಿದರು. ದಕ್ಷಿಣ ಭಾರತೀಯರ ವಿರುದ್ಧ 'ಪುಂಗಿ ಬಜಾವೋ ಔರ್ ಲುಂಗಿ ಹಟಾವೋ' ಅಭಿಯಾನವನ್ನು ಆರಂಭಿಸಿದ್ದರು. ಠಾಕ್ರೆ ತಮಿಳು ಭಾಷೆಯ ಬಗ್ಗೆ ಅಪಹಾಸ್ಯ ಮಾಡುತ್ತಾ ಅವರನ್ನು ‘ಯಂಡುಗುಂಡು’ ಎಂದು ಕರೆಯುತ್ತಿದ್ದರು.

1987ರಿಂದ ಹಿಂದುತ್ವ: 

1980ರ ವೇಳೆ ಮುಂಬೈ ಹಾಗೂ ಮಹಾರಾಷ್ಟ್ರದಲ್ಲಾಗುವ ಪ್ರತಿ ಸಮಸ್ಯೆಗಳಿಗೆ ಪರಿಹಾರ ಬಾಳಾ ಠಾಕ್ರೆಯಿಂದ ಮಾತ್ರ ಸಿಗುತ್ತಿತ್ತು. ಯುವಕರ ಪಾಲಿಗೆ ಗಾಡ್‌ ಫಾದರ್ ಎನಿಸಿಕೊಂಡ ಬಾಳಾ ಠಾಕ್ರೆ 1987ರ ಸಮಯದಲ್ಲಿ ಶಿವಸೇನೆಯ ಅಜೆಂಡಾದಲ್ಲಿ ಹಿಂದುತ್ವವನ್ನು ಸೇರಿಸಿಕೊಂಡು ಅದರಿಂದ ಲಾಭ ಪಡೆಯಲು ಆರಂಭಿಸಿದರು.  ಡಿಸೆಂಬರ್ 1987 ರಲ್ಲಿ ಮುಂಬೈನ ವಿಲೇಪಾರ್ಲೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ, ಶಿವಸೇನೆ ಹಿಂದುತ್ವದ ಕುರಿತಾಗಿ ಆಕ್ರಮಣಕಾರಿಯಾಗಿ ಪ್ರಚಾರ ಮಾಡಿತು. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ನಟರಾದ ಮಿಥುನ್ ಚಕ್ರವರ್ತಿ ಮತ್ತು ನಾನಾ ಪಾಟೇಕರ್ ಶಿವಸೇನೆಯ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಚುನಾವಣೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ಮತ ಯಾಚಿಸಿದ್ದ ಕಾರಣಕ್ಕೆ ಚುನಾವಣಾ ಆಯೋಗ 6 ವರ್ಷಗಳ ಕಾಲ ಠಾಕ್ರೆಯಿಂದ ಮತದಾನದ ಹಕ್ಕನ್ನು ಕಸಿದುಕೊಂಡಿತ್ತು. 2006 ರಲ್ಲಿ, ಶಿವಸೇನೆಯ 40 ನೇ ಸಂಸ್ಥಾಪನಾ ದಿನದಂದು, ಬಾಳ್ ಠಾಕ್ರೆ ಮುಸ್ಲಿಮರನ್ನು ದೇಶ ವಿರೋಧಿಗಳು ಎಂದು ಬಣ್ಣಿಸಿದ್ದರು. ಷಣ್ಮುಖಾನಂದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮುಸ್ಲಿಮರನ್ನು ‘ಹಸಿರು ವಿಷ’ ಎಂದು ಕರೆದಿದ್ದರು. 

ಬಾಳಾ ಸಾಹೇಬ್ ಇರುವ ಅಷ್ಟೂ ದಿನ ಮಹಾರಾಷ್ಟ್ರದ ರಾಜಕೀಯದಲ್ಲಿ ಶಿವಸೇನೆಯೇ ದೊಡ್ಡಣ್ಣನಾಗಿತ್ತು. 1989ರ ಲೋಕಸಭೆ ಚುನಾವಣೆಗೂ ಮುನ್ನ ಮೊದಲ ಬಾರಿಗೆ ಹಿಂದುತ್ವದ ನೆರಳಿನಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಮೈತ್ರಿ ಏರ್ಪಟ್ಟಿತ್ತು. 1990ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ 183 ಸ್ಥಾನಗಳಲ್ಲಿ ಸ್ಪರ್ಧಿಸಿ 52ರಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 104 ಸ್ಥಾನಗಳಲ್ಲಿ ಸ್ಪರ್ಧಿಸಿ 42ರಲ್ಲಿ ಗೆಲುವು ಸಾಧಿಸಿತ್ತು. ಆಗ ಶಿವಸೇನೆಯ ಮನೋಹರ ಜೋಶಿ ವಿರೋಧ ಪಕ್ಷದ ನಾಯಕರಾದರು. 1995ರಲ್ಲಿ ಬಿಜೆಪಿ-ಶಿವಸೇನೆ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಶಿವಸೇನೆ 73, ಬಿಜೆಪಿ 65 ಸ್ಥಾನಗಳನ್ನು ಗೆದ್ದಿವೆ. ಬಾಳಾಸಾಹೇಬ್ ಠಾಕ್ರೆ ಯಾವ ಪಕ್ಷ ಹೆಚ್ಚು ಸ್ಥಾನ ಪಡೆಯುತ್ತದೋ ಅವರೇ ಮುಖ್ಯಮಂತ್ರಿ ಎಂಬ ಸೂತ್ರವನ್ನು ನೀಡಿದ್ದರು. ಇದರ ಆಧಾರದ ಮೇಲೆ ಮನೋಹರ್ ಜೋಶಿ ಅವರಿಗೆ ಸಿಎಂ ಕುರ್ಚಿ ಹಾಗೂ ಬಿಜೆಪಿಯ ಗೋಪಿನಾಥ್ ಮುಂಡೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಲಭಿಸಿತ್ತು.
 

click me!