‘ಡ್ಯಾಂ ಕೀ’ ಶೆಟ್ಟರ್‌, ಸವದಿ ಕೈಯಲ್ಲಿತ್ತು: ಡಿ.ಕೆ.ಶಿವಕುಮಾರ್‌

By Kannadaprabha News  |  First Published Apr 24, 2023, 12:00 AM IST

ಹಿಂದುತ್ವ ಯಾರ ಮನೆಯ ಆಸ್ತಿಯೂ ಅಲ್ಲ. ನಾನು ಶಿವಕುಮಾರ್‌, ನಾನು ಹಿಂದು, ಸಿದ್ದರಾಮಯ್ಯನವರೂ ಹಿಂದು. ಕಳೆದೊಂದು ದಿನದಿಂದ ಧರ್ಮಸ್ಥಳ, ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿ ಬಂದಿದ್ದೇನೆ. ಈ ಸಮಾವೇಶ ಮುಗಿದ ಬಳಿಕ ಕೊಲ್ಲೂರಿಗೆ ತೆರಳಿ ನಿಮಗೆಲ್ಲರಿಗೂ ಶಕ್ತಿ ಕೊಡಬೇಕು ಎಂದು ತಾಯಿಯಲ್ಲಿ ಪ್ರಾರ್ಥಿಸುವೆ ಎಂದ ಡಿ.ಕೆ.ಶಿವಕುಮಾರ್‌. 


ಕುಂದಾಪುರ(ಏ.24):  ನಾನು ಡ್ಯಾಂ ಒಡೆದು ಹೋಯಿತು ಅಂದಿದ್ದೆ. ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಾಂಗ್ರೆಸ್‌ನಲ್ಲಿ ನೀರೇ ಇಲ್ಲ, ಇನ್ನೆಲ್ಲಿ ಡ್ಯಾಂ ಎಂದಿದ್ದರು. ಆದರೆ ನಾನು ಹೇಳಿದ್ದು, ನಿಮ್ಮ ಬಿಜೆಪಿ ಡ್ಯಾಂ ಒಡೆದು ನೀರು ಖಾಲಿಯಾಗಿದೆ ಎಂದು. ಡ್ಯಾಂ ಕೀ ಶೆಟ್ಟರ್‌, ಲಕ್ಷ್ಮಣ್‌ ಸವದಿಯಂಥವರ ಕೈಯಲ್ಲಿ ಕೊಟ್ಟಿದ್ದರು. ಆದರೆ ರಾಜ್ಯದ ಬಿಜೆಪಿಯ ಭ್ರಷ್ಟಆಡಳಿತಕ್ಕೆ ಬೇಸತ್ತು ಅವರೆಲ್ಲ ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಭಾನುವಾರ ಬೈಂದೂರಿನ ಯಡ್ತರೆಯ ಜೆಎನ್‌ಆರ್‌ ಕಲಾ ಮಂದಿರದಲ್ಲಿ ನಡೆದ ಬೈಂದೂರು ಹಾಗೂ ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶದಲ್ಲಿ ಮಾತನಾಡಿದರು. ಹಿಂದುತ್ವ ಯಾರ ಮನೆಯ ಆಸ್ತಿಯೂ ಅಲ್ಲ. ನಾನು ಶಿವಕುಮಾರ್‌, ನಾನು ಹಿಂದು, ಸಿದ್ದರಾಮಯ್ಯನವರೂ ಹಿಂದು. ಕಳೆದೊಂದು ದಿನದಿಂದ ಧರ್ಮಸ್ಥಳ, ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿ ಬಂದಿದ್ದೇನೆ. ಈ ಸಮಾವೇಶ ಮುಗಿದ ಬಳಿಕ ಕೊಲ್ಲೂರಿಗೆ ತೆರಳಿ ನಿಮಗೆಲ್ಲರಿಗೂ ಶಕ್ತಿ ಕೊಡಬೇಕು ಎಂದು ತಾಯಿಯಲ್ಲಿ ಪ್ರಾರ್ಥಿಸುವೆ ಎಂದರು.

Latest Videos

undefined

ಕಾರ್ಯಕರ್ತರ ಸ್ಫೂರ್ತಿ, ದೇವರ ಅನುಗ್ರಹದಿಂದ ಕಾಂಗ್ರೆಸ್‌ ಗೆ 141ಸ್ಥಾನಗಳಲ್ಲಿ ಗೆಲುವು

ಮನೆ ಹಿರಿಯ ಸದಸ್ಯರನ್ನು ವಯಸ್ಸಿನ ಕಾರಣ ನೀಡಿ ಮನೆಯಿಂದ ಹೊರಹಾಕಲು ಸಾಧ್ಯವಿದೆಯಾ? ಯಾರಿಗೆ ಎಷ್ಟುಗೌರವ ಕೊಡಬೇಕೋ ಅದನ್ನು ಕೊಡಲೇಬೇಕು. ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ಮತದಾರರೇ ಈಶ್ವರ ಎಂದರು.

ವರುಣಕ್ಕೂ ಹೋಗಿ ಪ್ರಚಾರ ಮಾಡುತ್ತೇನೆ: ಡಿಕೆಶಿ

ಶೃಂಗೇರಿ: ವರುಣ ಕ್ಷೇತ್ರಕ್ಕೆ ಹೋಗಿ ಅಲ್ಲಿ ಚುನಾವಣಾ ಪ್ರಚಾರ ಮಾಡುತ್ತೇನೆ. ಯಾವುದೇ ರೀತಿಯ ಟೈಂ ಫಿಕ್ಸ್‌ ಇಲ್ಲ. ವರುಣ ಮಾತ್ರವಲ್ಲ, ಎಲ್ಲಿ ಕರೆದರೂ ಅಲ್ಲಿ ಹೋಗಿ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಮುಖ್ಯ ಗುರಿ. ಬಿಜೆಪಿಯವರು ಯಡಿಯೂರಪ್ಪನವರನ್ನು ಅಧಿಕಾರದಿಂದ ತೆಗೆದು ಹಾಕಿದರು. ಅವರ ಕಣ್ಣಲ್ಲಿ ನೀರು ಹಾಕಿಸಿದರು. ಪಕ್ಷ ಕಟ್ಟುವಾಗ ಬಳಸಿಕೊಂಡರು. ಬೇಡವಾದಾಗ ಮೂಲೆಗುಂಪು ಮಾಡಿದರು. ಪಕ್ಷ ಕಟ್ಟಿದವರು, ಪಕ್ಷಕ್ಕಾಗಿ ದುಡಿದವರನ್ನೆಲ್ಲ ಮೂಲೆಗುಂಪು ಮಾಡಿದರು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!