
ಬೆಂಗಳೂರು, (ಜೂನ್.06): ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ವಿಚಾರ ಚರ್ಚೆಯಾಗುತ್ತಿದೆ. ಇಂದು (ಭಾನುವಾರ) ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆ ಕುರಿತು ಮಾತನಾಡಿರೋದು ಅಚ್ಚರಿ ಮೂಡಿಸಿದೆ.
ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುಲಭವಲ್ಲ. ಸರ್ಕಾರ ಸಂಪೂರ್ಣ ವೈಫಲ್ಯ ಆಗಿದೆ. ಮುಖ್ಯಮಂತ್ರಿಗಳು ಬಹಳ ಗಟ್ಟಿಯಾಗಿದ್ದಾರೆ. ಸಾಮಾನ್ಯವಾಗಿ ಅವರು ಅಧಿಕಾರ ಬಿಟ್ಟುಕೊಡಲ್ಲ. ಇದೆಲ್ಲ ಮೇಲ್ನೋಟಕ್ಕೆ ನಡೆಯುತ್ತಿರುವ ನಾಟಕ ಎಂದರು.
'ರಾಜೀನಾಮೆ ನೀಡಲು ಯಡಿಯೂರಪ್ಪಗೆ RSS ಮನವೊಲಿಸಿದೆ'
ಸಿಎಂ ಬದಲಾವಣೆಯದ್ದು ಏನೇನು ಕತೆ ನನಗೆ ಗೊತ್ತಿಲ್ಲ, ಯಡಿಯೂರಪ್ಪನವರ ಲೀಡರ್ಶಿಪ್ನಲ್ಲಿ ಚುನಾವಣೆ ನಡೆದಿದೆ. ಮೊನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ 'ಯಡಿಯೂರಪ್ಪನವರೇ ಇನ್ನೆರಡು ವರ್ಷ ಸಿಎಂ' ಅಂತ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಅವರ ಪಕ್ಷದ ಆಂತರಿಕ ವಿಚಾರ ಎಂದು ಹೇಳಿದರು.
ಒಟ್ನಲ್ಲಿ ಅವರ ಪಕ್ಷದಲ್ಲಿ ಶಾಸಕರ ನಡುವೆಯೂ ಭಿನ್ನಾಭಿಪ್ರಾಯ, ಸಚಿವರ ನಡುವೆ ಭಿನ್ನಾಭಿಪ್ರಾಯ, ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ. ಹೀಗೆ ಎಲ್ಲರ ಭಿನ್ನಾಭಿಪ್ರಾಯದಿಂದ ಆಡಳಿತ ಕುಸಿದಿದೆ. ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಸುಲಭವಂತೂ ಅಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದ್ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.