ಜೆಡಿಎಸ್ ನಾಯಕರನ್ನು ಸೆಳೆಯಲು ಡಿಕೆಶಿ ಪ್ಲಾನ್: ತಂದೆ ಆರೋಗ್ಯ ವಿಚಾರಿಸುವ ನೆಪದಲ್ಲಿ ಪುತ್ರನಿಗೆ ಗಾಳ

By Suvarna News  |  First Published Sep 26, 2021, 7:14 PM IST

* ಮತ್ತಿಬ್ಬರು ಜೆಡಿಎಸ್ ನಾಯಕರನ್ನು ಸೆಳೆಯಲು ಡಿಕೆಶಿ ಪ್ಲಾನ್
* ತಂದೆ ಆರೋಗ್ಯ ವಿಚಾರಿಸುವ ನೆಪದಲ್ಲಿ ಪುತ್ರನಿಗೆ ಗಾಳ
* ಈ ಬಗ್ಗೆ ಒಂದು ಸುತ್ತಿನ ಮಾತುಕತೆ ಅಂತ್ಯ


ಬೆಂಗಳೂರು, (ಸೆ.26): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK SHivakumar) ಅವರು ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಹೌದು... ಗೆಲ್ಲುವ ಕ್ಷೇತ್ರಗಳಲ್ಲಿ ಪಕ್ಷ ಬಿಟ್ಟು ಹೋದ ನಾಯಕರುಗಳನ್ನ ವಾಪಸ್ ಪಕ್ಷಕ್ಕೆ ತರೆತರುವುದಕ್ಕೆ ಡಿಕೆಶಿ ಚಾಲನೆ ಕೊಟ್ಟಿದ್ದಾರೆ. ಇದಕ್ಕೆ ಪೂರಕವೆಂಬಂತೆ ಈಗಾಗಲೇ ಜೆಡಿಎಸ್‌ನ (JDS) ಕೆಲ ಶಾಸಕರುಗಳಿಗೆ ಗಾಳಿ ಹಾಕಿದ್ದಾರೆ. ಅದರ ಮುಂದುವರೆದ ಭಾಗವಾಗಿ ಕೊಪ್ಪಳದ (Koppal) ಇಬ್ಬರು ಜೆಡಿಎಸ್ ನಾಯಕರನ್ನು ಸೆಳೆಯಲು ಹೊಸ ತಂತ್ರ ರೂಪಿಸಿದ್ದಾರೆ.

Tap to resize

Latest Videos

 ಆಪರೇಷನ್ ಹಸ್ತ: ಕಾಂಗ್ರೆಸ್ ಕಣ್ಣಿಟ್ಟಿರುವ ಬಿಜೆಪಿ, ಜೆಡಿಎಸ್ ಶಾಸಕರು ಯಾರು-ಯಾರು..?

ಕೊಪ್ಪಳದ ಮಾಜಿ ಸಂಸದ ಎಚ್.ಜಿ ರಾಮುಲು ಅವರ ಬೆಂಗಳೂರು ನಿವಾಸದಲ್ಲೇ ಡಿ.ಕೆ ಶಿವಕುಮಾರ್​​ ಭೇಟಿ ಅವರ ಆರೋಗ್ಯ ವಿಚಾರಿಸಿದರು. ಈ ಮೂಲಕ ತಂದೆ ಆರೋಗ್ಯ ವಿಚಾರಣೆ ನೆಪದಲ್ಲಿ ಎಚ್.ಜಿ ರಾಮುಲು ಪುತ್ರ ಎಚ್‌.ಆರ್ ಶ್ರೀನಾಥ್  ಅವರಬ್ಬ ಕಾಂಗ್ರೆಸ್‌ಗೆ ಬರಮಾಡಿಕೊಳ್ಳುವ ಸ್ಕೆಚ್ ಹಾಕಿದ್ದಾರೆ.

ಯೆಸ್.. ಎಚ್.ಜಿ ರಾಮುಲು ಪುತ್ರ ಜೆಡಿಎಸ್ ನಾಯಕರಾದ ಎಚ್‌.ಆರ್ ಶ್ರೀನಾಥ್ ಹಾಗೂ ಕರಿಯಣ್ಣ ಸಂಗಟಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಈ ಇಬ್ಬರು ನಾಯಕರು ಸಕರಾತ್ಮಕ ಮಾತುಗಳನ್ನಾಡಿದ್ದಾರೆ ಎಂದು ತಿಳಿದುಬಂದಿದೆ.

ಎಚ್.ಜಿ ರಾಮುಲು‌ ಪುತ್ರ ಎಚ್‌.ಆರ್ ಶ್ರೀನಾಥ್ ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್​ ಸೇರಿದ್ದರು. ಸದ್ಯ ಶ್ರೀನಾಥ್​​ ಜೆಡಿಎಸ್​​ ರಾಜ್ಯ ಉಪಾಧ್ಯಕ್ಷರು. ಕರಿಯಣ್ಣ ಸಂಗಟಿ ಗಂಗಾವತಿ ಜೆಡಿಎಸ್ ​​ಅಭ್ಯರ್ಥಿಯಾಗಿದ್ದರು. ಇದೀಗ ಇವರಿಬ್ಬರನ್ನು ಸೆಳೆಯಲು ಡಿಕೆಶಿ ಪ್ಲಾನ್ ಮಾಡಿದ್ದಾರೆ.

click me!