ಮೋದಿ ನಾಯಕತ್ವವನ್ನು ಇಡೀ ಪ್ರಪಂಚವೇ ಮೆಚ್ಚಿದೆ: ಬಿಜೆಪಿ ಸಂಸದ ಸಂಗಣ್ಣ ಕರಡಿ

By Kannadaprabha News  |  First Published Jul 16, 2023, 9:15 PM IST

ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ 9 ವರ್ಷದ ಸಾಧನೆ ಮನೆ ಮನೆಗೆ ತಲುಪಿಸೋಣ ಒಂದೇ ಒಂದು ಕಪ್ಪು ಚುಕ್ಕೆ ಇಲದೇ ಸರ್ಕಾರ ನಡೆಸಿದ್ದಾರೆ. ಮೋದಿಯವರ ಕಾರ್ಯ ವೈಖರಿ ನಾವೆಲ್ಲರೂ ಮೆಲುಕು ಹಾಕಿಕೊಳ್ಳುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸಿ: ಕೊಪ್ಪಳ ಸಂಸದ ಸಂಗಣ್ಣ ಕರಡಿ 


ಮಸ್ಕಿ(ಜು.16):  ಭಾರತ ವಿಶ್ವದಲ್ಲಿಯೇ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅಭಿವೃದ್ಧಿಯಲ್ಲಿ ಮೂಂಚೂಣಿಯಲ್ಲಿ ಸಾಗಿದೆ. ಇದರಿಂದ ಇಡಿ ಪ್ರಪಂಚವೇ ಅವರ ನಾಯಕತ್ವವನ್ನು ಮೆಚ್ಚಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ 9 ವರ್ಷದ ಸಾಧನೆ ಮನೆ ಮನೆಗೆ ತಲುಪಿಸೋಣ ಒಂದೇ ಒಂದು ಕಪ್ಪು ಚುಕ್ಕೆ ಇಲದೇ ಸರ್ಕಾರ ನಡೆಸಿದ್ದಾರೆ. ಮೋದಿಯವರ ಕಾರ್ಯ ವೈಖರಿ ನಾವೆಲ್ಲರೂ ಮೆಲುಕು ಹಾಕಿಕೊಳ್ಳುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸಿ. ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಸರಿಯಾಗಿ ಹಣ ಮೀಸಲು ಇಟ್ಟಿಲ್ಲ. ಕಾಂಗ್ರೆಸ್‌ನವರು ಒಂದು ಕಡೆ ಕೊಟ್ಟು ಮತ್ತೊಂದು ಕಡೆ ಜನರ ಮೇಲೆ ಬರೆ ಬಿಸಿದ್ದಾರೆ. ಸರ್ಕಾರ ಬರಗಾಲದ ಬಗ್ಗೆ ಮಾತಾಡುತ್ತಿಲ್ಲ ಬರಿ ಗ್ಯಾರಂಟಿಯಲ್ಲಿ ಕಾಲಹರಣ ಮಾಡುತ್ತಿದೆ. ಆದ್ದರಿಂದ ಕೂಡಲೇ ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ರೈತರ ನೆರವಿಗೆ ಬರಬೇಕು ಎಂದು ಅಗ್ರಹಿಸಿದರು. ಈ ಸಂದ​ರ್ಭ​ದಲ್ಲಿ ಪಕ್ಷದ ಮುಖಂಡ​ರು,​ಕಾ​ರ್ಯ​ಕ​ರ್ತ​ರು,​ಸಾ​ರ್ವ​ಜ​ನಿ​ಕರು ಇದ್ದ​ರು.

Latest Videos

undefined

ಕಲಬುರಗಿ ಹಸಿರೀಕರಣಕ್ಕೆ ಹೆಚ್ಚು ಕೆಲ್ಸ ಮಾಡಿ: ಖಂಡ್ರೆ ಕರೆ

ಸಂಸದರ ವಿರುದ್ಧ ಆಕ್ರೋಶ

ಮಸ್ಕಿ ಕ್ಷೇತ್ರದ ಹಳ್ಳಿಗಳಿಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿಯವರ ಕೊಡುಗೆ ಏನು ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದರು. ಮಸ್ಕಿ ಕ್ಷೇತ್ರದ ಹಳ್ಳಿಗಳಿಗೆ ನೀವು ಸಂಸದರಾದ ನಂತರ ಏನು ಅಭಿವೃದ್ಧಿ ಕಾರ್ಯಗಳು ಮಾಡಿದ್ದಿರಿ? ಕ್ಷೇತ್ರದಲ್ಲಿ ಪಕ್ಷ ಸಂಘಟನೆಗಾಗಿ ಎಷ್ಟುಬಾರಿ ಇಲ್ಲಿನ ಕಾರ್ಯಕರ್ತರ ಜೊತೆಗೆ ಸಭೆ ನಡೆಸಿದ್ದೀರಿ? ಪಕ್ಷದ ಕಾರ್ಯಕ್ಕಾಗಿ ನಿಮಗೆ ಎಷ್ಟುಬಾರಿ ಕರೆ ಮಾಡಿದರೂ ನೀವು ಸ್ಪಂದನೆ ಮಾಡಿಲ್ಲ. ಹೀಗೆ ಆದರೆ ನಾವೂ ಹಳ್ಳಿಯಲ್ಲಿ ಮತ ಹೇಗೆ ಕೇಳೋಣ ಎಂದು ಸುಧಾಕರ ಹಾಗೂ ಶರಣಬಸವ ಹರವಿ ಸೇರಿದಂತೆ ಇತರ ಕಾರ್ಯಕರ್ತರು ಸಭೆಯಲ್ಲಿ ಪ್ರಶ್ನೆ ಮಾಡಿದರು.

ಕಳೆದ 35 ವರ್ಷಗಳಿಂದ ಬಿಜೆಪಿ ಪಕ್ಷ ಸಂಘಟನೆಗಾಗಿ ನಿಷ್ಠಾವಂತರಾಗಿ ದುಡಿದ ಕಾರ್ಯಕರ್ತರನ್ನೇ ಕಡೆಗಣಿಸಿದ್ದೀರಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವೂ ಸ್ವತಃ ಐವತ್ತು ಸಾವಿರ ಹಣ ಖರ್ಚು ಮಾಡಿಕೊಂಡು ಚುನಾವಣೆ ಮಾಡಿದ್ದೇವೆ, ಆದರೆ ನಿಮ್ಮನ್ನು ಸೋಲಿಸಿದವರಿಗೆ ದುಡ್ಡು ಕೊಟ್ಟಿದ್ದೀರಿ ಎಂದು ಹಿರಿಯ ಬಿಜೆಪಿ ಮುಖಂಡ ಮಲ್ಲಪ್ಪ ಅಂಕುಶದೊಡ್ಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಭೆಯಲ್ಲಿ ಜರುಗಿತು.

click me!