ಬೆಳಗಾವಿ ಲೋಕಸಭೆ ಅಭ್ಯರ್ಥಿ ಯಾರು ಅಂತ ತೆಲೆಕೆಡಿಸಿಕೊಳ್ಳಬೇಡಿ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತೆ ಅವರ ಆಯ್ಕೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ: ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ
ಗೋಕಾಕ(ಜು.16): ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಸುಳ್ಳು ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದು, ಈ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ನಗರದ ಹೊರವಲಯದಲ್ಲಿರುವ ಪ್ರಿಯದರ್ಶಿನಿ ಸಭಾ ಭವನದಲ್ಲಿ ಬಿಜೆಪಿ ಗೋಕಾಕ ನಗರ ಮತ್ತು ಗ್ರಾಮೀಣ ಮಂಡಲಗಳ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರಿಗೆ ಗ್ಯಾರಂಟಿ ಭರವಸೆ ನೀಡಿ ಸರಿಯಾಗಿ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿಲ್ಲ. ತನ್ನ ತಾಯಿ ಪ್ರೀತಿಸುವ ಪ್ರಧಾನಿ ನಮಗೆ ಬೇಡ. ತನ್ನ ತಾಯಿಯ ಜೊತೆಗೆ ದೇಶವನ್ನು ಪ್ರೀತಿಸುವ ಪ್ರಧಾನಿ ನರೇಂದ್ರ ಮೋದಿ ನಮಗೆ ಬೇಕು. ಹೀಗಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರು ಬರುವ ಚುನಾವಣೆಯ ಒಳಗಾಗಿ ಮೋದಿಯವರ ಅಭಿವೃದ್ಧಿ ಪರ ಯೋಜನೆಗಳನ್ನು ಜನರ ಮನೆ ಮನಗಳಿಗೆ ತಲುಪಿಸುವ ಕಾರ್ಯ ಮಾಡಬೇಕು. ಬೆಳಗಾವಿ ಲೋಕಸಭೆ ಅಭ್ಯರ್ಥಿ ಯಾರು ಅಂತ ತೆಲೆಕೆಡಿಸಿಕೊಳ್ಳಬೇಡಿ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತೆ ಅವರ ಆಯ್ಕೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ತಿಳಿಸಿದರು.
undefined
ಬ್ಯಾಂಕ್ ಖಾತೆ ಇದ್ದರಷ್ಟೇ ಅಕ್ಕಿ ಹಣ ಗ್ಯಾರಂಟಿ..!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರದಲ್ಲಿ ಸಿದ್ದರಾಮಯ್ಯ, ಡಿಕೆಶಿ, ಹೆಬ್ಬಾಳಕರ ಆಟ ನಡೆಯಲಿಲ್ಲ. ಇಲ್ಲಿ ಏನಿದ್ದರೂ ಜಾರಕಿಹೊಳಿ ಸಹೋದರರ ಆಟ. ಹೀಗಾಗಿ ಜಾರಕಿಹೊಳಿ ಸಹೋದರರನ್ನು ಇಲ್ಲಿಯ ಜನ ಅತಿ ಹೆಚ್ಚಿನ ಲೀಡ್‌ನಲ್ಲಿ ಗೆಲ್ಲಿಸಿದ್ದಾರೆ. ಗೋಕಾಕ ಮತ್ತು ಅರಭಾವಿ ಮತಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಲೀಡ್ ಬರಲಿದ್ದು ಹೀಗಾಗಿ ಬೆಳಗಾವಿ ಬಿಜೆಪಿ ಅಭ್ಯರ್ಥಿ ಆಯ್ಕೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ, ವಿಭಾಗ ಸಂಘಟನಾ ಪ್ರ.ಕಾರ್ಯದರ್ಶಿ ಜಯಪ್ರಕಾಶ ಎಂ.ಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಚಿಡೆ, ಸುಭಾಸ ಪಾಟೀಲ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಹಿಂದುಳಿದ ವರ್ಗಗಳ ರಾಷ್ಟ್ರೀಯ ಕಾರ‍್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಮುಖಂಡರುಗಳಾದ ಮಲ್ಲಿಕಾರ್ಜುನ ಮಾದಮ್ಮನವರ, ಶಫಿ ಜಮಾದಾರ, ಬಸವರಾಜ ಹಿರೇಮಠ, ಜ್ಯೋತಿ ಕೊಲ್ಹಾರ, ತವನರಾಜ ಬೆನ್ನಾಡಿ, ಎಫ್.ಎಸ್.ಸಿದ್ದನಗೌಡರ ಇದ್ದರು.
ಬೆಳಗಾವಿ ಜೈಲಿಂದಲೇ ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಕರೆ: ಬೆದರಿಕೆ ಹಿಂದಿದೆ ಲಷ್ಕರ್ ಉಗ್ರರ ನಂಟು!
ರಾಜೇಶ್ವರಿ ಒಡೆಯರ ಸ್ವಾಗತಿಸಿದರು. ಶಶಿಧರ ದೇಮಶೆಟ್ಟಿನಿರೂಪಿಸಿದರು. ಪುಂಡಲೀಕ ವಣ್ಣೂರ ವಂದಿಸಿದರು.
ಅಭಿಯಾನ ಕರ ಪತ್ರ ಹಂಚಿಕೆಗೆ ಸಂಜಯ ಚಾಲನೆ
ಗೋಕಾಕ: ಕೇಂದ್ರ ಸರ್ಕಾರದ 9 ವರ್ಷ ಸೇವೆ, ಸುಶಾಸನ, ಬಡವರ ಕಲ್ಯಾಣ ಮಹಾ ಸಂಪರ್ಕ ಅಭಿಯಾನ ಕರ ಪತ್ರ ಹಂಚಿಕೆ ಕಾರ್ಯಕ್ರಮಕ್ಕೆ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶಫಿ ಜಮಾದಾರ, ಸುರೇಶ ಸನದಿ, ಅಬ್ಬಾಸ್ ದೇಸಾಯಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.